For Quick Alerts
ALLOW NOTIFICATIONS  
For Daily Alerts

ಜನವರಿ ತಿಂಗಳಿನಲ್ಲಿ ದೇಶದ ಬೃಹತ್ ಕಂಪನಿಗಳ ಕಾರು ಮಾರಾಟ ಇಳಿಕೆ

|

ದೇಶದಲ್ಲಿನ ಆರ್ಥಿಕತೆ ಮಂದಗತಿಯು ಶೀಘ್ರದಲ್ಲಿ ಚೇತರಿಕೆ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. 2020ರ ಜನವರಿಯಲ್ಲಿ ಮಾರುತಿ ಸುಜುಕಿ ಕಂಪನಿ ಹೊರತುಪಡಿಸಿ ಬಹುತೇಕ ಕಾರು ತಯಾರಿಕಾ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಕಾರು ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶಗಳು ಗಮನದಲ್ಲಿರಲಿಕಾರು ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶಗಳು ಗಮನದಲ್ಲಿರಲಿ

ಮಾರುತಿ ಸುಜುಕಿ ಕಂಪನಿಯು ಜನವರಿ ತಿಂಗಳಿನಲ್ಲಿ 1,42,250 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,42,150 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಹೀಗಾಗಿ ಮಾರುತಿ ಸುಜುಕಿ ಕಂಪನಿಯ ಯುನಿಟ್‌ಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದೆ.

ಜನವರಿ ತಿಂಗಳಿನಲ್ಲಿ ದೇಶದ ಬೃಹತ್ ಕಂಪನಿಗಳ ಕಾರು ಮಾರಾಟ ಇಳಿಕೆ

ಆದರೆ ಮಹೀಂದ್ರಾ, ಹುಂಡೈ ಮತ್ತು ಟೊಯೋಟ, ಟಾಟಾ ಮೋಟಾರ್ಸ್ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಪ್ರಯಾಣಿಕ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ 17 ಪರ್ಸೆಂಟ್ ಇಳಿದು ಜನವರಿಯಲ್ಲಿ 19,787ಕ್ಕೆ ತಲುಪಿದೆ. ವಾಣಿಜ್ಯ ವಿಭಾಗದಲ್ಲಿ ೧ ಪರ್ಸೆಂಟ್ ಹೆಚ್ಚಳವಾಗಿ 22,851ಕ್ಕೆ ತಲುಪಿದೆ.

ಇನ್ನು ಹುಂಡೈ ಮೋಟಾರ್ ಇಂಡಿಯಾ ಕಂಪನಿ ಕಾರು ಮಾರಾಟದಲ್ಲಿ 3.37ರಷ್ಟು ಕಡಿಮೆಯಾಗಿದೆ. ಟೊಯೋಟ ಕಿರ್ಲೋಸ್ಕರ್ ಮೋಟರ್‌ನ ಮಾರಾಟ 41 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ.

English summary

Major Car companies sales down in January 2020

India's Major Car companies except maruthi suzuki company vehical sales down in january 2020
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X