For Quick Alerts
ALLOW NOTIFICATIONS  
For Daily Alerts

ಗ್ರಾಮೀಣ ಭಾಗದ ಮನೆಮನೆಗೆ ಲೇಸ್, ಕುರ್ ಕುರೆ, ಅಂಕಲ್ ಚಿಪ್ಸ್ ತಲುಪಿಸಲಿದೆ ಪೆಪ್ಸಿಕೋ

|

ಪೆಪ್ಸಿಕೋ ಕಂಪೆನಿಯ ಹೆಸರಾಂತ ಬ್ರ್ಯಾಂಡ್ ಗಳಾದ ಲೇಸ್, ಕುರ್ ಕುರೆ ಮತ್ತು ಅಂಕಲ್ ಚಿಪ್ಸ್ ಅನ್ನು ಗ್ರಾಮೀಣ ಭಾರತದ ಗ್ರಾಹಕರಿಗೆ ಮನೆ ಬಾಗಿಲಿಗೆ ಡೆಲಿವರಿ ಮಾಡಲಿದೆ. ಯು.ಎಸ್. ಮೂಲದ ಕಂಪೆನಿಯಾದ ಪೆಪ್ಸಿಕೋದಿಂದ ಕಾಮನ್ ಸರ್ವೀಸ್ ಸೆಂಟರ್ಸ್ (ಸಿಎಸ್ ಸಿ) ಜತೆ ಸಹಭಾಗಿತ್ವ ವಹಿಸಲಿದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿ ಮನೆ ಬಾಗಿಲಿಗೆ ತಲುಪಿಸಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಉತ್ತರಪ್ರದೇಶದ ಸುಲ್ತಾನ್ ಪುರ್ ದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಚಾಲ್ತಿಯಲ್ಲಿದೆ. 264 ಗ್ರಾಮ ಮಟ್ಟದ ಎಂಟರ್ ಪ್ರೈಸಸ್ ಗಳು (VLE) ಗ್ರಾಮೀಣ ಭಾಗದಲ್ಲಿ ಡೆಲಿವರಿ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡಲಿವೆ. ಇದರಿಂದ ಗ್ರಾಮೀಣ ಭಾಗದ ಸಂಪರ್ಕಕ್ಕೆ ಅನುಕೂಲ ಮಾತ್ರವಲ್ಲ, ಉದ್ಯೋಗಾವಕಾಶಗಳು ಕೂಡ ಸೃಷ್ಟಿ ಆಗಲಿವೆ.

ಇದಕ್ಕಾಗಿ ಇ- ಕಾಮರ್ಸ್ ಸ್ಟೋರ್ ಗಳು ಆರಂಭವಾಗುತ್ತವೆ. ಅಲ್ಲಿ ವಿವಿಧ ವಸ್ತುಗಳ ಆಯ್ಕೆಗೆ ಅವಕಾಶಗಳು ಇರುತ್ತವೆ. ಜಿಪಿಎಸ್ ಬಳಸಿಕೊಂಡು, ಅಲ್ಲಿ ಗ್ರಾಹಕರು ತಮಗೆ ಅಗತ್ಯ ಇರುವ ವಸ್ತುಗಳನ್ನು ನೋಡಿ, ಗ್ರಾಮೀಣ್ ಇಸ್ಟೋರ್ ಅಪ್ಲಿಕೇಷನ್ ನಲ್ಲಿ ಆರ್ಡರ್ ಮಾಡಬಹುದು.

ಗ್ರಾಮೀಣ ಭಾಗದ ಮನೆಮನೆಗೆ ಲೇಸ್, ಕುರ್ ಕುರೆ ತಲುಪಿಸಲಿದೆ ಪೆಪ್ಸಿಕೋ

ಗ್ರಾಮೀಣ್ ಇಸ್ಟೋರ್ ಅಪ್ಲಿಕೇಷನ್ ಸಿಎಸ್ ಸಿ ಮೂಲಕ ಆತ್ಮನಿರ್ಭರ್ ಭಾರತ್ ಗೆ ಉತ್ತೇಜನ ದೊರೆತಂತಾಗುತ್ತದೆ. ಇಲ್ಲಿಯ ತನಕ ಈ ಇ-ಸ್ಟೋರ್ ಗಳು ಒಂಬತ್ತು ಲಕ್ಷಕ್ಕೂ ಹೆಚ್ಚು ಆರ್ಡರ್ ತೆಗೆದುಕೊಂಡಿದ್ದು, ಈ ಮೊತ್ತ 70 ಕೋಟಿಯಷ್ಟಾಗುತ್ತದೆ. ಸಿಎಸ್ ಸಿ ಮೂಲಕ ಭಾರತದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ, ಹೆಲ್ತ್ ಕೇರ್, ಕೃಷಿ ಹಾಗೂ ಹಣಕಾಸು ಸೇವೆ ಒದಗಿಸಲು ಸಹಾಯ ಆಗುತ್ತದೆ.

ಜುಲೈ ತಿಂಗಳ ಆರಂಭದಲ್ಲಿ ಕೋಕೋ ಕೋಲಾ ಕೂಡ ಸಿಎಸ್ ಸಿ ಮಾರ್ಗದ ಮೂಲಕವೇ ಗ್ರಾಮೀಣ ಪ್ರದೇಶಗಳಾಲ್ಲಿ ವ್ಯಾಪ್ತಿ ವಿಸ್ತರಿಸುವ ಚಿಂತನೆಯಲ್ಲಿತ್ತು. ಸಿಎಸ್ ಸಿ ಜತೆಗೆ ಸಹಭಾಗಿತ್ವ ವಹಿಸಿ, ಫಾಂಟಾ, ಸ್ಪ್ರೈಟ್ ಮುಂತಾದವನ್ನು ಭಾರತದ ಗ್ರಾಮೀಣ ಭಾಗದಲ್ಲಿ ಇ ಕಾಮರ್ಸ್ ಮೂಲಕ ಮಾರಾಟ ಮಾಡುತ್ತಿದೆ.

English summary

Lay’s, Kurkure, Uncle Chipps Delivery To Doorsteps In Rural India By PepsiCo

PepsiCo to delivery Lay's, Kurkure and other brands to doorstep in rural India. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X