For Quick Alerts
ALLOW NOTIFICATIONS  
For Daily Alerts

ಕನಿಷ್ಠ ಮೂರು ತಿಂಗಳ ಬಾಡಿಗೆಯನ್ನು ಮುಂದೂಡಲು 'ಮಹಾ' ಸರ್ಕಾರ ಸೂಚನೆ

|

ಒಂದು ವೇಳೆ ಬಾಡಿಗೆದಾರರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೂ ಅವರನ್ನು ಮನೆ ಬಿಟ್ಟು ಕಳಿಸಬಾರದು. ಮೂರು ತಿಂಗಳ ಬಾಡಿಗೆಯನ್ನು ಮುಂದಕ್ಕೆ ಹಾಕಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ. ಕೊರೊನಾ ವ್ಯಾಪಿಸುವುದನ್ನು ತಡೆಗಟ್ಟಬೇಕು ಎಂಬ ಕಾರಣಕ್ಕೆ ದೇಶದಾದ್ಯಂತ ಮೇ 3ನೇ ತಾರೀಕಿನ ತನಕ ಲಾಕ್ ಡೌನ್ ಘೋಷಣೆ ಮಾಡಿದ್ದು, ಬಾಡಿಗೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಮನೆ ಖಾಲಿ ಮಾಡಿಸಬಾರದು ಎಂದು ಸೂಚಿಸಲಾಗಿದೆ.

ರಾಜ್ಯ ವಸತಿ ಇಲಾಖೆಯು ಭೂ ಮಾಲೀಕರು/ ಮನೆ ಮಾಲೀಕರಿಗೆ ಕನಿಷ್ಠ ಮೂರು ತಿಂಗಳ ಬಾಡಿಗೆಯನ್ನು ಮುಂದಕ್ಕೆ ಹಾಕುವಂತೆ ಸೂಚನೆ ನೀಡಿದೆ. ಬಾಡಿಗೆ ನೀಡಿಲ್ಲ ಎಂಬ ಕಾರಣಕ್ಕೆ ಈ ಅವಧಿಯಲ್ಲಿ ಯಾವುದೇ ಬಾಡಿಗೆದಾರರನ್ನು ಮನೆ ಬಿಡಿಸಬಾರದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

 ಕನಿಷ್ಠ ಮೂರು ತಿಂಗಳ ಬಾಡಿಗೆಯನ್ನು ಮುಂದೂಡಲು 'ಮಹಾ' ಸರ್ಕಾರ ಸೂಚನೆ

ಈಗಿನ ಲಾಕ್ ಡೌನ್ ನಿಂದ ಆರ್ಥಿಕತೆಯು ಸ್ಥಗಿತಗೊಂಡಿದೆ. ಎಲ್ಲ ವ್ಯಾಪಾರ- ವ್ಯವಹಾರವು ನಿಂತುಹೋಗಿದೆ. ಕೊರೊನಾ ವ್ಯಾಪಕವಾಗಿ ಹರಡಿರುವುದು ಭಾರತ ಸೇರಿದಂತೆ ವಿಶ್ವದಾದ್ಯಂತ ಆರ್ಥಿಕತೆಗೆ ಹೊಡೆತ ನೀಡಿದೆ. ಇನ್ನು ಮಹಾರಾಷ್ಟ್ರದಲ್ಲಿ 3200ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 2000ದಷ್ಟು ಮುಂಬೈನಿಂದಲೇ ದಾಖಲಾಗಿದೆ. ಇನ್ನು ಸಾವಿನ ಸಂಖ್ಯೆ 200ರ ಸಮೀಪ ಇದೆ.

English summary

Maharashtra Government Advisory To Defer 3 Month House Rent

Corona effect: Maharashtra government issued advisory to land lords and house owners to defer 3 months rent.
Story first published: Friday, April 17, 2020, 21:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X