For Quick Alerts
ALLOW NOTIFICATIONS  
For Daily Alerts

ಅಲ್ಗಾರಿದಮ್‌ಗಳನ್ನು ಸಾರ್ವಜನಿಕಗೊಳಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆ ‘ಕೂ’

|

ಬೆಂಗಳೂರು, ಏ.21: ಕೂ ಫಿಲಾಸಾಫಿ ಮತ್ತು ಅದರ ಪ್ರಮುಖ ಅಲ್ಗಾರಿದಮ್‌ಗಳ ಕುರಿತು ಕೆಲಸ ಮಾಡುತ್ತಿರುವ ಮೊದಲ ಮಹತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಈ ನಡೆ, ಕೂ ವೇದಿಕೆಯ ಪಾರದರ್ಶಕತೆ ಮತ್ತು ತಟಸ್ಥತೆ ಹಾಗು ಬದ್ಧತೆಯನ್ನು ಎತ್ತಿಹಿಡಿಯುತ್ತದೆ, ಅಲ್ಲದೆ ಬಳಕೆದಾರರ ಆಸಕ್ತಿಗಳನ್ನು ಕೇಂದ್ರವಾಗಿರಿಸಿಕೊಂಡು ಒಂದು ವಿಷಯವನ್ನು ಬಳಕೆದಾರರು ಏಕೆ ನೋಡುತ್ತಿದ್ದಾರೆಂದು ತಿಳಿಯಲು ಇದು ಅವಕಾಶ ನೀಡುತ್ತದೆ. ಈ ಅಲ್ಗಾರಿದಮ್‌ಗಳನ್ನು ಮಾರ್ಚ್ 2022 ರಲ್ಲಿ ಕೂ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಲಾಗಿದೆ.

ಅಲ್ಗಾರಿದಮ್‌ಗಳು ತಮ್ಮ ಸ್ವಂತ ನಡವಳಿಕೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ಬಳಕೆದಾರರ ಅನುಭವಗಳನ್ನು ವ್ಯಕ್ತಿಗತಗೊಳಿಸಲು ಮತ್ತು ಸುಧಾರಿಸಲು ಸಹಾಯ ಮಾಡುವ ಗಣಿತದ ನಿಯಮಗಳ ಒಂದು ಗುಂಪಾಗಿದೆ. ಈ ಅಲ್ಗಾರಿದಮ್‌ಗಳ ಮೂಲ ಸಿದ್ಧಾಂತವೇ ಬಳಕೆದಾರರಿಗೆ ಪ್ರಸ್ತುತತೆಯ ಅನುಭವವನ್ನು ಹೆಚ್ಚಿಸುವುದು.

ಕೂ ವೇದಿಕೆಯ ಉಖ್ಯ ಉದ್ದೇಶ ಯಾವಾಗಲೂ ಮುಕ್ತವಾಗಿ ಕಾರ್ಯನಿರ್ವಹಿಸುವ ಪಾರದರ್ಶಕ, ಬುದ್ಧಿವಂತ ಅಲ್ಗಾರಿದಮ್‌ಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿದ್ದರೂ, ವೇದಿಕೆಯು ಈಗ ಈ ಉದ್ದೇಶಗಳನ್ನು ಹೇಗೆ ಸಾಧಿಸುತ್ತದೆ ಎಂಬುದರ ಕುರಿತು ಬಳಕೆದಾರರಿಗೆ ತಿಳುವಳಿಕೆ ನೀಡಲು ಮತ್ತು ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಕೂ ತನ್ನ ನಾಲ್ಕು ಮುಖ್ಯ ಅಲ್ಗಾರಿದಮ್‌ಗಳಲ್ಲಿ ಬಳಸಲಾದ ವಿಶಾಲವಾದ ವೇರಿಯಬಲ್ ಗಳ ಬಗ್ಗೆ ಚರ್ಚಿಸುತ್ತದೆ - ಫೀಡ್, ಟ್ರೆಂಡಿಂಗ್ #, ಜನರ ಶಿಫಾರಸುಗಳು ಮತ್ತು ನೋಟಿಫಿಕೇಷನ್ಸ್. ಈ ನಾಲ್ಕು ಅಲ್ಗಾರಿದಮ್‌ಗಳು ಬಳಕೆದಾರರು ನೋಡುವ ಮತ್ತು ಬಳಸುವ ವಿಷಯದ ಪ್ರಕಾರವನ್ನು ನಿರ್ಧರಿಸುತ್ತವೆ.

ಅಲ್ಗಾರಿದಮ್‌ಗಳನ್ನು ಸಾರ್ವಜನಿಕಗೊಳಿಸುತ್ತಿರುವ KOO

'ಕೂ ಸಾಮಾಜಿಕ ಮಾಧ್ಯಮದಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಅಲ್ಗಾರಿದಮ್‌ಗಳು ಯಾವುದೇ ಹಸ್ತಕ್ಷೇಪ ಮತ್ತು ಪಕ್ಷಪಾತವಿಲ್ಲದಂತೆ ಕಾರ್ಯನಿರ್ವಹಿಸುತ್ತವೆ. ನಮ್ಮ ಅಲ್ಗಾರಿದಮ್‌ಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಕೂನಲ್ಲಿ ಯಾವುದೇ ಗುಪ್ತ ಕಾರ್ಯಸೂಚಿಗಳಿಲ್ಲ ಎಂದು ಬಳಕೆದಾರರಿಗೆ ತಿಳಿಯಪಡಿಸುತ್ತಿರುವುದು ನಮ್ಮ ಬದ್ಧತೆಯ ಬಹುಮುಖ್ಯ ಭಾಗವಾಗಿದೆ. ನಮ್ಮ ಅಲ್ಗಾರಿದಮ್‌ಗಳ ಜೊತೆಗೆ, ಎಲ್ಲಾ ಬಳಕೆದಾರರ ಹೆಚ್ಚಿನ ಮಾಹಿತಿಗಾಗಿ ನಮ್ಮ ಎಲ್ಲಾ ನೀತಿಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಬಹು ಭಾಷೆಗಳಲ್ಲಿ ವಿವರಿಸಲಾಗಿದೆ. ಕೂ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಭವಿಷ್ಯಕ್ಕಾಗಿ ನಾವು ಸುರಕ್ಷಿತ, ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಹೇಗೆ ನಿರ್ಮಿಸುತ್ತಿದ್ದೇವೆ ಎಂಬುದರ ಕುರಿತು ಬಳಕೆದಾರರಿಗೆ ತಿಳಿಸುವುದನ್ನು ನಾವು ಖಂಡಿತ ಮುಂದುವರಿಸುತ್ತೇವೆ." ಎಂದು ಕೂ - ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ತಿಳಿಸಿದರು

'ನಾವು ನಮ್ಮ ಪ್ರಮುಖ ಪಾಲುದಾರರು - ಬಳಕೆದಾರರು ಮತ್ತು ಕ್ರಿಯೇಟರ್ ಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ. ಉತ್ತಮವಾದ ಕ್ರಿಯೇಟರ್ ಗಳನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡುವುದು ಬಹುಮುಖ್ಯವಾಗಿದೆ ಮತ್ತು ಅದಕ್ಕೆ ಪೂರಕವಾಗಿ. ಇದನ್ನು ಸಾಧಿಸಲು ನಮ್ಮ ಅಲ್ಗಾರಿದಮ್‌ಗಳು ಸಹಾಯ ಮಾಡುತ್ತವೆ ಮತ್ತು ಬಳಕೆದಾರರ ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಅನುಭವಗಳನ್ನು ವ್ಯಕ್ತಿಗತಗೊಳಿಸುತ್ತವೆ. ಪಾರದರ್ಶಕತೆಯೇ ನಮ್ಮ ಪ್ರಮುಖ ನಂಬಿಕೆಯಾಗಿದ್ದು, ನಾವು ಅದನ್ನು ಗೌರವಿಸುತ್ತೇವೆ. ನಮ್ಮ ಅಲ್ಗಾರಿದಮ್‌ಗಳನ್ನು ಸಾರ್ವಜನಿಕಗೊಳಿಸುವ ಮೂಲಕ ನಾವು ಪ್ರಸ್ತುತತೆಯನ್ನು ಹೇಗೆ ಹೆಚ್ಚಿಸುತ್ತೇವೆ ಎಂಬುದನ್ನು ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಅವಕಾಶ ನೀಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಅಲ್ಗಾರಿದಮ್‌ಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಆಗಾಗ್ಗೆ ಹಲವು ಬದಲಾವಣೆಗಳ ಆಧಾರದ ಮೇಲೆ ಪ್ರಯೋಗಿಸಲ್ಪಡುತ್ತವೆ ತದನಂತರ ನಾವು ಇವುಗಳನ್ನು ಪ್ರಕಟಿಸುವುದನ್ನು ಪ್ರಾರಂಭಿಸುತ್ತೇವೆ, ಮುಂದಿನ ದಿನಗಳಲ್ಲಿ, ಬಳಕೆದಾರರು ಬಯಸಿದಲ್ಲಿ ಹೊಂದಿಸಿಕೊಳ್ಳಬಹುದಾದ ಟೈಮ್‌ಲೈನ್ ಫೀಡ್ ಅನ್ನು ನೋಡಲು ನಾವು ಅವಕಾಶ ಒದಗಿಸುತ್ತೇವೆ. ಇದು ಅವರಿಗೆ ಎರಡೂ ಪ್ರಪಂಚದ ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ. ಎಂದು ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ ತಿಳಿಸಿದರು

ಮತ್ತೊಂದು ಜಾಗತಿಕ-ಹೆಜ್ಜೆ ಎಂಬಂತೆ ಕೂ ಇತ್ತೀಚೆಗೆ ಸ್ವಯಂಪ್ರೇರಿತ ಸ್ವಯಂ-ಪರಿಶೀಲನೆಯನ್ನು ಸಕ್ರಿಯಗೊಳಿಸಿದೆ - ಈ ಮೂಲಕ ಎಲ್ಲಾ ಬಳಕೆದಾರರಿಗೂ ವೇದಿಕೆಯಲ್ಲಿ ನಿಜವಾದ ಧ್ವನಿಗಳನ್ನು ಗುರುತಿಸಲು ಅಧಿಕಾರ ನೀಡುತ್ತದೆ.

ಅಲ್ಗಾರಿದಮ್‌ಗಳನ್ನು ಸಾರ್ವಜನಿಕಗೊಳಿಸುತ್ತಿರುವ KOO

ಕೂ ಬಗ್ಗೆ

ಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಭಾಷಾ ಆಧಾರಿತ ಮೈಕ್ರೋ-ಬ್ಲಾಗಿಂಗ್‌ನ ಆವಿಷ್ಕಾರಕವಾಗಿದ್ದು ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ - ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಕ್ಕೆ ಧಕ್ಕೆ ಬಾರದಂತೆ ಮೂಲ ಅರ್ಥವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 30 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದೆ, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.

Read more about: business app ಆ್ಯಪ್
English summary

Koo Becomes the First Significant Social Media Platform to Make its Algorithms Public

The move empowers users to manage the kind of content that they wish to see in their feed. Builds awareness of how algorithms influence user experiences and choices. Establishes Koo as a transparent and safe platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X