For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಜೆಫ್ ಬೆಜೋಸ್

|

ಅಮೆಜಾನ್.ಕಾಮ್ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ, ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದು, ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ. ಕಂಪೆನಿಯು ಸತತವಾಗಿ ದಾಖಲೆಯ ಲಾಭವನ್ನು ವರದಿ ಮಾಡಿದ್ದು, ಮೂರನೇ ತ್ರೈಮಾಸಿಕದಲ್ಲಿ ಮಾರಾಟವು ಇದೇ ಮೊದಲ ಬಾರಿಗೆ $ 100 ಬಿಲಿಯನ್ ದಾಟಿದೆ.

 

ಸದ್ಯಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಮುಖ್ಯಸ್ಥ ಆಗಿರುವ ಆಂಡಿ ಜಸ್ಸಿ ಅಮೆಜಾನ್ ಗೆ ಮುಂದಿನ ಸಿಇಒ ಆಗಲಿದ್ದಾರೆ. ರಜಾ ದಿನದ ಖರೀದಿಗೆ ಗ್ರಾಹಕರು ಆನ್ ಲೈನ್ ನೆಡೆಗೆ ಮುಖ ಮಾಡಿದ್ದರಿಂದ ನಿವ್ವಳ ಮಾರಾಟವು $ 125.56 ಬಿಲಿಯನ್ ಆಗಿದೆ. ಫಲಿತಾಂಶ ಪ್ರಕಟಣೆಗೆ ಮುನ್ನ ತಜ್ಞರು $ 119.7 ಬಿಲಿಯನ್ ಲಾಭದ ಅಂದಾಜು ಮಾಡಿದ್ದರು. ಆ ನಿರೀಕ್ಷೆಗೂ ಮೀರಿ ಅಮೆಜಾನ್ ಲಾಭ ದಾಖಲಿಸಿದೆ.

 

300 ಕೋಟಿ USD ಮೌಲ್ಯದ ಷೇರು ಮಾರಿಕೊಂಡ ಜಗತ್ತಿನ ನಂಬರ್ ಒನ್ ಶ್ರೀಮಂತ300 ಕೋಟಿ USD ಮೌಲ್ಯದ ಷೇರು ಮಾರಿಕೊಂಡ ಜಗತ್ತಿನ ನಂಬರ್ ಒನ್ ಶ್ರೀಮಂತ

ಇಪ್ಪತ್ತೇಳು ವರ್ಷದ ಹಿಂದೆ ಅಮೆಜಾನ್ ಅನ್ನು ಇಂಟರ್ ನೆಟ್ ಪುಸ್ತಕ ಮಾರಾಟ ಕಂಪೆನಿಯಾಗಿ ಆರಂಭಿಸಿದವರು ಜೆಫ್ ಬೆಜೋಸ್. ಕಾರ್ಯ ನಿರ್ವಾಹಕ ಹುದ್ದೆಯಲ್ಲಿ ಅಮೆಜಾನ್ ನ ಪ್ರಮುಖ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಸಮಯ ಮತ್ತು ಸಾಮರ್ಥ್ಯದೊಂದಿಗೆ ಡೇ 1 ಫಂಡ್, ಬೆಜೋಸ್ ಅರ್ಥ್ ಫಂಡ್, ಬ್ಲ್ಯೂ ಆರಿಜಿನ್, ದ ವಾಷಿಂಗ್ಟನ್ ಪೋಸ್ಟ್ ಮತ್ತು ಇತರ ಆಸಕ್ತಿಗಳ ಕಡೆಗೂ ಗಮನ ಕೇಂದ್ರೀಕರಿಸಬೇಕು. ಇದು ನಿವೃತ್ತಿಯಲ್ಲ ಎಂದು ಬೆಜೋಸ್ ಹೇಳಿದ್ದಾರೆ.

ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಜೆಫ್ ಬೆಜೋಸ್

ಜಸ್ಸಿ ಅಮೆಜಾನ್ ಗೆ ಸೇರ್ಪಡೆಯಾಗಿದ್ದು 1997ರಲ್ಲಿ. ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಎಂಬಿಎ ಮಾಡಿದ್ದಾರೆ. ಅಮೆಜಾನ್ ವೆಬ್ ಸರ್ವೀಸಸ್ (AWS) ಆರಂಭಿಸಿದವರೇ ಅವರು. ಆ ನಂತರ ಕ್ಲೌಡ್ ಪ್ಲಾಟ್ ಫಾರ್ಮ್ ಆಗಿ ಬೆಳೆಸಿ, ಹತ್ತಾರು ಲಕ್ಷ ಜನ ಬಳಸುವಂತೆ ಮಾಡಿದರು.

ಅಮೆಜಾನ್ ಭವಿಷ್ಯದಲ್ಲಿ ವೆಬ್ ಸರ್ವೀಸಸ್ ಪಾತ್ರ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಜಸ್ಸಿ ಬಡ್ತಿಯೇ ಉದಾಹರಣೆ ಎಂದು ಕಂಪೆನಿಯ ಸಿಟಿಒ ಟಾಮ್ ಜಾನ್ಸನ್ ತಿಳಿಸಿದ್ದಾರೆ.

English summary

Jeff Bezos Would Step Down As Amazon CEO And Continue As Executive Chairman

Jeff Bezos would step down as Amazon.inc CEO and continue in executive chairman position.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X