For Quick Alerts
ALLOW NOTIFICATIONS  
For Daily Alerts

ಸೌರಶಕ್ತಿ ಬಳಕೆ; ಭಾರತದ ಗಣನೀಯ ಸಾಧನೆ; ಚೀನಾ ಮತ್ತಿತರ ದೇಶಗಳು ಹೇಗೆ?

|

ನವದೆಹಲಿ, ನ. 10: ಭಾರತದಲ್ಲಿ ಸೌರಶಕ್ತಿ ಬಳಕೆ ಹೆಚ್ಚುತ್ತಿದೆ. ಸೌರಶಕ್ತಿ ಹೆಚ್ಚು ಬಳಕೆಯಲ್ಲಿರುವ ವಿಶ್ವದ ಅಗ್ರಮಾನ್ಯ 10 ದೇಶಗಳಲ್ಲಿ ಭಾರತವೂ ಇದೆ. ಈ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಸೌರಶಕ್ತಿ ಉತ್ಪಾದನೆಯಿಂದಾಗಿ 4.2 ಬಿಲಿಯನ್ ಡಾಲರ್‌ನಷ್ಟು (ಸುಮಾರು 34 ಸಾವಿರ ಕೋಟಿ ರೂಪಾಯಿ) ಇಂಧನ ವೆಚ್ಚ ಉಳಿತಾಯವಾಗಿದೆ ಎಂದು ಎಂಬರ್ ಸಂಸ್ಥೆಯ ವರದಿಯೊಂದು ಹೇಳಿದೆ. ಈ ಅವಧಿಯಲ್ಲಿ ಸೌರಶಕ್ತಿ ಬಳಕೆಯಿಂದಾಗಿ ಅಷ್ಟು ಹಣದ ಉಳಿತಾಯದ ಜೊತೆಗೆ 1.94 ಕೋಟಿ ಟನ್‌ಗಳಷ್ಟು ಕಲ್ಲಿದ್ದಲು ಬಳಕೆಯೂ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಕಳೆದ ಒಂದು ದಶಕದಲ್ಲಿ ಜಾಗತಿಕವಾಗಿ ಸೌರಶಕ್ತಿ ಉತ್ಪಾದನೆಯ ಪ್ರಗತಿಯನ್ನು ಪರಿಶೀಲಿಸಿರುವ ಎಂಬರ್ ಸಂಸ್ಥೆ, ಸೌರಶಕ್ತಿ ಹೊಂದಿರುವ ವಿಶ್ವದ 10 ಅಗ್ರಮಾನ್ಯ ದೇಶಗಳ ಪೈಕಿ ಭಾರತವೂ ಇರುವುದನ್ನು ಗುರುತಿಸಿದೆ. ಭಾರತ ಸೇರಿ ಐದು ಏಷ್ಯನ್ ದೇಶಗಳು ಈ ಪಟ್ಟಿಯಲ್ಲಿವೆ.

ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?

ಚೀನಾದಲ್ಲಿ ಅತಿಹೆಚ್ಚು ಸೌರಶಕ್ತಿ ಬಳಕೆ ಆಗುತ್ತಿದೆ. ಚೀನಾ ನಂತರದ ಟಾಪ್ ಏಷ್ಯನ್ ದೇಶವೆಂದರೆ ಜಪಾನ್. ಆ ಬಳಿಕ ಭಾರತ ಅತಿ ಹೆಚ್ಚು ಸೌರಶಕ್ತಿ ಬಳಸುತ್ತದೆ. ಏಷ್ಯಾದ ಅಗ್ರಮಾನ್ಯ ಏಳು ದೇಶಗಳು ಸೌರಶಕ್ತಿ ಉತ್ಪಾದನೆ ಮೂಲಕ ಒಟ್ಟಾರೆ 34 ಬಿಲಿಯನ್ ಡಾಲರ್ (2.77 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಫಾಸಿಲ್ ಫುಯೆಲ್ (ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ ಪಳೆಯುಳಿಕೆ ಇಂಧನ) ವೆಚ್ಚವನ್ನು ತಪ್ಪಿಸಿವೆ. ಹೆಚ್ಚೂಕಡಿಮೆ ಶೇ. 9ರಷ್ಟು ಸಾಂಪ್ರದಾಯಿಕ ಇಂಧನದ ಬಳಕೆ ಕಡಿಮೆ ಆಗಿದೆ. ಇದು 2022ರ ಜನವರಿಯಿಂದ ಜೂನ್‌ವರೆಗಿನ ಮಾಹಿತಿ.

ಸೌರಶಕ್ತಿ ಬಳಕೆ; ಭಾರತದ ಗಣನೀಯ ಸಾಧನೆ; ಚೀನಾ ಮತ್ತಿತರ ದೇಶಗಳು ಹೇಗೆ?

ಚೀನಾ ಬಳಸುವ ಒಟ್ಟಾರೆ ವಿದ್ಯುತ್‌ನಲ್ಲಿ ಸೌರಶಕ್ತಿ ಪಾಲು ಶೇ. 5 ಇದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಸೌರಶಕ್ತಿ ಬಳಕೆ ಮೂಲಕ ಚೀನಾ 21 ಬಿಲಿಯನ್ ಡಾಲರ್ (1.71 ಲಕ್ಷ ಕೋಟಿ ರೂ) ಇಂಧನ ವೆಚ್ಚವನ್ನು ಉಳಿಸಿದೆ. ಕಲ್ಲಿದ್ದಲು ಮತ್ತು ಅನಿಲ ಆಮದು ವೆಚ್ಚ ಕಡಿಮೆಯಾಗಿದೆ.

ಇನ್ನು, ಈ ಅವಧಿಯಲ್ಲಿ ಜಪಾನ್ ಸೌರಶಕ್ತಿ ಉತ್ಪಾದನೆಯಿಂದಾಗಿ 5.6 ಬಿಲಿಯನ್ ಡಾಲರ್ (45 ಸಾವಿರ ಕೋಟಿ ರೂಪಾಯಿ) ಮೌಲ್ಯದಷ್ಟು ಇಂಧನ ವೆಚ್ಚವನ್ನು ಉಳಿಸಿದೆ. ಭಾರತ 4.2 ಬಿಲಿಯನ್ ಡಾಲರ್, ವಿಯೆಟ್ನಾಂ 1.7 ಬಿಲಿಯನ್ ಡಾಲರ್‌ನಷ್ಟು ಹಣವನ್ನು ಸೌರಶಕ್ತಿ ಬಳಕೆಯಿಂದಾಗಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿವೆ.

6 ತಿಂಗಳಲ್ಲಿ ಸೌರಶಕ್ತಿ ಬಳಕೆಯಿಂದ ಹಣ ಉಳಿಸಿದ ಏಷ್ಯನ್ ದೇಶಗಳು
ಚೀನಾ: 21 ಬಿಲಿಯನ್ ಡಾಲರ್ (1.71 ಲಕ್ಷ ಕೋಟಿ ರೂ)
ಜಪಾನ್: 5.6 ಬಿಲಿಯನ್ ಡಾಲರ್ (45 ಸಾವಿರ ಕೋಟಿ ರೂ)
ಭಾರತ: 4.2 ಬಿಲಿಯನ್ ಡಾಲರ್ (34 ಸಾವಿರ ಕೋಟಿ ರೂ)
ವಿಯೆಟ್ನಾಂ: 1.7 ಬಿಲಿಯನ್ ಡಾಲರ್ (13.8 ಸಾವಿರ ಕೋಟಿ ರೂ)
ಸೌತ್ ಕೊರಿಯಾ: 1.5 ಬಿಲಿಯನ್ ಡಾಲರ್ (12.3 ಸಾವಿರ ಕೋಟಿ ರೂ)
ಥಾಯ್ಲೆಂಡ್: 209 ಮಿಲಿಯನ್ ಡಾಲರ್ (1704 ಕೋಟಿ ರೂ)
ಫಿಲಿಪ್ಪೈನ್ಸ್: 78 ಮಿಲಿಯನ್ ಡಾಲರ್ (636 ಕೋಟಿ ರೂ)

ಸೌರಶಕ್ತಿ ಬಳಕೆ; ಭಾರತದ ಗಣನೀಯ ಸಾಧನೆ; ಚೀನಾ ಮತ್ತಿತರ ದೇಶಗಳು ಹೇಗೆ?

ವಿಯೆಟ್ನಾಂನಲ್ಲಿ ಕಳೆದ ಮೂರ್ನಾಲ್ಕು ವರ್ಷದ ಅವಧಿಯಲ್ಲಿ ಸೌರಶಕ್ತಿ ಉತ್ಪಾದನೆ ಬಹಳ ವೇಗವಾಗಿ ನಡೆದಿದೆ. ಈ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಆ ದೇಶಕ್ಕೆ ಇರುವ ವಿದ್ಯುತ್ ಬೇಡಿಕೆಯಲ್ಲಿ ಶೇ. 11ರಷ್ಟನ್ನು ಸೌರವಿದ್ಯುತ್ ಮೂಲಕವೇ ಪೂರೈಸಲಾಗುತ್ತಿದೆ.

ಫಿಲಿಪ್ಪೈನ್ಸ್ ಮತ್ತು ಥಾಯ್ಲೆಂಡ್‌ನಲ್ಲಿ ಸೌರವಿದ್ಯುತ್ ಬಳಕೆ ಶೇ. 1 ಮತ್ತು ಶೇ. 2 ಮಾತ್ರ ಇದೆಯಾದರೂ ಫಾಸಿಲ್ ಫುಯೆಲ್ ವೆಚ್ಚದಲ್ಲಿ ಭಾರೀ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿವೆ.

English summary

Know How Much Fuel Cost India Saved Through Solar Power Generation

India is said to have saved USD 4.2 billion in fuel costs through solar generation in the first half of 2022 and 19.4 million tonnes of coal.
Story first published: Thursday, November 10, 2022, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X