For Quick Alerts
ALLOW NOTIFICATIONS  
For Daily Alerts

ಜಿಯೊ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಆಗಿರುವ ಬದಲಾವಣೆ ಏನು ಗೊತ್ತಾ?

|

ಜಿಯೊ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲವನ್ನೇ ಮೂಡಿಸಿದ್ದ ಸಂಸ್ಥೆ. ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಕೋಟ್ಯಾಂತರ ಗ್ರಾಹಕರನ್ನು ಸೆಳೆಯಿತು. ಆದರೆ ಇದೀಗ ತನ್ನ ಹೊರೆಯನ್ನು ತಗ್ಗಿಸಲು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಜಿಯೊ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಕೊಂಚ ಬದಲಾವಣೆ ಆಗಿದೆ.

ಈಗಾಗಲೇ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌, ವೊಡಾಫೋನ್-ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಕರೆ ದರ ಡಿಸೆಂಬರ್ ನಿಂದ ಏರಿಸಲಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಬಾಕಿ ಒಟ್ಟಾರೆ 92,000 ಕೋಟಿ ಪಾವತಿಸಬೇಕಿದೆ. ಹೀಗಾಗಿ ದರ ಏರಿಕೆ ಅನಿವಾರ್ಯತೆ ಸೃಷ್ಠಿಯಾಗಿದ್ದು, ಜಿಯೋ ಕೂಡ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಸ್ವಲ್ಪ ಬದಲಾವಣೆ ತಂದಿದೆ.

ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್‌ಟೆಲ್, ವೊಡಾಪೋನ್, ಐಡಿಯಾಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್‌ಟೆಲ್, ವೊಡಾಪೋನ್, ಐಡಿಯಾ

ಜಿಯೋ ಬಳಕೆದಾರರು ಹೆಚ್ಚಾಗಿ ಬಳಸುವ ಪ್ರಿಪೇಯ್ಡ್ ಪ್ಲಾನ್ 399 ರುಪಾಯಿ ರಿಚಾರ್ಜ್. 50 ರುಪಾಯಿಯ ವೋಚರ್ ಬಳಸುವ ಮೂಲಕ 349 ರುಪಾಯಿ ಪಾವತಿಸಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 1.5 ಜಿಬಿ ಡೇಟಾ ಸೌಲಭ್ಯ ಪಡೆಯಬಹುದಾಗಿತ್ತು. ಆದರೆ ಈ ಪ್ಲಾನ್‌ನಲ್ಲಿ ಕೆಲ ಬದಲಾವಣೆ ಆಗಿದೆ

ಜಿಯೊ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಆಗಿರುವ ಬದಲಾವಣೆ ಏನು ಗೊತ್ತಾ?

399 ಪ್ಲಾನ್‌ನಲ್ಲಿ ಮೊದಲು ಎಲ್ಲಾ ನೆಟ್‌ವರ್ಕ್‌ಗೂ ಅನ್‌ಲಿಮಿಟೆಡ್ ಉಚಿತ ಕರೆಗಳ ಸೌಲಭ್ಯವನ್ನು ಅಕ್ಟೊಬರ್‌ನಿಂದಲೇ ಕೇವಲ ಜಿಯೊ ನಿಂದ ಜಿಯೊಗೆ ಸೀಮಿತಗೊಳಿಸಲಾಗಿದೆ. ಇತರೆ ಯಾವುದೇ ನೆಟವರ್ಕ್ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುತ್ತದೆ. ಇನ್ನು 1.5 ಜಿಬಿ ಡೇಟಾ ಸೌಲಭ್ಯ ಹಾಗೆಯೇ ಮುಂದುವರಿದಿದ್ದು, 100 SMS ಫ್ರೀ ಇರಲಿದೆ. 7.47 ರುಪಾಯಿ ಟಾಕ್ ಟೈಮ್ ಸಿಗಲಿದೆ. ಈ ಯೋಜನೆಯು 84 ದಿನಗಳ ಅವಧಿಯ ಕಾಲಾವಧಿ ಹೊಂದಿದೆ

ಅನ್‌ಲಿಮಿಟೆಡ್ ಡೇಟಾ ಬಳಸುವವರಿಗಾಗಿಯೇ 444 ಪ್ರಿಪೇಯ್ಡ್ ಪ್ಲಾನ್ ಇದೆ. ಜಿಯೋ ಆಲ್‌ ಇನ್ ಒನ್ ಪ್ಲಸ್‌ ಪ್ರಿಪೇಯ್ಡ್ ಪ್ಲಾನ್ 444 ರುಪಾಯಿ ಆಗಿದ್ದು ಜಿಯೊ ನಿಂದ ಜಿಯೊಗೆ ಅನ್‌ಲಿಮಿಟೆಡ್ ಕಾಲ್ ಜೊತೆಗೆ , ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳ ಉಚಿತ ಕರೆಗಳು ಬಳಿಕ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುತ್ತದೆ.

ಇನ್ನು ಪ್ರತಿದಿನ 2 ಜಿಬಿ ಹೈ ಸ್ಪೀಡ್ ಇಂಟರ್‌ನೆಟ್ ಸೌಲಭ್ಯವಿದ್ದು, 2 ಜಿಬಿ ಮುಗಿದಲ್ಲಿ 64 kbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಡೇಟಾ ಸೌಲಭ್ಯವಿದೆ. ಈ ಯೋಜನೆ ಕೂಡ 84 ದಿನಗಳ ಅವಧಿಯ ಕಾಲಾವಧಿ ಹೊಂದಿದೆ.

English summary

Jio Prepaid Plan Changes

jio changes some prepaid plan 2 GB availabe for 444 rupees prepaid plan
Story first published: Saturday, November 30, 2019, 10:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X