For Quick Alerts
ALLOW NOTIFICATIONS  
For Daily Alerts

ಈ ವಾರ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾಗಿದೆ ಮೆಟಾ!

|

ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಈ ವಾರ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಮಾಡಲು ಚಿಂತನೆ ನಡೆಸಿದೆ. ಸಾವಿರಾರು ಉದ್ಯೋಗಿಳ ಮೇಲೆ ಇದು ಪ್ರಭಾವ ಉಂಟು ಮಾಡಲಿದೆ. ಇನ್ನುಈಗಾಗಲೇ ಟ್ವಿಟ್ಟರ್ ಜಾಗತಿಕವಾಗಿ ತನ್ನ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಈಗ ಮೆಟಾ ಕೂಡಾ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಸುದ್ದಿ ಹೊರಬಿದ್ದಿದೆ.

ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಭಾನುವಾರ ವರದಿ ಮಾಡಿದೆ. ಆದರೆ ಮೆಟಾ ಮಾತ್ರ ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನ ಸಂಸ್ಥೆಯಾದ ಮೆಟಾ ಭಾರೀ ನಷ್ಟವನ್ನು ಕಂಡಿದೆ.

 ಟ್ವಿಟ್ಟರ್‌ ಉದ್ಯೋಗಿಗಳ ವಜಾ ಸಮರ್ಥಿಸಿದ ಎಲಾನ್ ಮಸ್ಕ್, ಹೇಳಿದ್ದೇನು? ಟ್ವಿಟ್ಟರ್‌ ಉದ್ಯೋಗಿಗಳ ವಜಾ ಸಮರ್ಥಿಸಿದ ಎಲಾನ್ ಮಸ್ಕ್, ಹೇಳಿದ್ದೇನು?

ಷೇರು ಮಾರುಕಟ್ಟೆಯಲ್ಲಿ ಸುಮಾರು 67 ಬಿಲಿಯನ್ ಡಾಲರ್ ಷೇರು ಮೆಟಾ ಕಳೆದುಕೊಂಡಿದೆ. ಈಗಾಗಲೇ ಈ ವರ್ಷ ಮೆಟಾ ಅರ್ಧ ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯವನ್ನು ಕಳೆದುಕೊಂಡಿದೆ. ಇದಕ್ಕೆ 67 ಬಿಲಿಯನ್ ಡಾಲರ್ ಕೂಡಾ ಸೇರ್ಪಡೆಯಾಗಿದೆ.

ಈ ವಾರ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾಗಿದೆ ಮೆಟಾ!

ಮೆಟಾಗೆ ಪ್ರಭಾವ ಬೀರಿದ ಹಲವು ಅಂಶಗಳು

ಮೆಟಾದ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರಿದೆ. ಪ್ರಮುಖವಾಗಿ ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿತ, ಟಿಕ್‌ಟಾಕ್‌ನಿಂದ ಸ್ಪರ್ಧೆ, ಆಪಲ್‌ ಐಫೋನ್‌ನಲ್ಲಿ ಪ್ರಮುಖ ಗೌಪ್ಯತೆ ಬದಲಾವಣೆಗಳು, ಮೆಟಾವರ್ಸ್‌ನಲ್ಲಿ ಭಾರೀ ಖರ್ಚು, ನಿಯಂತ್ರಣದ ಅಗತ್ಯತೆಗಳ ನಡುವೆ ಮೆಟಾಗೆ ಭಾರೀ ನಷ್ಟ ಉಂಟಾಗುತ್ತಿದೆ.

ಇನ್ನು ಮೆಟಾದ ಮೇಲೆ ಮಾಡಿದ ಹೂಡಿಕೆ ಫಲ ನೀಡಬೇಕಾದರೆ ಸುಮಾರು ಒಂದು ದಶಕವಾದರೂ ಬೇಕಾಗುತ್ತದೆ ಎಂದು ಮೆಟಾ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಅಂದಾಜು ಮಾಡಿದ್ದಾರೆ. ಈ ನಡುವೆ ವೆಚ್ಚವನ್ನು ಕೊಂಚ ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ಬಂದು ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥರನ್ನೇ ಹಿಂದಿಕ್ಕಿದ ಎಲಾನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥರನ್ನೇ ಹಿಂದಿಕ್ಕಿದ ಎಲಾನ್ ಮಸ್ಕ್

ಈ ಹಿಂದೆ ಜುಕರ್‌ಬರ್ಗ್ ಹೇಳಿದ್ದೇನು?

ಅಕ್ಟೋಬರ್ ಅಂತ್ಯದಲ್ಲಿ ಕೊನೆಯ ಗಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾರ್ಕ್ ಜುಕರ್‌ಬರ್ಗ್, "2023 ರಲ್ಲಿ, ನಾವು ಹೆಚ್ಚಿನ ಆದ್ಯತೆಯ ಬೆಳವಣಿಗೆ ಹೊಂದುವ ಕ್ಷೇತ್ರಗಳ ಮೇಲೆ ನಮ್ಮ ಹೂಡಿಕೆಗಳನ್ನು ಕೇಂದ್ರೀಕರಿಸಲಿದ್ದೇವೆ. ಇದರರ್ಥ ಕೆಲವು ತಂಡಗಳು ಅರ್ಥಪೂರ್ಣವಾಗಿ ಬೆಳೆಯುತ್ತವೆ. 2023ರ ವೇಳೆಗೆ ಈ ಸಂಸ್ಥೆಯು ಸರಿ ಸುಮಾರು ಈ ಮೊದಲಷ್ಟೆ ಅಥವಾ ಈಗಿನ ಸ್ಥಿತಿಗಿಂತ ಕೊಂಚ ಸಣ್ಣ ಸಂಸ್ಥೆಯಾಗಬಹುದು," ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಾಮಾಜಿಕ ಮಾಧ್ಯಮ ಕಂಪನಿಯು ಜೂನ್‌ನಲ್ಲಿ ಕನಿಷ್ಠ ಶೇಕಡ 30ರಷ್ಟು ಇಂಜಿನಿಯರ್‌ಗಳನ್ನು ನೇಮಕ ಮಾಡಿಸಿಕೊಳ್ಳುವ ಯೋಜನೆಯನ್ನು ಕಡಿತ ಮಾಡಿದೆ. ಉದ್ಯೋಗಿಗಳು ಆರ್ಥಿಕ ಕುಸಿತದ ಸ್ಥಿತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಕೂಡಾ ಮಾರ್ಕ್ ಜುಕರ್‌ಬರ್ಗ್ ಹೇಳಿಕೊಂಡಿದ್ದಾರೆ.

English summary

Meta Prepares For Large-Scale Layoffs This Week

Meta Platforms Inc is planning to begin large-scale layoffs this week that will affect thousands of employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X