For Quick Alerts
ALLOW NOTIFICATIONS  
For Daily Alerts

LIC ADO Recruitment 2023: ಎಲ್‌ಐಸಿಯಲ್ಲಿ 9,394 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

|

ಬೆಂಗಳೂರು, ಜನವರಿ 23: ಭಾರತೀಯ ಜೀವ ವಿಮಾ ನಿಗಮ (LIC)ದಲ್ಲಿ ಭರ್ಜರಿ ಉದ್ಯೋಗ ನೇಮಕಾತಿ ಆರಂಭವಾಗಿದೆ. ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದ್ದು, ಒಟ್ಟು 9,394 ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಜೀವ ವಿಮಾನ ನಿಗಮದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ ಇದಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರುವರಿ 10ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಅಭ್ಯರ್ಥಿಗಳು ಅರ್ಜಿಗಾಗಿ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ www.licindia.in ಭೇಟಿ ಕೋಡಿ.

ಬೃಹತ್ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿರುವ ಎಲ್‌ಐಸಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಏನಿದೆ? ಎಂಬ ಹಲವು ಅಂಶಗಳನ್ನು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

LIC Recruitment: 9,394 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮುಖ್ಯ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ - 2023 ಜನವರಿ -21

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ - 2023 ಫೆಬ್ರವರಿ- 10

ಕಾಲ್‌ ಲೆಟರ್‌ ಡೌನ್‌ಲೋಡ್‌ - 2023 ಮಾರ್ಚ್‌- 4

ಪ್ರಿಲಿಮಿನರಿ ಪರೀಕ್ಷಾ ದಿನಾಂಕ - 2023 ಮಾರ್ಚ್‌ 12

ಮೇನ್‌ ಪರೀಕ್ಷಾ ದಿನಾಂಕ - 2023 ಏಪ್ರಿಲ್‌ 8

ಒಟ್ಟು ಖಾಲಿ ಹುದ್ದೆಗಳು - 9,394

ನಾರ್ತ್‌ ಸೆಂಟ್ರಲ್‌ ವಲಯ ಕಚೇರಿ - 1,033

ಪೂರ್ವ ವಲಯ ಕಚೇರಿ - 1,049

ಈಸ್ಟ್‌ ಸೆಂಟ್ರಲ್‌ ವಲಯ ಕಚೇರಿ - 669

ಸೆಂಟ್ರಲ್‌ ವಲಯ ಕಚೇರಿ - 561

ಸೌತ್‌ ಸೆಂಟ್ರಲ್‌ ವಲಯ ಕಚೇರಿ - 1,408

ಉತ್ತರ ವಲಯ ಕಚೇರಿ - 1,216

ಪಶ್ಚಿಮ ವಲಯ ಕಚೇರಿ - 1,942

ದಕ್ಷಿಣ ವಲಯ ಕಚೇರಿ - 1,516

ವಿದ್ಯಾರ್ಹತೆ - ವಯಸ್ಸಿನ ಮಿತಿ ಏನಿದೆ?

ಎಲ್‌ಐಸಿಯಲ್ಲಿ ಉದ್ಯೋಗ ಹೋಗಬಯಸುವವರು ಖಾಲಿ ಹುದ್ದೆಗಳ ಶೈಕ್ಷಣಿಕ ಅರ್ಹತೆ ಪರಿಶೀಲನೆಗೆ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಲು ನಿಗಮ ತಿಳಿಸಿದೆ. ಇನ್ನೂ ಅಭ್ಯರ್ಥಿಗಳ ವಯಸ್ಸಿನ ಮೀತಿ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಿನೊಳಗಿರಬೇಕು.

ಅರ್ಜಿ ಶುಲ್ಕ ಎಷ್ಟು?

ಭಾರತೀಯ ಜೀವ ವಿಮಾ ನಿಗಮ (LIC)ದಲ್ಲಿ ಅಪ್ರೆಂಟಿಸ್ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ಅರ್ಜಿ ಶುಲ್ಕ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 100 ರೂಪಾಯಿ ಇದೆ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳು 750ರೂಪಾಯಿ ಪಾವತಿಸಬೇಕು. ಇಂಟರ್‌ನೆಟ್‌ ಬ್ಯಾಂಕಿಂಗ್‌, ಐಎಂಪಿಎಸ್‌, ಕ್ಯಾಶ್‌ ಕಾರ್ಡ್‌/ ಮೊಬೈಲ್‌ ವ್ಯಾಲೆಟ್, ಡೆಬಿಟ್ ಕಾರ್ಡ್‌, ಕ್ರೆಡಿಟ್‌ ಕಾರ್ಟ್, ಯುಪಿಐ ಬಳಸಿ ನಿಗದಿತ ಶುಲ್ಕ ತುಂಬಬೇಕು ಎಂದು ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

ಆನ್‌ಲೈನ್‌ ಟೆಸ್ಟ್‌ನಲ್ಲಿ ಉತ್ತೀರ್ಣರಾದ ಅಭ್ಯರ್ತಿಗಳಿಗೆ ಸಂರ್ದಶನ ಇರಲಿದೆ. ಅಲ್ಲದೇ ನೇಮಕಾರಿ ವೇಳೆ ನಡೆಯಲಿರುವ ವೈದ್ಯಕೀಯ ಪರೀಕ್ಷೆಯಲ್ಲೂ ಅಭ್ಯರ್ಥಿ ಪಾಸಾಗಿರುವುದು ಕಡ್ಡಾಯ ಮಾಡಲಾಗಿದೆ.

English summary

LIC ADO Recruitment 2023: LIC Invites Applications For 9,394 Posts, Apply By Feb 10

LIC ADO Recruitment 2023: Life Insurance Corporation of India (LIC) invites applications for 9,394 posts, apply by February 10.
Story first published: Monday, January 23, 2023, 20:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X