For Quick Alerts
ALLOW NOTIFICATIONS  
For Daily Alerts

34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

|

ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾದಿಂದ ಆಯ್ದ ಕಾರು ಮಾಡೆಲ್ ಗಳ ಬೆಲೆಯಲ್ಲಿ 34,000 ರುಪಾಯಿ ತನಕ ಬೆಲೆ ಏರಿಕೆ ಮಾಡಲಾಗಿದೆ ಎಂದು ಸೋಮವಾರ ಹೇಳಲಾಗಿದೆ. ಹೆಚ್ಚುತ್ತಿರುವ ಇನ್ ಪುಟ್ ವೆಚ್ಚದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜನವರಿ 18, 2021ರಿಂದ ಈ ಬೆಲೆ ಏರಿಕೆ ಜಾರಿಗೆ ಬಂದಿದೆ ಎಂದು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಲಾಗಿದೆ.

 

ವಿವಿಧ ಮಾಡೆಲ್ ಗಳ ಮೇಲೆ ರು. 34,000 (ಎಕ್ಸ್ ಶೋ ರೂಂ ದೆಹಲಿ) ತನಕ ಬೆಲೆ ಬದಲಾವಣೆ ಆಗಲಿದೆ ಎಂದು ಸೇರಿಸಲಾಗಿದೆ. ಆದರೆ ಯಾವ ಮಾಡೆಲ್ ಗಳ ಬೆಲೆ ಏರಿಕೆ ಮಾಡಲಾಗಿದೆ ಎಂಬ ಬಗ್ಗೆ ಕಂಪೆನಿಯಿಂದ ನಿರ್ದಿಷ್ಟ ಮಾಹಿತಿ ನೀಡಿಲ್ಲ. ಡೀಲರ್ ಗಳು ಹೇಳುವಂತೆ, ಬಹುತೇಕ ಮಾಡೆಲ್ ಗಳ ಮೇಲೆ ಇದರ ಪರಿಣಾಮ ಆಗಲಿದೆ. ಆದರೆ ಕೆಲವು ಮಾಡೆಲ್ ಗಳ ಆಯ್ದ ಅವತರಣಿಕೆ ಬೆಲೆಯಲ್ಲಿ ಏರಿಕೆ ಮಾಡಿಲ್ಲ.

 

ಮಾರುತಿ ಸುಜುಕಿಯಿಂದ ಆನ್ ಲೈನ್ ಹಣಕಾಸು ಸಾಲ ಯೋಜನೆಗೆ ಚಾಲನೆಮಾರುತಿ ಸುಜುಕಿಯಿಂದ ಆನ್ ಲೈನ್ ಹಣಕಾಸು ಸಾಲ ಯೋಜನೆಗೆ ಚಾಲನೆ

ಜನವರಿಯಿಂದ ವಾಹನಗಳ ದರ ಏರಿಕೆ ಮಾಡುವುದಾಗಿ ಕಳೆದ ತಿಂಗಳು ಮಾರುತಿ ಸುಜುಕಿ ಹೇಳಿತ್ತು. ಕಳೆದ ವರ್ಷದಿಂದ ಈಚೆಗೆ ವಿವಿಧ ಇನ್ ಪುಟ್ ವೆಚ್ಚಗಳ ಕಾರಣಕ್ಕೆ ವಾಹನಗಳ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಬೆಲೆ ಏರಿಕೆಗೂ ಮುಂಚೆ ಮಾರುತಿ ಸುಜುಕಿ ತಯಾರಿಸುವ ವಾಹನಗಳ ಬೆಲೆ ಕನಿಷ್ಠ 2.95 ಲಕ್ಷದಿಂದ ಶುರುವಾಗಿ ರು. 11.52 ಲಕ್ಷದ ತನಕ ಇತ್ತು.

34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಆರಂಭಿಕ ಹಂತದ ಸಣ್ಣ ಕಾರು ಆಲ್ಟೋ ಕನಿಷ್ಠ ಬೆಲೆಯದ್ದಾದರೆ, ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್) XL6 ಗರಿಷ್ಠ ಮಟ್ಟದ್ದಾಗಿದೆ.

English summary

Maruti Suzuki India Increased Car Price Up to Rs 34000

India's leading car manufacturer Maruti Suzuki increased selected model price up to Rs 34,000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X