For Quick Alerts
ALLOW NOTIFICATIONS  
For Daily Alerts

LPG ಸಿಲಿಂಡರ್‌ ಇನ್ನೊಂದು ವರ್ಷದಲ್ಲಿ 100 ರಿಂದ 150 ರುಪಾಯಿ ಏರಿಕೆ ಸಾಧ್ಯತೆ, ಏಕೆ ಗೊತ್ತಾ?

|

ನೀವು ಈ ವಿಚಾರವನ್ನು ಗಮನಿಸಿದ್ದಿರೋ ಇಲ್ವೋ ತಿಳಿದಿಲ್ಲ. ಆದರೆ ಪ್ರಸಕ್ತ ಹಣಕಾಸು ವರ್ಷದ ಜುಲೈ-ಜನವರಿ ಅವಧಿಯಲ್ಲಿ ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್‌ಗೆ 10 ಪರ್ಸೆಂಟ್ ಏರಿಕೆಯಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿನ ಬೆಳವಣಿಗೆಗಳೊಂದಿಗೆ, 2022ರ ಹಣಕಾಸು ವರ್ಷದ ಆರಂಭದಲ್ಲಿ ತೈಲ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರ ಎದುರು ನೋಡುತ್ತಿದೆ. ಈ ಕ್ರಮವು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದ್ದು, ಅಡುಗೆ ಅನಿಲದ ಬೆಲೆ ಮುಂದಿನ ಒಂದು ವರ್ಷದಲ್ಲಿ ಪ್ರತಿ ಸಿಲಿಂಡರ್‌ಗೆ 100 ರಿಂದ 150 ರುಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತೈಲ ಬೆಲೆ ಇಳಿಕೆಯ ಪರಿಣಾಮ

ತೈಲ ಬೆಲೆ ಇಳಿಕೆಯ ಪರಿಣಾಮ

ಇತ್ತೀಚಿನ ಕೆಲ ವಾರಗಳಲ್ಲಿ ತೈಲ ಬೆಲೆಯು ಇಳಿಮುಖದತ್ತ ಸಾಗಿದೆ. ಕಡಿಮೆ ತೈಲ ಬೆಲೆಗಳ ಲಾಭವನ್ನು ಪಡೆದುಕೊಂಡು, ಸಬ್ಸಿಡಿ ಪಡೆದ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕ್ರಮೇಣ ಹೆಚ್ಚಿಸಲು ಸರ್ಕಾರವು, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಅನುಮತಿ ನೀಡಬಹುದು. ಇದರಿಂದಾಗಿ ಅರ್ಹ ಗ್ರಾಹಕರಿಗೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಪಾವತಿಸುವ ಸಂಪೂರ್ಣ ಸಬ್ಸಿಡಿಯನ್ನು ಒಂದು ವರ್ಷದಲ್ಲಿ ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜುಲೈ 2019 ರಿಂದ ಜನವರಿ 2020 ರ ಅವಧಿಯಲ್ಲಿ 63 ರುಪಾಯಿ ಏರಿಕೆ

ಜುಲೈ 2019 ರಿಂದ ಜನವರಿ 2020 ರ ಅವಧಿಯಲ್ಲಿ 63 ರುಪಾಯಿ ಏರಿಕೆ

ಈಗಾಗಲೇ ಜುಲೈ 2019 ರಿಂದ ಜನವರಿ 2020 ರ ಅವಧಿಯಲ್ಲಿ ಒಎಂಸಿಗಳು ಸಬ್ಸಿಡಿ ಪಡೆದ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 63 ರುಪಾಯಿ ಹೆಚ್ಚಿಸಿವೆ. ಪ್ರಸ್ತುತ ಜಾಗತಿಕ ತೈಲ ಬೆಲೆಗಳಲ್ಲಿ, ತೈಲ ಕಂಪನಿಗಳು ಸಬ್ಸಿಡಿ ಪಡೆದ LPG ಸಿಲಿಂಡರ್ (14.2 ಕೆಜಿ) ದರವನ್ನು ತಿಂಗಳಿಗೆ ಕೇವಲ 10 ರುಪಾಯಿನಷ್ಟು ಹೆಚ್ಚಿಸಿದರೆ, 15 ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವ ಅವಶ್ಯಕತೆಯೇ ಇರುವುದಿಲ್ಲ.

 

ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ತೈಲ ಬೆಲೆ ಮತ್ತಷ್ಟು ಇಳಿದರೆ ಸಬ್ಸಿಡಿ ಕಡಿತ?

ತೈಲ ಬೆಲೆ ಮತ್ತಷ್ಟು ಇಳಿದರೆ ಸಬ್ಸಿಡಿ ಕಡಿತ?

ಸಬ್ಸಿಡಿ ಪಡೆದ ಎಲ್‌ಪಿಜಿ ಸಿಲಿಂಡರ್‌ನ (14.2 ಕೆ.ಜಿ) ಬೆಲೆ ಪ್ರಸ್ತುತ ಸುಮಾರು 557 ರುಪಾಯಿನಷ್ಟಿದೆ. ಸರ್ಕಾರವು 157 ರುಪಾಯಿ ಸಬ್ಸಿಡಿಯನ್ನು ಅರ್ಹ ಗ್ರಾಹಕರ ಖಾತೆಗೆ ನೇರವಾಗಿ ನೀಡುತ್ತದೆ. 2021ರ ಹಣಕಾಸು ವರ್ಷದಲ್ಲಿ ತೈಲ ಬೆಲೆಗಳು ಹೆಚ್ಚಿನ ಭಾಗಗಳಲ್ಲಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಕ್ಕಿಂತ ಕಡಿಮೆಗೆ ಇಳಿದರೆ ಸಬ್ಸಿಡಿ ಮಟ್ಟ ಮತ್ತಷ್ಟು ಕುಸಿಯಬಹುದು.

ಸಬ್ಸಿಡಿ ಕಡಿಮೆಯಾದಂತೆ ಒಎಂಸಿಗಳ ಕಾರ್ಯನಿರತ ಬಂಡವಾಳ ಹೆಚ್ಚಳ

ಸಬ್ಸಿಡಿ ಕಡಿಮೆಯಾದಂತೆ ಒಎಂಸಿಗಳ ಕಾರ್ಯನಿರತ ಬಂಡವಾಳ ಹೆಚ್ಚಳ

2019ರ ಹಣಕಾಸು ವರ್ಷದ ಕೊನೆಯಲ್ಲಿ, ಒಎಂಸಿಗಳು ಎಲ್‌ಪಿಜಿ ಅಥವಾ ಸೀಮೆಎಣ್ಣೆಗೆ ಸಬ್ಸಿಡಿ ಪರಿಹಾರದ ಕಾರಣ ಒಟ್ಟು, 34,900 ಕೋಟಿ ರುಪಾಯಿಗಳನ್ನು ಸರ್ಕಾರದಿಂದ ಪಡೆಯಬೇಕಾಗಿತ್ತು. LPGಯನ್ನು ಅನಿಯಂತ್ರಣಗೊಳಿಸುವುದರಿಂದ ಒಎಂಸಿಗಳ ಕಾರ್ಯನಿರತ ಬಂಡವಾಳ ಹೆಚ್ಚಾಗುತ್ತದೆ.

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) 2019ರ ಹಣಕಾಸು ವರ್ಷದಲ್ಲಿ ಒಟ್ಟು 43,300 ಕೋಟಿ ರುಪಾಯಿ ವಸೂಲಿ ಮಾಡಿವೆ, ಅದರಲ್ಲಿ ಎಲ್‌ಪಿಜಿ 31,500 ಕೋಟಿ ( 73 ಪರ್ಸೆಂಟ್) ರಷ್ಟಿದೆ. ಸೀಮೆಎಣ್ಣೆಯ ವಿಚಾರದಲ್ಲಿ ಸಬ್ಸಿಡಿ ಬೆಂಬಲವು ಈಗಾಗಲೇ ಕುಸಿದಿದೆ. ಪಿಡಿಎಸ್ ವ್ಯವಸ್ಥೆಯ ಮೂಲಕ ಇಂಧನ ಹರಿವನ್ನು ರಾಜ್ಯಗಳು ಗುರಿಯಾಗಿಸಿಕೊಂಡರೆ ಈ ಸಬ್ಸಿಡಿಯನ್ನು ಸಹ ತೆಗೆದುಕೊಳ್ಳಬಹುದು.

 

English summary

LPG Cylinder Prices Chances To Rise Upto 150 Rupees in 1 Year

LPG cylinder prices could shoot up by another ₹100-150 per cylinder over the next one year
Story first published: Thursday, January 30, 2020, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X