For Quick Alerts
ALLOW NOTIFICATIONS  
For Daily Alerts

Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG

ಕೇಂದ್ರ ಸರ್ಕಾರ ಫೆ. 1ರಂದು 20203-24ನೇ ಸಾಲಿನ ಬಜೆಟ್ ಮಂಡಿಸಲಿದೆ. ಈ ವೇಳೆಗೆ ತೆರಿಗೆದಾರರಿಗೆ ಅನುಕೂಲವಾಗುವಂತೆ ಒಂದಷ್ಟು ದೀರ್ಘಾವಧಿಯ ವಿನಾಯಿತಿಗಳನ್ನು ಘೋಷಿಸಬೇಕು. ಯಾವ ತೆರಿಗೆ ವಿನಾಯಿತಿ ನೀಡಬೇಕು, ನೀಡಬಾರದು, ಅದರ ಅನುಕೂಲಗಳೇನು ಎಂದು ಗ್ಲೋಬಲ್ ಮೊಬಿಲಿಟಿ ಸೇ

|

ಬೆಂಗಳೂರು, ಜನವರಿ 24: ಪ್ರಸಕ್ತ 20203-24ನೇ ಸಾಲಿನ ಕೇಂದ್ರ ಆಯವ್ಯಯ-2023 (Union Budge 2023) ದಲ್ಲಿ ಸರ್ಕಾರ ತೆರಿಗೆದಾರರಿಗೆ ಅನುಕೂಲವಾಗುವಂತೆ ಒಂದಷ್ಟು ದೀರ್ಘಾವಧಿಯ ವಿನಾಯಿತಿಗಳನ್ನು ಘೋಷಿಸಬೇಕು ಎಂದು ಗ್ಲೋಬಲ್ ಮೊಬಿಲಿಟಿ ಸೇವೆಗಳ ಸಂಸ್ಥೆ ಕೆಪಿಎಂಜಿ (KPMG) ಸಂಸ್ಥೆ ಹೇಳಿದೆ.

ಕೇಂದ್ರ ಆಯವ್ಯಯ-2023ಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿದ ಗ್ಲೋಬಲ್ ಮೊಬಿಲಿಟಿ ಸೇವೆಗಳ ಸಂಸ್ಥೆ ಕೆಪಿಎಂಜಿ (KPMG) ಪಾಲುದಾರರು ಹಾಗೂ ಮುಖ್ಯಸ್ಥರಾದ ಪರಿಜಾದ್ ಸಿರ್ವಾಲಾ ಅವರು ತಿಳಿಸಿದ್ದಾರೆ.

ಆದಾಯ ತೆರಿಗೆಯಲ್ಲಿ ಕಡಿತ ಸಾಧ್ಯತೆ: ಕೆಪಿಎಂಜಿಆದಾಯ ತೆರಿಗೆಯಲ್ಲಿ ಕಡಿತ ಸಾಧ್ಯತೆ: ಕೆಪಿಎಂಜಿ

ಬಜೆಟ್ ಮಂಡಲಿಸಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ತೆರಿಗೆದಾರರಿಗೆ ಹೆಚ್ಚು ಆಕರ್ಷಿಸಲು ಹೊಸ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ಕೆಲವು ದೀರ್ಘಾವಧಿಯ ವಿನಾಯಿತಿಗಳನ್ನು ಸೇರಿಸಬೇಕು ಎಂದರು. ಜೊತೆಗೆ ಪ್ರಸಕ್ತ ವರ್ಷದಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ತೆಗೆದುಕೊಳ್ಳಬಹುದಾದ ಹಂತಗಳನ್ನು ಪರಿಜಾದ್ ಅವರು ಪಟ್ಟಿ ಮಾಡಿದ್ದಾರೆ.

Union Budget 2023: ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG

ದೇಶದಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಹೆಚ್ಚು ಹೆಚ್ಚು ತೆರಿಗೆದಾರರು ಇದನ್ನು ಆಯ್ಕೆ ಮಾಡಿಕೊಳ್ಳುವಂತೆ ಸರ್ಕಾರ ಬಯಸುತ್ತದೆ. ಆದರೆ ಹೆಚ್ಚಿನ ಜನಪ್ರಿಯ ತೆರಿಗೆ ವಿನಾಯಿತಿಗಳು, ಪ್ರಮಾಣಿತ ಕಡಿತ ಅಥವಾ ಮನೆ ಬಾಡಿಗೆ ಭತ್ಯೆ (HRA), ಮೆಡಿಕ್ಲೈಮ್ ಪಾವತಿ ಇಲ್ಲವೇ ಗೃಹ ಸಾಲದ ಬಡ್ಡಿ ತೆಗೆದುಹಾಕಲಾಗುತ್ತವೆ. ಇದು ಸೇರ್ಪಡೆಯಾಗಿದ್ದರೆ ತೆರಿಗೆದಾರರಿಗೆ ಅನುಕೂಲವಾಗಲಿದೆ.

ತೆರಿಗೆ ಪದ್ಧತಿ: ಸಲಹೆ ನೀಡಿದ ಪರಿಜಾದ್

ಪರಿಜಾದ್ ಪ್ರಕಾರ, ಕೇಂದ್ರ ಸರ್ಕಾರ ಎಲ್ಲಾ ತೆರಿಗೆ ವಿನಾಯಿತಿಗಳನ್ನು ಸೇರಿಸಬೇಕು ಎಂದು ಒತ್ತಾಯಿಸುತ್ತಿಲ್ಲ. ಆದರೆ ಕೆಲವರು ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ದಾರಿ ಕಂಡುಕೊಳ್ಳಬೇಕಿದೆ. ಆದರೆ ಸರ್ಕಾರದ ಕೆಲವು ತೆರಿಗೆ ದರ ಉದ್ದೇಶದಿಂದ ಇದು ಸಾಧ್ಯವಾಗುತ್ತಿದೆ. ಬಹುಶಃ ಕನಿಷ್ಠ ಒಂದು ಅಥವಾ ಎರಡು ವಿನಾಯಿತಿಗಳನ್ನು ಉಳಿಸಿಕೊಳ್ಳಬಹುದಾಗಿದೆ. ನಿರ್ದಿಷ್ಟವಾಗಿ ದೀರ್ಘಕಾಲೀನ ಮೆಡಿಕ್ಲೈಮ್ ಅಥವಾ ವಸತಿ ಸಾಲದ ಬಡ್ಡಿ ಇವುಗಳ ಮೇಲಿನ ವಿನಾಯಿತಿಯವು ಪಾವತಿದಾರರ ಉಳಿಕೆಗೆ ನೆರವಾಗುತ್ತದೆ ಎಂದರು.

ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡಬೇಕು. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಸರ್ಕಾರವು ಅದನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ತೆಗೆದುಕೊಂಡು, ಅದಕ್ಕನುಗುಣವಾಗಿ ಸ್ಲ್ಯಾಬ್‌ಗಳನ್ನು ಹೊಂದಿಸಬಹುದು ಎಂದು ಪರಿಜಾದ್ ಅಭಿಪ್ರಾಯಪಟ್ಟಿದ್ದಾರೆ.

Union Budget 2023: ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG

ಐದು ಲಕ್ಷ ರೂ.ಗಿಂತ ಕಡಿಮೆ ಆದಾಯ ಪಡೆಯುವವರು ತಾಂತ್ರಿಕವಾಗಿ 12,500 ರೂ. ರಿಯಾಯಿತಿ ಮತ್ತು ಆದಾಯ ತೆರಿಗೆಯ ಸೆಕ್ಷನ್ 87A ನಿಂದ ಯಾವ ತೆರಿಗೆ ಪಾವತಿಸುತ್ತಿಲ್ಲ. ಆದರೆ ಅವರೆಲ್ಲ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು.ರಿಯಾಯಿತಿಯನ್ನು ತೋರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

English summary

KPMG advises to announce long-term tax exemption in Union Budget 2023

Global Mobility Services company KPMG advises to announce long-term tax exemption in Union Budget 2023.
Story first published: Tuesday, January 24, 2023, 22:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X