For Quick Alerts
ALLOW NOTIFICATIONS  
For Daily Alerts

ದೀಪಾವಳಿಯೊಳಗೆ ಜಿಯೋ 5ಜಿ ಆರಂಭ: ಮುಕೇಶ್ ಅಂಬಾನಿ

|

ರಿಲಯನ್ಸ್ ಜಿಯೋ 5ಜಿ ನೆಟ್‌ವರ್ಕ್‌ಗಾಗಿ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ದೀಪಾವಳಿಯೊಳಗೆ ಪ್ರಮುಖ ನಾಲ್ಕು ಮೆಟ್ರೋ ನಗರಗಳಲ್ಲಿ 5ಜಿ ನೆಟ್‌ವರ್ಕ್ ಆರಂಭವಾಗಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

45ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, "ಎಲ್ಲಾ ನಗರಗಳಲ್ಲಿ, ತಾಲೂಕುಗಳಲ್ಲಿ 2023ರ ಡಿಸೆಂಬರ್ ಒಳಗಾಗಿ ಜಿಯೋ 5ಜಿ ಸೇವೆಯನ್ನು ಆರಂಭ ಮಾಡಲಿದೆ. ಅದಕ್ಕೂ ಮುನ್ನ ಅಕ್ಟೋಬರ್‌ 22ರಿಂದ ಆರಂಭವಾಗುವ ದೀಪಾವಳಿಯ ಒಳಗೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ 5ಜಿ ಸೇವೆ ಆರಂಭವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರವೇ ದೇಶದಲ್ಲಿ 5ಜಿ ಸೇವೆ ಆರಂಭ: ಪ್ರಧಾನಿ ಮೋದಿಶೀಘ್ರವೇ ದೇಶದಲ್ಲಿ 5ಜಿ ಸೇವೆ ಆರಂಭ: ಪ್ರಧಾನಿ ಮೋದಿ

ಗುರುಗ್ರಾಮ, ಬೆಂಗಳೂರು, ಚಂಡೀಗಢ, ಜಮ್‌ನಗರ, ಅಹಮದಾಬಾದ್, ಹೈದಾರಾಬಾದ್, ಲಕ್ನೋ, ಪುಣೆ, ಗಾಂಧಿನಗರದಲ್ಲಿಯೂ ಜಿಯೋ 5ಜಿ ನೆಟ್‌ವರ್ಕ್ ಅನ್ನು ಆರಂಭ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು ಅದರಲ್ಲಿ ಜಿಯೋ ಮೇಲುಗೈ ಸಾಧಿಸಿದೆ.

 ದೀಪಾವಳಿಯೊಳಗೆ ಜಿಯೋ 5ಜಿ ಆರಂಭ: ಮುಕೇಶ್ ಅಂಬಾನಿ

ಮಾಧ್ಯಮ, ಮನರಂಜನ ಉದ್ಯಮಕ್ಕೆ ಅಂಬಾನಿ

ಮಾಧ್ಯಮ ಉದ್ಯಮವು ಹೆಚ್ಚು ಪ್ರಗತಿಯನ್ನು ಸಾಧಿಸಿದೆ. ಸಬ್‌ಸ್ಕ್ರಿಪ್‌ಶನ್, ಜಾಹೀರಾತು ಆದಾಯ ಅಧಿಕವಾಗಿದೆ. ಇನ್ನು ಕ್ರೀಡಾ ಕ್ಷೇತ್ರಕ್ಕೂ ಹೆಜ್ಜೆ ಇಡಲಾಗುವುದು. ಐದು ವರ್ಷಗಳ ಕಾಲ ಐಪಿಎಲ್‌ನ ಡಿಜಿಟಲ್ ಹಕ್ಕನ್ನು ಪಡೆಯಲಾಗುವುದು ಎಂದು ಕೂಡಾ ಅಂಬಾನಿ ಹೇಳಿದ್ದಾರೆ.

ಇನ್ನು ರಿಲಯನ್ಸ್‌ನ ರಿಟೇಲ್ ವಹಿವಾಟು ಉತ್ತಮವಾಗಿದೆ. ಸುಮಾರು 2 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಏಷ್ಯಾದ ಪ್ರಮುಖ ಹತ್ತು ರಿಟೇಲರ್‌ಗಳಲ್ಲಿ ಜಿಯೋ ಒಂದಾಗಿದೆ ಎಂದು ಇಶಾ ಅಂಬಾನಿ ತಿಳಿಸಿದ್ದಾರೆ.

ಜಿಯೋ 5ಜಿ ಲಭ್ಯತೆ, ವೇಗ, ಸಿಮ್, ಅಗತ್ಯ ಮಾಹಿತಿ ವಿವರಜಿಯೋ 5ಜಿ ಲಭ್ಯತೆ, ವೇಗ, ಸಿಮ್, ಅಗತ್ಯ ಮಾಹಿತಿ ವಿವರ

ಜಿಯೋ 5ಜಿ ಆರಂಭ

ಜಿಯೋ 5ಜಿ ಅನ್ನು ಆರಂಭ ಮಾಡುವುದಕ್ಕೆ ಇನ್ನೂ ಕೂಡಾ ತಿಂಗಳುಗಳ ಕಾಲವಿದೆ. ಜಿಯೋ 5ಜಿ ವಿಶ್ವದ ಅತೀ ದೊಡ್ಡ ನೆಟ್‌ವರ್ಕ್ ಆಗಿದೆ. ಅತೀ ಪ್ರಗತಿ ಹೊಂದಿರುವ 5ಜಿ ನೆಟ್‌ವರ್ಕ್ ಆಗಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ 5ಜಿ ಆರಂಭವಾಗಲಿದೆ.

ದೇಶದಲ್ಲಿ ಶೀಘ್ರದಲ್ಲೇ 5ಜಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಆಗಸ್ಟ್ 15ರಂದು ಘೋಷಣೆ ಮಾಡಿದ್ದಾರೆ. ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಪ್ರತಿ ವಲಯದಲ್ಲೂ ಸುಧಾರಣೆಯನ್ನು ತರಲು ಇದು ಸಕಾಲ. 5ಜಿ ಸೆಮಿಕಂಡಕ್ಟರ್ ಮಾನ್ಯುಫಾಕ್ಷರಿಂಗ್ & ಆಪ್ಟಿಕಲ್ ಫೈಬರ್ ಕೇಬರ್ (ಒಎಫ್‌ಸಿ)ಗಳೊಂದಿಗೆ ನಾವು ಭಾರತದ ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರುತ್ತೇವೆ ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

English summary

Jio 5G rollout will happen in 4 cities by Diwali, Check the full list

Jio 5G rollout will happen in 4 cities by Diwali: Check the full list and when your city will get 5G services.
Story first published: Monday, August 29, 2022, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X