For Quick Alerts
ALLOW NOTIFICATIONS  
For Daily Alerts

ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?

|

ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ- ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ) ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ದೇಶದಲ್ಲಿ ಸ್ಪರ್ಧಾತ್ಮಕ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡ ಕೆಲ ಸಂಸ್ಥೆಗಳ ಕಿವಿ ಹಿಂಡುವ ಕೆಲಸ ಮಾಡಿದೆ. ಮೊನ್ನೆಯಷ್ಟೇ ಮೇಕ್ ಮೈ ಟ್ರಿಪ್, ಗೋ ಐಬಿಬೋ, ಓಯೋ ಕಂಪನಿಗಳಿಗೆ 392 ಕೋಟಿ ರೂ ದಂಡ ವಿಧಿಸಿತ್ತು. ಅದರ ಬೆನ್ನಲ್ಲೇ ಈಗ ಸಿಸಿಐ ಗೂಗಲ್ ಕಂಪನಿಗೆ ಬರೋಬ್ಬರಿ 1,337.76 ರೂ ಪೆನಾಲ್ಟಿ ವಿಧಿಸಿದೆ.

2018ರಲ್ಲೂ ಬೇರೊಂದು ಪ್ರಕರಣದಲ್ಲಿ ಗೂಗಲ್‌ಗೆ ಸಿಸಿಐ 136 ಕೋಟಿ ದಂಡ ವಿಧಿಸಿತ್ತು. ಗೂಗಲ್ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಇನ್ನೂ ಕೆಲ ಪ್ರಕರಣಗಳಲ್ಲಿ ಗೂಗಲ್‌ಗೆ ದಂಡ ಬೀಳುವ ಸಾಧ್ಯತೆ ಇಲ್ಲದಿಲ್ಲ.

ಮೇಕ್ ಮೈ ಟ್ರಿಪ್, ಗೋಐಬಿಬೋ ಮತ್ತು ಓಯೋಗೆ 392 ಕೋಟಿ ರೂ ದಂಡಮೇಕ್ ಮೈ ಟ್ರಿಪ್, ಗೋಐಬಿಬೋ ಮತ್ತು ಓಯೋಗೆ 392 ಕೋಟಿ ರೂ ದಂಡ

ಇದೀಗ 1,337.76 ರೂ ದಂಡ ಬಿದ್ದಿರುವ ಪ್ರಕರಣದಲ್ಲಿ ಗೂಗಲ್ ವಿರುದ್ಧ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಪ್ರತಿಸ್ಪರ್ಧೆಯನ್ನು ಹತ್ತಿಕ್ಕುತ್ತಿರುವ ಆರೋಪ ಕೇಳಿಬಂದಿತ್ತು. ಇದರ ವಿಚಾರಣೆ ನಡೆಸಿ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಸಿಸಿಐ ಈ ತೀರ್ಪು ನೀಡಿದೆ.

ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?

ಸ್ಮಾರ್ಟ್‌ಫೋನ್‌ಗಳಿಗೆ ಆಪರೇಟಿಂಗ್ ಸಿಸ್ಟಂ, ಆ್ಯಪ್ ಸ್ಟೋರ್, ವೆಬ್ ಸರ್ಚ್, ವೆಬ್ ಬ್ರೌಸರ್, ಆನ್‌ಲೈನ್ ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾಮ್‌ನಲ್ಲಿ ಗೂಗಲ್ ತನ್ನ ಪ್ರಾಬಲ್ಯವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ತನ್ನ ಆದೇಶದಲ್ಲಿ ಹೇಳಿದೆ.

ಗೂಗಲ್‌ನ ಹಲವು ವ್ಯಾವಹಾರಿಕ ನಡವಳಿಕೆಗಳಿಗೆ ಸಿಸಿಐ ಆಕ್ಷೇಪ ವ್ಯಕ್ತಪಡಿಸಿದ್ದು, ಅಂಥ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶಿಸಿದೆ. ಪ್ಲೇ ಸರ್ವಿಸ್ ಪ್ಲಗಿನ್‌ಗಳನ್ನು ಬಳಸಲು ಒಇಎಂಗಳ ಮಧ್ಯೆ ತಾರತಮ್ಯ ಮಾಡಬಾರದು. ಗೂಗಲ್ ಸರ್ಚ್, ಕ್ರೋಮ್ ಬ್ರೌಸರ್, ಯೂಟ್ಯೂಬ್, ಗೂಗಲ್ ಮ್ಯಾಪ್, ಜಿಮೇಲ್ ಇತ್ಯಾದಿ ಹಲವು ಗೂಗಲ್ ಅಪ್ಲಿಕೇಶನ್‌ಗಳನ್ನು ಒಇಎಂಗಳು ಪೂರ್ವದಲ್ಲೇ ಸ್ಥಾಪಿಸಿದರೆ ಮಾತ್ರ ಪ್ಲೆ ಸ್ಟೋರ್‌ಗೆ ಅವಕಾಶ ಕೊಡಲಾಗುವುದು ಎಂಬ ಷರತ್ತನ್ನು ಕೈಬಿಡಬೇಕು ಎಂದು ಗೂಗಲ್‌ಗೆ ಸಿಸಿಐ ಅಪ್ಪಣೆ ಮಾಡಿದೆ. ಇಲ್ಲಿ ಒಇಎಂ ಎಂದರೆ ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಚರರ್. ಮೊಬೈಲ್‌ಗೆ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳು.

ಮೊಬೈಲ್ ಸಾಧನದ ಆರಂಭಿಕ ಸೆಟಪ್‌ನಲ್ಲಿ ಡೀಫಾಲ್ಟ್ ಆಗಿ ಯಾವ ಸರ್ಚ್ ಎಂಜಿನ್ ಇರಬೇಕೆಂದು ಬಳಕೆದಾರರು ನಿರ್ಧರಿಸುವ ಅವಕಾಶವನ್ನು ಗೂಗಲ್ ನೀಡಬೇಕು. ಆ್ಯಪ್ ಡೆವಲಪರ್‌ಗಳು ಗೂಗಲ್‌ನ ಪ್ಲೇ ಸ್ಟೋರ್‌ನ ಹೊರಗೆ ಸೈಡ್ ಲೋಡಿಂಗ್ ಮೂಲಕ ಮೊಬೈಲ್‌ಗಳಿಗೆ ತಮ್ಮ ಆ್ಯಪ್‌ಗಳನ್ನು ವಿತರಿಸಲು ಗೂಗಲ್ ಯಾವ ನಿರ್ಬಂಧ ಹಾಕಬಾರದು ಎಂದೂ ಸಿಸಿಐ ಸೂಚಿಸಿದೆ.

ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಿಸ್ಟ್ ಆಗದ ಆ್ಯಪ್‌ಗಳನ್ನು ಗೂಗಲ್ ಅಪಾಯಕಾರಿ ಎಂದು ವರ್ಗೀಕರಿಸುತ್ತದೆ. ಮೊಬೈಲ್‌ಗಳಲ್ಲಿ ಇವುಗಳನ್ನು ಸೈಡ್-ಲೋಡಿಂಗ್ ಮೂಲಕ ಡೌನ್‌ಲೋಡಿಂಗ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ಬಳಕೆದಾರರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಮೊಬೈಲ್‌ಗೆ ಭದ್ರತಾ ಅಪಾಯ ತರುತ್ತವೆ ಎಂದು ಹೇಳಿ ಎಚ್ಚರಿಸುತ್ತದೆ.

ಇದೀಗ ಗೂಗಲ್‌ಗೆ ಪೆನಾಲ್ಟಿ ವಿಧಿಸಿರುವ ಸಿಸಿಐ, 30 ದಿನದಲ್ಲಿ ಅಗತ್ಯ ಹಣಕಾಸು ವಿವರ ಹಾಗು ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದೆ. ಇದು ತಪ್ಪಿದರೆ ದಂಡದ ಮೊತ್ತ ಹೆಚ್ಚು ಮಾಡಬೇಕಾಗುತ್ತದೆ ಎಂದೂ ಸಿಸಿಐ ಎಚ್ಚರಿಕೆ ನೀಡಿದೆ.

ಆಂಡ್ರಾಯ್ಡ್ ಓಪನ್ ಸಾಫ್ಟ್‌ವೇರ್ ಆದರೂ ಅದನ್ನು ನಿರ್ವಹಿಸುವುದು ಗೂಗಲ್. ಅದರ ಲೈಸೆನ್ಸ್ ಎಲ್ಲವೂ ಗೂಗಲ್ ಬಳಿಯೇ ಇದೆ. ಐಫೋನ್ ಬಿಟ್ಟರೆ ಉಳಿದಂತೆ ಬಹುತೇಕ ಮೊಬೈಲ್‌ಗಳು ಆಂಡ್ರಾಯ್ಡ್ ತಂತ್ರಾಂಶದಲ್ಲೇ ಚಾಲಿತವಾಗುತ್ತವೆ. ಹೀಗಾಗಿ, ಗೂಗಲ್‌ನದ್ದೇ ಪಾರುಪತ್ಯೆ. ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮ್ಯಾಪ್ಸ್, ಯೂಟ್ಯೂಬ್ ಇತ್ಯಾದಿ ತನ್ನ ಲಾಭದಾಯಕ ಅಪ್ಲಿಕೇಶನ್‌ಗಳನ್ನೇ ಪೂರ್ವಭಾವಿಯಾಗಿ ಸ್ಥಾಪಿಸುವಂತೆ ಗೂಗಲ್ ತಾಕೀತು ಮಾಡುತ್ತದೆ. ಗೂಗಲ್‌ನ ಆ್ಯಪ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತದೆ. ಪ್ಲೇ ಸ್ಟೋರ್‌ನಲ್ಲೂ ಗೂಗಲ್ ತನಗೆ ಲಾಭವಾಗುವ ರೀತಿಯಲ್ಲಿ ಆ್ಯಪ್‌ಗಳನ್ನು ಲಿಸ್ಟ್ ಮಾಡುತ್ತದೆ ಎಂಬ ಆರೋಪ ಇದೆ.

English summary

Know Why Google Imposed With Huge Penalty By CCI

Competition Commission of India has imposed huge penalty of over 1000 crore for abusing its dominating power in the market and getting unfair advantage for its apps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X