For Quick Alerts
ALLOW NOTIFICATIONS  
For Daily Alerts

2020ರ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

|

ಭಾರತದಲ್ಲಿ ಬ್ಯಾಂಕ್ ಗಳಿಗೆ 2020ರ ಸೆಪ್ಟೆಂಬರ್ ತಿಂಗಳಲ್ಲಿ ಯಾವ್ಯಾವ ದಿನ ರಜಾ ದಿನಗಳು ಎಂಬ ಪಟ್ಟಿ ಇಲ್ಲಿದೆ. ರಾಷ್ಟ್ರೀಯ ರಜಾ ದಿನಗಳ ಜತೆಗೆ ಆಯಾ ರಾಜ್ಯಗಳಲ್ಲಿನ ರಜಾ ದಿನಗಳು ಸಹ ಅನ್ವಯ ಆಗುತ್ತದೆ. ಇವೆರಡರ ಜತೆಗೆ ವಾರಾಂತ್ಯದಲ್ಲಿನ ರಜಾ ದಿನಗಳು ಸಹ ಇರುತ್ತವೆ.

ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ರಜಾ ಹಾಗೂ ಎಲ್ಲ ಭಾನುವಾರ ರಜಾ ಇರುತ್ತದೆ. ಇವೆರಡರ ಲೆಕ್ಕದಲ್ಲೇ ಆರು ದಿನ ಆಗಿಹೋಯಿತು. ಬ್ಯಾಂಕಿಂಗ್ ರಜಾ ದಿನಗಳು ಗೊತ್ತಿರುವುದು ಉತ್ತಮ. ಏಕೆಂದರೆ, ಯಾವುದಾದರೂ ಮುಖ್ಯವಾದ ಬ್ಯಾಂಕ್ ವ್ಯವಹಾರವನ್ನು ಅದೇ ದಿನ ಇರಿಸಿಕೊಂಡಲ್ಲಿ ಸಮಸ್ಯೆ ಆಗಬಹುದು.

2020ರ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ

ಬಹುತೇಕ ವ್ಯವಹಾರಗಳು ಈಚೆಗೆ ಆನ್ ಲೈನ್ ಆಗಿಬಿಟ್ಟಿವೆ. ಆದರೂ ಬ್ಯಾಂಕ್ ಗಳಿಗೆ ಭೇಟಿ ನೀಡುವ ಮುನ್ನ ಈ ಪಟ್ಟಿ ನಿಮಗೆ ಗೊತ್ತಿರಲಿ.

2020ರ ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿ:
ಸೆಪ್ಟೆಂಬರ್ 1, 2020 ಮೂರನೇ ಓಣಂಇಂದ್ರ ಜಾತ್ರೆ (ಕೇರಳದಲ್ಲಿ ರಜಾ)

ಸೆಪ್ಟೆಂಬರ್ 2, 2020 ಶ್ರೀ ನಾರಾಯಣ ಗುರು ಜಯಂತಿ (ಕೇರಳ)

ಸೆಪ್ಟೆಂಬರ್ 6, 2020 ಭಾನುವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 12, 2020 ಎರಡನೇ ಶನಿವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 13, 2020 ಭಾನುವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 15, 2020 ಮಹಾಲಯ ಅಮಾವಾಸ್ಯೆ (ಹಲವು ರಾಜ್ಯಗಳಲ್ಲಿ ರಜಾ)

ಸೆಪ್ಟೆಂಬರ್ 16, 2020 ವಿಶ್ವಕರ್ಮ ದಿನ (ರಾಜಸ್ಥಾನ, ಹರ್ಯಾಣ ಹಾಗೂ ಪಂಜಾಬ್ ನಲ್ಲಿ ರಜಾ)

ಸೆಪ್ಟೆಂಬರ್ 20, 2020 ಭಾನುವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 21, 2020 ಶ್ರೀ ನಾರಾಯಣಗುರು ಸಮಾಧಿ (ಕೇರಳದಲ್ಲಿ ರಜಾ)

ಸೆಪ್ಟೆಂಬರ್ 23, 2020 ಹರ್ಯಾಣದಲ್ಲಿ ಹುತಾತ್ಮ ದಿನಾಚರಣೆ (ಹರ್ಯಾಣ)

ಸೆಪ್ಟೆಂಬರ್ 26, 2020 ನಾಲ್ಕನೇ ಶನಿವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 27, 2020 ಭಾನುವಾರ (ದೇಶದಾದ್ಯಂತ ರಜಾ)

ಸೆಪ್ಟೆಂಬರ್ 28, 2020 ಭಗತ್ ಸಿಂಗ್ ಜೀ ಜಯಂತಿ (ಪಂಜಾಬ್ ನಲ್ಲಿ ರಜಾ)

English summary

List of Bank Holidays in September 2020

Here is the list of Bank holidays of September 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X