For Quick Alerts
ALLOW NOTIFICATIONS  
For Daily Alerts

Internet Crash: ಬಿಬಿಸಿ ಸೇರಿದಂತೆ ಪ್ರಮುಖ ವೆಬ್‌ಸೈಟ್ಸ್‌ ಸರ್ವರ್ ಡೌನ್‌

|

ಭಾರೀ ಅಪರೂಪ ಎಂಬಂತೆ ವಿಶ್ವದ ಪ್ರಮುಖ ವೆಬ್‌ಸೈಟ್‌ಗಳು ಒಂದೇ ಸಮಯದಲ್ಲಿ ಇಂಟರ್‌ನೆಟ್‌ ನಿಲುಗಡೆ ಸಮಸ್ಯೆಯನ್ನು ಎದುರಿಸಿವೆ. ವಿಶ್ವದ ಪ್ರಮುಖ ವೆಬ್‌ಸೈಟ್‌ಗಳಾದ ಬಿಬಿಸಿ, ಅಮೆಜಾನ್ ಹಾಗೂ ಯುಕೆ ಸರ್ಕಾರದ ವೆಬ್‌ಸೈಟ್‌ ಕೂಡ ಇಂಟರ್ನೆಟ್‌ ಕ್ರ್ಯಾಶ್‌ ಎದುರಿಸಿದೆ.

ಅಮೆರಿಕಾ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸರ್ವೀಸ್ ಪ್ರೊವೈಡರ್ ಇಂಟರ್‌ನೆಟ್‌ನ ತಾಂತ್ರಿಕ ದೋಷದ ಕುರಿತು ದೃಢಪಡಿಸಿದೆ. ಆ ಬಳಿಕ ಪ್ರಮುಖ ಸರ್ವರ್ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಅಮೆಜಾನ್, ಸಿಎನ್ಎನ್, ರೆಡ್ಡಿಟ್, ದಿ ಗಾರ್ಡಿಯನ್, ಇಂಡಿಪೆಂಡೆಂಟ್, ಬಿಬಿಸಿ ನ್ಯೂಸ್, ಸ್ಪೆಕ್ಟೇಟರ್, ಫೈನಾನ್ಷಿಯಲ್ ಟೈಮ್ಸ್ ಮತ್ತು ಯುಕೆ ಸರ್ಕಾರಿ ವೆಬ್‌ಸೈಟ್ ಇಂದು ಬೆಳಿಗ್ಗೆ ಪ್ರಮುಖ ಸರ್ವರ್ ಸಮಸ್ಯೆಗೆ ಒಳಗಾಗಿದ್ದವು.

Internet Crash: ಬಿಬಿಸಿ ಸೇರಿದಂತೆ ಪ್ರಮುಖ ವೆಬ್‌ಸೈಟ್ಸ್‌ ಡೌನ್‌

ಸುಮಾರು 21,000 ರೆಡ್ಡಿಟ್ ಬಳಕೆದಾರರು ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದರೆ, 2,000 ಕ್ಕೂ ಹೆಚ್ಚು ಜನರು ಅಮೆಜಾನ್‌ ವೆಬ್‌ಸೈಟ್‌ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ.

''ಎಲ್ಲಾ ಸೇವೆಗಳ ವೇಗದ ಚೇತರಿಕೆಗೆ ಗಮನ ಹರಿಸಿದ್ದೇವೆ ಮತ್ತು ಈ ತೊಂದರೆಯನ್ನು ಪರಿಹರಿಸಿದ್ದೇವೆ'' ಎಂದು ಕಂಪನಿಯು ಮಧ್ಯಾಹ್ನ ತಿಳಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಕೆ ಸರ್ಕಾರಿ ಟ್ವಿಟ್ಟರ್ ಹ್ಯಾಂಡಲ್ '' Http://GOV.UK ವೆಬ್‌ಸೈಟ್‌ನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅಂದರೆ ಪ್ರಸ್ತುತ ಬಳಕೆದಾರರು ವೆಬ್‌ಸೈಟ್ ಪ್ರವೇಶಿಸಲು ಸಾಧ್ಯವಾಗದಿರಬಹುದು. ಇದು ಸರ್ಕಾರದ ಇತರೆ ಸೈಟ್‌ಗಳ ಮೇಲೂ ಪರಿಣಾಮ ಬೀರುವ ವ್ಯಾಪಕ ಸಮಸ್ಯೆಯಾಗಿದೆ. ನಾವು ಇದನ್ನು ತುರ್ತಾಗಿ ತನಿಖೆ ಮಾಡುತ್ತಿದ್ದೇವೆ'' ಎಂದು ಟ್ವೀಟ್ ಮಾಡಿದ್ದಾರೆ.

ಯುಕೆ ಸಮಯ ಬೆಳಿಗ್ಗೆ 11 ಗಂಟೆಯ ಮೊದಲು ಪ್ರಾರಂಭವಾದ ಇಂಟರ್‌ನೆಟ್ ಕ್ರ್ಯಾಶ್, ವಿವಿಧ ಸೈಟ್‌ಗಳಿಗೆ ಭೇಟಿ ನೀಡುವವರಿಗೆ "Error 503 Service Unavailable" ಮತ್ತು "connection failure" ಎಂದು ಕಾಣಿಸಿದೆ'' ಎಂದು ಟ್ವೀಟ್‌ ಮೂಲಕ ಬಳಕೆದಾರರು ತಿಳಿಸಿದ್ದಾರೆ.

English summary

Major Websites Including BBC Amazon And Gov.uk Hit Massive Internet outage

A leading internet content delivery service has identified the source of an outage on its platform which may have caused a worldwide internet issue and taken dozens of major websites offline.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X