For Quick Alerts
ALLOW NOTIFICATIONS  
For Daily Alerts

ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯಿಂದ ಕೆಳಗಿಳಿದ ಕೆ.ವಿ ಸುಬ್ರಮಣಿಯನ್

|

ಅಕ್ಟೋಬರ್ 8ರಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯಿಂದ ಕೆ.ವಿ ಸುಬ್ರಮಣಿಯನ್ ಕೆಳಗಿಳಿದಿದ್ದಾರೆ. ಮೂರು ವರ್ಷಗಳ ಅವಧಿ ಸಂಪೂರ್ಣಗೊಳಿಸಿದ ಬಳಿಕ ಸುಬ್ರಮಣಿಯನ್‌ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

 

ಸುಬ್ರಮಣಿಯನ್ ಅವರು ಡಿಸೆಂಬರ್ 7, 2018 ರಂದು ಸಿಇಎ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು, ಅವರ ಹಿಂದಿನ ಅರವಿಂದ ಸುಬ್ರಮಣಿಯನ್ ಅವರು ಈ ಪಾತ್ರವನ್ನು ತೊರೆದ ಸುಮಾರು ಐದು ತಿಂಗಳ ನಂತರ ಸಿಇಒ ಸ್ಥಾನ ಪಡೆದರು.

''ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನನ್ನ 3 ವರ್ಷಗಳನ್ನ ಅವಧಿಯನ್ನು ಪೂರ್ಣಗೊಳಿಸಿದ ನಂತರ ನಾನು ಅಕಾಡೆಮಿಗೆ ಮರಳಲು ನಿರ್ಧರಿಸಿದ್ದೇನೆ" ಎಂದು ಕೆ.ವಿ. ಸುಬ್ರಮಣಿಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಬ್ರಮಣಿಯನ್ ಅನುಭವ ಮತ್ತು ಸೇವೆಗಳು:

ಸುಬ್ರಮಣಿಯನ್ ಅನುಭವ ಮತ್ತು ಸೇವೆಗಳು:

ಸುಬ್ರಮಣಿಯನ್ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗಾಗಿ ಪರಿಣಿತ ಸಮಿತಿಯ ಭಾಗವಾಗಿದ್ದರು.

ಇದಷ್ಟೇ ಅಲ್ಲದೆ ಜೆಪಿ ಮೋರ್ಗಾನ್ ಚೇಸ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌(ಟಿಸಿಎಸ್‌) ಸೇರಿದಂತೆ ಉನ್ನತ ಕಾರ್ಪೊರೇಟ್‌ಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಶೈಕ್ಷಣಿಕವಾಗಿ, ಸುಬ್ರಮಣಿಯನ್ ಅವರು ಯುನೈಟೆಡ್ ಸ್ಟೇಟ್ಸ್‌ನ ಎಮೊರಿ ವಿಶ್ವವಿದ್ಯಾಲಯದ ಗೊಯಿಜುಟಾ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹಣಕಾಸು ವಿಭಾಗದಲ್ಲಿ ಫ್ಯಾಕಲ್ಟಿ ಆಗಿದ್ದರು.

 

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸುಬ್ರಮಣಿಯನ್

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸುಬ್ರಮಣಿಯನ್

ಸುಬ್ರಮಣಿಯನ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ನನ್ನ ವೃತ್ತಿಪರ ಜೀವನದ ಮೂರು ದಶಕಗಳಲ್ಲಿ, ನಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ಸ್ಫೂರ್ತಿದಾಯಕ ನಾಯಕನನ್ನು ಎದುರಿಸಿಲ್ಲ. ಆರ್ಥಿಕ ನೀತಿಯ ಬಗ್ಗೆ ಅವರ ಅರ್ಥಗರ್ಭಿತ ತಿಳುವಳಿಕೆಯು ಸಾಮಾನ್ಯ ನಾಗರಿಕರ ಜೀವನವನ್ನು ಉನ್ನತೀಕರಿಸಲು ಅದನ್ನು ಬಳಸುವುದರಲ್ಲಿ ನಿಸ್ಸಂದಿಗ್ಧವಾದ ನಿರ್ಣಯವನ್ನು ನೀಡಿದ್ದಾರೆ" ಎಂದು ಅವರು ಹೇಳಿದ್ದಾರೆ.

 

ಶೈಕ್ಷಣಿಯ ವೃತ್ತಿ ಜೀವನಕ್ಕೆ ಹಿಂದಿರುಗಿದ ಸಿಇಎ
 

ಶೈಕ್ಷಣಿಯ ವೃತ್ತಿ ಜೀವನಕ್ಕೆ ಹಿಂದಿರುಗಿದ ಸಿಇಎ

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ತಮ್ಮ ಮೂರು ವರ್ಷದ ಅಧಿಕಾರಾವಧಿಯನ್ನು ಡಿಸೆಂಬರ್ ಆರಂಭದಲ್ಲಿ ಪೂರ್ಣಗೊಳಿಸಿದ ನಂತರ ಅಕಾಡೆಮಿಗೆ ಮರಳಲು ನಿರ್ಧರಿಸಿದ್ದಾರೆ.

ಐಐಟಿ ಕಾನ್ಪುರ್ ಮತ್ತು ಐಐಎಂ ಕಲ್ಕತ್ತಾ ಹಳೆಯ ವಿದ್ಯಾರ್ಥಿ, ಶ್ರೀ ಸುಬ್ರಮಣಿಯನ್ ಅವರು ಡಿಸೆಂಬರ್ 2018 ರಲ್ಲಿ ಸಿಇಎ ಆಗಿ ನೇಮಕಗೊಳ್ಳುವ ಮುನ್ನ ಭಾರತೀಯ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು.

 

English summary

KV Subramanian Step Down As Govt Chief Economic Adviser

Chief Economic Adviser (CEA) KV Subramanian on October 8 announced that he is stepping down from his post, following the completion of his three-year tenure.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X