For Quick Alerts
ALLOW NOTIFICATIONS  
For Daily Alerts

ಗೋವಾದಲ್ಲಿ ಇನ್ಮುಂದೆ ಮದ್ಯ ದುಬಾರಿ, ಏಪ್ರಿಲ್ 1ರಿಂದ ಹೆಚ್ಚಾಗಲಿದೆ ದರ

|

ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ ಏಪ್ರಿಲ್ 1 ರಿಂದ ಮದ್ಯದ ಬೆಲೆ ಹೆಚ್ಚಾಗಲಿದ್ದು, ಗೋವಾದಲ್ಲಿ ಮದ್ಯ ಕಡಿಮೆ ಎಂದು ತೆರಳುವವರಿಗೆ ಬೆಲೆ ಏರಿಕೆ ಬಿಸಿ ಮುಟ್ಟಲಿದೆ.

ಗೋವಾದಲ್ಲಿ ಏಪ್ರಿಲ್ ೧ ರಿಂದ ಮದ್ಯದ ಬೆಲೆಯನ್ನು 20 ರಿಂದ 50 ಪರ್ಸೆಂಟ್‌ವರೆಗೆ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈಗಾಗಲೇ ಹೇಳಿದ್ದಾರೆ. ತಮ್ಮ ಮೊದಲ ಬಜೆಟ್ ಅನ್ನು ಪ್ರಸ್ತುತಪಡಿಸಿದ ಸಾವಂತ್, ಅಬಕಾರಿ ಸುಂಕ ಮತ್ತು ಮದ್ಯ ಮಾರಾಟದ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಎಲ್ಲಾ ವರ್ಗದ ಮದ್ಯಗಳಿಗೆ 20 ರಿಂದ 50 ಪರ್ಸೆಂಟ್ ರಷ್ಟು ಹೆಚ್ಚಳವಾಗಿದೆ.

ಗೋವಾದಲ್ಲಿ ಇನ್ಮುಂದೆ ಮದ್ಯ ದುಬಾರಿ, ಏಪ್ರಿಲ್ 1ರಿಂದ ಹೆಚ್ಚಾಗಲಿದೆ ದರ

"ನಾವು ಸಾಮಾನ್ಯ ಜನರ ಮೇಲೆ ಹೊರೆ ಹೆಚ್ಚಿಸದಂತೆ ತೆರಿಗೆಯಲ್ಲಿ ಸಣ್ಣ ಏರಿಕೆ ಮಾತ್ರ ಮಾಡಿದ್ದೇವೆ. ನಾವು ಅಬಕಾರಿ ಸುಂಕ ಮತ್ತು ಶುಲ್ಕವನ್ನು ಸ್ವಲ್ಪ ಹೆಚ್ಚಿಸಿದ್ದೇವೆ, ಅಂಚೆ ಚೀಟಿ ಸುಂಕವನ್ನು ಹೆಚ್ಚಿಸಲಾಗಿದೆ, ಭೂ ದರವನ್ನು ಪರಿಷ್ಕರಿಸಲಾಗಿದೆ ಮತ್ತು ನ್ಯಾಯಾಲಯದ ಶುಲ್ಕವನ್ನು ಹೆಚ್ಚಿಸಲಾಗಿದೆ "ಎಂದು ಅವರು ತಮ್ಮ ಬಜೆಟ್ ಪ್ರಸ್ತುತಿಯ ನಂತರ ಮಾಧ್ಯಮಗಳಿಗೆ ಈ ಹಿಂದೆ ತಿಳಿಸಿದ್ದರು.

ಗೋವಾದ ಅಬಕಾರಿ ಆದಾಯ ಸಂಗ್ರಹವು 2018-19ರ ಆರ್ಥಿಕ ವರ್ಷದಲ್ಲಿ 477.67 ಕೋಟಿ ರುಪಾಯಿಗಳಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 16.5 ಪರ್ಸೆಂಟ್ ಹೆಚ್ಚಳವಾಗಿದೆ, ಆದರೆ ಹೊಸ ಅಬಕಾರಿ ಸುಂಕಗಳು ಮತ್ತು ಶುಲ್ಕಗಳು ಜಾರಿಯಾದ ಬಳಿಕ ಸರ್ಕಾರವು ಹೆಚ್ಚುವರಿ 100 ಕೋಟಿ ರುಪಾಯಿಗಳ ಆದಾಯವನ್ನು ಎದುರು ನೋಡುತ್ತಿದೆ.

English summary

Liquor In Goa Set To Cost Upto 50 Percent From April 1

Liquor is set to cost up to 50% more from April 1 in Goa
Story first published: Wednesday, February 12, 2020, 11:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X