For Quick Alerts
ALLOW NOTIFICATIONS  
For Daily Alerts

ಮೈಂಡ್‌ಟ್ರೀ Q1 ಫಲಿತಾಂಶ: ವರ್ಷದಿಂದ ವರ್ಷಕ್ಕೆ ಲಾಭ 37% ಏರಿಕೆ

|

ಬೆಂಗಳೂರು, ಜುಲೈ 13: ಬೆಂಗಳೂರು ಮೂಲದ ಮೈಂಡ್‌ಟ್ರೀ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಇಂದು ಪ್ರಕಟಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ343.40 ಕೋಟಿ ರು ಗೆ ಹೋಲಿಸಿದರೆ ತೆರಿಗೆಯ ನಂತರದ ಲಾಭದಲ್ಲಿ (PAT) 471.60 ಕೋಟಿ ರು ಗಳಷ್ಟು ವಾರ್ಷಿಕವಾಗಿ (YoY) 37.3 ರಷ್ಟು ಏರಿಕೆಯಾಗಿದೆ ಎಂದು ವರದಿ ಮಾಡಿದೆ.

ಎಕನಾಮಿಕ್ಸ್ ಟೈಮ್ಸ್ ವಿಶ್ಲೇಷಕರ ಸಮೀಕ್ಷೆಯು PAT ಅಂಕಿಅಂಶವನ್ನು 480 ಕೋಟಿ ರೂ ಎಂದು ನಿರೀಕ್ಷಿಸಿತ್ತು. ಆದರೆ, 343.40 ಕೋಟಿ ರು ಬಂದಿದ್ದು, ನಿರೀಕ್ಷೆಯಂತೆ ಲಾಭ ಬಂದಿಲ್ಲ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 2,291.70 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ತ್ರೈಮಾಸಿಕದಲ್ಲಿ ಆದಾಯವು 36.2 ರಷ್ಟು ಏರಿಕೆಯಾಗಿ 3,121.10 ಕೋಟಿ ರೂಪಾಯಿಗಳಿಗೆ ತಲುಪಿದೆ.

 ಮೈಂಡ್‌ಟ್ರೀ Q1 ಫಲಿತಾಂಶ: ವರ್ಷದಿಂದ ವರ್ಷಕ್ಕೆ ಲಾಭ 37% ಏರಿಕೆ

ತ್ರೈಮಾಸಿಕದಲ್ಲಿ ಎಬಿಟ್ ಮಾರ್ಜಿನ್ 19.2 ರಷ್ಟು ಬಂದಿದೆ, ಮಾರ್ಚ್‌ನಲ್ಲಿ ಶೇಕಡಾ 18.9 ಬಂದಿತ್ತು ಮತ್ತು ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 17.7 ರಷ್ಟು ಬಂದಿತ್ತು.

ನಗದು ಮತ್ತು ಹೂಡಿಕೆಯು ಸಾರ್ವಕಾಲಿಕ ಗರಿಷ್ಠ $500 ಮಿಲಿಯನ್‌ನಲ್ಲಿದೆ ಎಂದು ಮೈಂಡ್‌ಟ್ರೀ ಬಿಎಸ್‌ಇಗೆ ತಿಳಿಸಿದೆ.

ಬೆಂಗಳೂರು ಮೂಲದ ಮೈಂಡ್‌ಟ್ರೀ ಹಾಗೂ L&T ಇನ್ಫೋಟೆಕ್ ವಿಲೀನವಾಗುತ್ತಿದೆ. ವಿಲೀನ ಪ್ರಕ್ರಿಯೆಗೆ ಉಭಯ ಸಂಸ್ಥೆಗಳ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿವೆ. ಮೈಂಡ್‌ಟ್ರೀಯ ನಿರ್ದೇಶಕರ ಮಂಡಳಿ ಶುಕ್ರವಾರದಂದು ಸಭೆ ಸೇರಿ ಲಾರ್ಸೆನ್ ಮತ್ತು ಟೂಬ್ರೊ (L&T) ಜೊತೆಗೆ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದಾರೆ. L&T ಇನ್ಫೋಟೆಕ್, ಮೈಂಡ್‌ಟ್ರೀ ವಿಲೀನವನ್ನು ಪ್ರಕಟಿಸಿದ ಬಳಿಕ ಸಂಯೋಜಿತ ಘಟಕವನ್ನು "LTIMindtree" ಎಂದು ಕರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಂಡ್ ಟ್ರೀ ಸ್ಥಾಪನೆ, ಹೂಡಿಕೆ 1999ರಲ್ಲಿ ಐಟಿ ದಿಗ್ಗಜ ಅಶೋಕ್ ಸೂಟಾ ಅವರು, ಸಿದ್ಧಾರ್ಥ, ಸುಬ್ರತಾ ಬಾಗ್ಚಿ, ರೊಸ್ತೋವ್ ರಾವಣನ್ ಮತ್ತು ಕೆಕೆ ನಟರಾಜನ್ ಅವರೊಂದಿಗೆ ಸೇರಿ ಮೈಂಡ್ ಟ್ರೀ ಸ್ಥಾಪಿಸಿದಾಗ ಸಿದ್ಧಾರ್ಥ ಅವರು ಸಹ ಸಂಸ್ಥಾಪಕರಾದರು. ಅದರ ಸ್ಥಾಪನೆಯ ಆರಂಭದಲ್ಲಿ ಮೈಂಡ್ ಟ್ರೀಯ ಶೇ 6.6ರಷ್ಟು ಷೇರುಗಳನ್ನು ಖರೀದಿಸಲು ಸಿದ್ಧಾರ್ಥ ಅವರು 44 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. 2011ರಲ್ಲಿ ಅವರು 85 ಕೋಟಿ ರೂ (ಶೇ 5.57) ಮತ್ತು 40 ಕೋಟಿ ರೂ (ಶೇ 2.05) ಮೊತ್ತದ ಷೇರುಗಳನ್ನು ಪುನಃ ಖರೀದಿಸಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 2012ರಲ್ಲಿ ಮೈಂಡ್ ಟ್ರೀಯಲ್ಲಿ ಹೆಚ್ಚುವರಿ ಶೇ 6.48ರಷ್ಟು ಷೇರು ಖರೀದಿಸಲು ಮತ್ತೆ 171 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದು ಹೆಚ್ಚೆಂದರೆ ವಾರ್ಷಿಕ ಶೇ 20.43ರಷ್ಟು ಆದಾಯ ಹಿಂದಕ್ಕೆ ನೀಡುತ್ತಿತ್ತು. ಕೊನೆಗೆ ಅವರು ಎಲ್‌ ಆಂಡ್ ಟಿಗೆ ಷೇರುಗಳನ್ನು ಮಾರಾಟ ಮಾಡಿದರು.

"ನಾವು ದೃಢವಾದ ಆದಾಯದ ಬೆಳವಣಿಗೆ, ಉತ್ತಮ ಮಾರ್ಜಿನ್ ಮತ್ತು ದಾಖಲೆಯ ಆದೇಶ ಪುಸ್ತಕದೊಂದಿಗೆ FY23 ಗೆ ಬಲವಾದ ಆರಂಭವನ್ನು ವರದಿ ಮಾಡಲು ಉತ್ಸುಕರಾಗಿದ್ದೇವೆ, ನಮ್ಮ ಮುಂದುವರಿದ ಉದ್ಯಮ-ಪ್ರಮುಖ ಬೆಳವಣಿಗೆಯ ಆವೇಗವನ್ನು ಪ್ರದರ್ಶಿಸುತ್ತದೆ" ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ, ದೇಬಾಶಿಸ್ ಚಟರ್ಜಿ ಹೇಳಿದ್ದಾರೆ.

English summary

MindTree Q1 Results: Profit rises 37% YoY to Rs 472 cr; revenue jumps 36%

Mindtree on Wednesday reported an 37.3 per cent year-on-year (YoY) rise in profit after tax (PAT) at Rs 471.60 crore compared with Rs 343.40 crore in the same quarter last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X