For Quick Alerts
ALLOW NOTIFICATIONS  
For Daily Alerts

ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಇಳಿಸಿದ ಮೂಡೀಸ್

|

ಮೂಡೀಸ್ 2022ರ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 7ಕ್ಕೆ ಇಳಿಸಿದೆ. ಭಾರತದ 2022ರ ಜಿಡಿಪಿ ಬೆಳವಣಿಗೆ ದರ ಸುಮಾರು ಶೇಕಡ 9.3ಕ್ಕೆ ಏರಲಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಹೇಳಿದ್ದ ಮೂಡೀಸ್, 2022ರ ನವೆಂಬರ್‌ 11ರಂದು ಭಾರತದ ಜಿಡಿಪಿ ದರವನ್ನು ಕುಗ್ಗಿಸಿದೆ.

2022ರಲ್ಲಿ ಭಾರತದ ಜಿಡಪಿ ಬೆಳವಣಿಗೆ ದರವನ್ನು ಎರಡನೇ ಬಾರಿಗೆ ಮೂಡೀಸ್ ಇಳಿಕೆ ಮಾಡಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಮೂಡೀಸ್ ಜಿಡಿಪಿ ದರವನ್ನು ಶೇಕಡ 8.8ರಿಂದ ಶೇಕಡ 7.7ಕ್ಕೆ ಇಳಿಸಿತ್ತು. ಆದರೆ ಈಗ ಶೇಕಡ 7.7ರಿಂದ ಶೇಕಡ 7ಕ್ಕೆ ಇಳಿಸಿದೆ.

2022ರ ವರೆಗೆ ಬಹುತೇಕ ಆರ್ಥಿಕತೆಗಳು ಕೋವಿಡ್-19 ಪೂರ್ವ ಮಟ್ಟಕ್ಕೆ ಬರಲ್ಲ: ಮೂಡೀಸ್2022ರ ವರೆಗೆ ಬಹುತೇಕ ಆರ್ಥಿಕತೆಗಳು ಕೋವಿಡ್-19 ಪೂರ್ವ ಮಟ್ಟಕ್ಕೆ ಬರಲ್ಲ: ಮೂಡೀಸ್

ಜಾಗತಿಕವಾಗಿ ಹಣದುಬ್ಬರ ಏರಿಕೆಯಾಗುತ್ತಿದೆ. ಭಾರತದಲ್ಲಿಯೂ ಹಣದುಬ್ಬರ ಪ್ರಮಾಣ ಭಾರೀ ಅಧಿಕವಾಗಿದೆ. ಬಡ್ಡಿದರವನ್ನು ಫೆಡರಲ್ ಹಾಗೂ ಆರ್‌ಬಿಐ ಹೆಚ್ಚಳ ಮಾಡುತ್ತಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಮೂಡೀಸ್ 2022ರ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಕುಗ್ಗಿಸಿದೆ.

 ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಇಳಿಸಿದ ಮೂಡೀಸ್

ಇನ್ನಷ್ಟು ಇಳಿಕೆಯಾಗುತ್ತಾ ಭಾರತದ ಜಿಡಿಪಿ!

ಇನ್ನು 2023ರಲ್ಲಿ ಭಾರತದಲ್ಲಿ ಜಿಡಿಪಿ ದರವು ಇನ್ನಷ್ಟು ಇಳಿಕೆಯಾಗುವ ಅಂದಾಜನ್ನು ಮೂಡೀಸ್ ವ್ಯಕ್ತಪಡಿಸಿದೆ. ಸುಮಾರು ಶೇಕಡ 4.8ಕ್ಕೆ ಕುಗ್ಗಬಹುದು, 2024ರಲ್ಲಿ ಶೇಕಡ 6.4ಕ್ಕೆ ಏರಬಹುದು ಎಂದು ಮೂಡೀಸ್ ಅಭಿಪ್ರಾಯಿಸಿದೆ.

ಮೂಡೀಸ್ ಪ್ರಕಾರ 2021ರ ವರ್ಷದಲ್ಲಿ ಭಾರತದ ಆರ್ಥಿಕತೆ ಶೇಕಡ 8.5ರಷ್ಟು ಏರಿಕೆಯಾಗಿದೆ. 2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಸ್ಥಿತಿ ಸುಮಾರು ಶೇಕಡ 13.5ರಷ್ಟು ಹೆಚ್ಚಳವಾಗಿದೆ. ರೂಪಾಯಿ ಮೌಲ್ಯ ಕುಗ್ಗುತ್ತಿರುವುದು, ತೈಲ ದರ ಏರಿಕೆಯಿಂದಾಗಿ ಜಿಡಿಪಿ ಈ ರೀತಿಯಾಗಿ ಇಳಿಯುತ್ತಿದೆ ಎಂದು ಮೂಡೀಸ್ ಅಂದಾಜಿಸಿದೆ.

ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜು ಹೆಚ್ಚಿಸಿದ ಮೂಡೀಸ್ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜು ಹೆಚ್ಚಿಸಿದ ಮೂಡೀಸ್

ಮತ್ತೆ ರೆಪೋ ದರ ಹೆಚ್ಚಳ ನಿರೀಕ್ಷೆ

ಹಣದುಬ್ಬರ ಏರಿಕೆ, ರೂಪಾಯಿ ಮೌಲ್ಯ ಕುಸಿತದ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ತಿಂಗಳಿನಿಂದ ಸೆಪ್ಟೆಂಬರ್‌ ತಿಂಗಳ ನಡುವೆ ರೆಪೋ ದರವನ್ನು ಸುಮಾರು 190 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ರೆಪೋ ದರ ಶೇಕಡ 5.90 ಆಗಿದೆ. ಇನ್ನು ಆರ್‌ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ಮೂಡೀಸ್ ಹೇಳಿಕೊಂಡಿದೆ.

English summary

Moodys Revises India's Growth Forecast For FY22 to 7 Percent

Moody's Investors Agency revises India's GDP forecast for FY 2022 from contraction of 7.7 to narrower contraction 7.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X