For Quick Alerts
ALLOW NOTIFICATIONS  
For Daily Alerts

ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಮೆಕೆಂಜಿ ಬೇಜೋಸ್

|

ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್‌ರ ಮಾಜಿ ಪತ್ನಿಯಾದ ಮೆಕೆಂಜಿ ಬೇಜೋಸ್, ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಬಡ್ತಿ ಪಡೆದಿರುವ ಮೆಕೆಂಜಿ ಜಗತ್ತಿನ 18ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಮೆಕೆಂಜಿ

ಬ್ಲೂಮ್‌ಬರ್ಗ್ ಬಿಲಿಯನೇರ್‌ ಸೂಚ್ಯಂಕದ ಪ್ರಕಾರ 18ನೇ ಸ್ಥಾನಕ್ಕೇರಿದ ಮೆಕೆಂಜಿ ಬೇಜೋಸ್ ಅವರ ಸಂಪತ್ತು ಈ ವರ್ಷ 8.2 ಬಿಲಿಯನ್ ಡಾಲರ್‌ನಿಂದ 45.3 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ. ಈ ಮೂಲಕ ಜಗತ್ತಿನ 18 ನೇ ಶ್ರೀಮಂತರಾಗಿ ಹೊರಹೊಮ್ಮಿದ್ದು, ಇವರ ನಂತರದ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ಕೊರೊನಾಯಿಂದಾಗಿ ಮುಕೇಶ್ ಅಂಬಾನಿ 3.6 ಲಕ್ಷ ಕೋಟಿ ನಷ್ಟವನ್ನು ಅನುಭವಿಸಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ಕೊರೊನೊಯಿಂದ ಕರಗಿತು ಮುಕೇಶ್ ಅಂಬಾನಿಯ 3.65 ಲಕ್ಷ ಕೋಟಿ ಸಂಪತ್ತು: ಶ್ರೀಮಂತರ ಪಟ್ಟಿಯಲ್ಲಿ ಚೀನಿಯರಿಗೆ ಬಡ್ತಿಕೊರೊನೊಯಿಂದ ಕರಗಿತು ಮುಕೇಶ್ ಅಂಬಾನಿಯ 3.65 ಲಕ್ಷ ಕೋಟಿ ಸಂಪತ್ತು: ಶ್ರೀಮಂತರ ಪಟ್ಟಿಯಲ್ಲಿ ಚೀನಿಯರಿಗೆ ಬಡ್ತಿ

ಜಗತ್ತಿನ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಒ ಜೆಫ್ ಬೇಜೋಸ್‌ರಿಂದ ಡಿವೋರ್ಸ್ ಪಡೆದ ಬಳಿಕ ಮೆಕೆಂಜಿ ಬೇಜೋಸ್ ಅಮೆಜಾನ್‌ನಲ್ಲಿ 4 ಪರ್ಸೆಂಟ್‌ನಷ್ಟು ಪಾಲನ್ನು ಹೊಂದಿದ್ದಾರೆ. ಇಷ್ಟಾದ್ರೂ ಜೆಫ್ ಬೇಜೋಸ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿಯೇ ಮುಂದುವರಿದಿದ್ದಾರೆ.

English summary

Mackenzie Bezos Overtakes Mukesh Ambani In Net Worth

MacKenzie Bezos, the ex-wife of Amazon Founder Jeff Bezos, has overtaken India's richest person Mukesh Ambani in net worth.
Story first published: Wednesday, April 15, 2020, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X