For Quick Alerts
ALLOW NOTIFICATIONS  
For Daily Alerts

ಪಂಜಾಬ್ ನಲ್ಲಿ ಜಿಯೋ ಮೊಬೈಲ್ ಟವರ್ ಗಳಿಗೆ ಹಾನಿ ಮಾಡಿದ ಪ್ರತಿಭಟನಾನಿರತರು

|

ಕೇಂದ್ರ ಸರ್ಕಾರ ಕೃಷಿ ಕಾನೂನು ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ರೈತರು ಮತ್ತು ಅವರನ್ನು ಬೆಂಬಲಿಸುತ್ತಿರುವ ಗುಂಪಿನಿಂದ ಪಂಜಾಬ್ ನಲ್ಲಿ ರಿಲಯನ್ಸ್ ಜಿಯೋಗೆ ಸೇರಿದ ಟೆಲಿಕಾಂ ಟವರ್ ಗಳನ್ನು ಗುರಿ ಮಾಡಿಕೊಂಡು ದಾಳಿ ನಡೆದಿದೆ. ಇದರಿಂದಾಗಿ ಅಲ್ಲಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯಲ್ಲಿ ಸಮಸ್ಯೆಯಾಗಿದೆ.

ಮೂಲಗಳ ಪ್ರಕಾರ, ಪಂಜಾಬ್ ನಲ್ಲಿ ಜಿಯೋಗೆ ಸೇರಿದ 1300ರಷ್ಟು ಮೊಬೈಲ್ ಟವರ್ ಗಳಿಗೆ ವಿದ್ಯುತ್ ಪೂರೈಕೆಗೆ ತಡೆಯೊಡ್ಡಲಾಗಿದೆ. ಪಂಜಾಬ್ ನಲ್ಲಿ ಜಿಯೋಗೆ ಸೇರಿದ 9000ದಷ್ಟು ಮೊಬೈಲ್ ಟವರ್ ಗಳಿವೆ. ಕೆಲವು ಟವರ್ ಗಳಲ್ಲಿನ ಫೈಬರ್ ಸಹ ಇಂಥ ಗುಂಪುಗಳ ದಾಳಿಯಿಂದ ಹಾನಿಯಾಗಿವೆ.

ಕಬ್ಬಿನ ಬೆಳೆಗಾರರಿಗೆ ಸಬ್ಸಿಡಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

 

ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನು ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರವು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಅದಾನಿ ಗ್ರೂಪ್ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವುದಕ್ಕೆ ಕರೆ ನೀಡಲಾಗಿದೆ.

ಪಂಜಾಬ್ ನಲ್ಲಿ Jio ಮೊಬೈಲ್ ಟವರ್ ಗೆ ಹಾನಿ ಮಾಡಿದ ಪ್ರತಿಭಟನಾನಿರತರು

ಜಿಯೋ ಸಿಮ್ ಖರೀದಿ ಮಾಡದಿರುವುದು ಅಥವಾ ಯಾವುದೇ ಉತ್ಪನ್ನವನ್ನು ಬಾಯ್ಕಾಟ್ ಮಾಡುವುದು ರೈತರ ಪ್ರತಿಭಟನೆ ದಾಖಲಿಸುವ ವಿಧಾನ ಹೌದು. ಆದರೆ ಕಂಪೆನಿಯ ಆಸ್ತಿಗೆ ಹಾನಿ ಮಾಡುವುದು ಶಾಂತಿಯುತ ಪ್ರತಿಭಟನೆಯ ಸಂಕೇತ ಅಲ್ಲ ಎಂದು ಕೈಗಾರಿ ಮೂಲಗಳು ತಿಳಿಸಿವೆ.

ಸನ್ನಿವೇಶ ಬಹಳ ಗಂಭೀರವಾಗಿದೆ. ಪಿಟಿಐ ವರದಿ ಮಾಡಿರುವಂತೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಮನವಿ ಮಾಡಿ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಮಾಡಬೇಡಿ ಎಂದು ಡಿಸೆಂಬರ್ 25ನೇ ತಾರೀಕು ಕೇಳಿಕೊಂಡಿದ್ದಾರೆ.

ಕೃಷಿ ಕಾನೂನು ವಿರುದ್ಧದ ಹೋರಾಟದಲ್ಲಿ ರೈತರಿಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಟವರ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್ (TAIPA) ಮನವಿ ಮಾಡಿತು. ಬಲವಂತವಾಗಿ ಟೆಲಿಕಾಂ ಸಂಪರ್ಕ ಕಡಿತ ಅಥವಾ ಟೆಲಿಕಾಂ ಸೇವೆ ಒದಗಿಸುವ ತಂತ್ರಜ್ಞರು ಅಥವಾ ಸಿಬ್ಬಂದಿ ವಿರುದ್ಧ ಹಲ್ಲೆಯಂಥ ಕೃತ್ಯಗಳಿಗೆ ಮುಂದಾಗದಂತೆ ರೈತರಿಗೆ ಒತ್ತಾಯಿಸಿದ್ದಾರೆ.

English summary

Jio Mobile Towers Targeted By Agitating Farmers In Punjab

Reliance Jio mobile towers targeted by agitating Punjab farmers against central farm laws.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X