For Quick Alerts
ALLOW NOTIFICATIONS  
For Daily Alerts

ತಿನ್ನಲು ಬಲು ದುಬಾರಿ, ಭಾರತ-ಚೀನಾದಲ್ಲಿ ವೇಗವಾಗಿ ಏರುತ್ತಿವೆ ಆಹಾರದ ಬೆಲೆಗಳು

|

ಮನೆಯಿಂದ ಆಚೆಗೆ ಹೋಗಿ ಏನನ್ನೇ ನೀವು ತಿನ್ನಬೇಕಾದರೂ ಆಹಾರದ ಮೇಲಿನ ದರಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಪ್ರತಿ ದಿನವೂ ಆಹಾರ ಮೇಲಿನ ಬೆಲೆಯು ಏರುತ್ತದೆ ಹೊರತು ಕಡಿಮೆಯಾಗುತ್ತಿಲ್ಲ. ಹೋಟೆಲ್‌ಗಳ ಮೇಲೆ ಅವಲಂಭಿತವಾಗಿರುವ ಜನತೆಗೆ ಹಣ ಕೊಟ್ಟು ಸಾಕಾಗಿ ಹೋಗಿದೆ.

ವಿಶ್ವದಲ್ಲೇ ಸದ್ಯದ ಅತಿದೊಡ್ಡ ಉದಯೋನ್ಮುಖ ಮಾರುಕಟ್ಟೆಗಳಾದ ಭಾರತ ಮತ್ತು ಚೀನಾದಲ್ಲಿ ದಿನದಿಂದ ದಿನಕ್ಕೆ ಆಹಾರ ಬೆಲೆಗಳು ವೇಗವಾಗಿ ಏರತೊಡಗಿವೆ. ಆಹಾರ ಬೆಲೆಗಳ ಏರಿಕೆಯು ಹಣದುಬ್ಬರದ ಬೆದರಿಕೆಯನ್ನುಂಟು ಮಾಡುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಏಷ್ಯಾದ 2 ಬಹುದೊಡ್ಡ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಾದ ಭಾರತ ಮತ್ತು ಚೀನಾದಲ್ಲಿ ಬೆಲೆ ಏರಿಕೆಯ ಬಿಸಿ ಬಹಳ ಜೋರಾಗಿ ತಟ್ಟುತ್ತಿದೆ. ಚೀನಾದಲ್ಲಿ ಹಂದಿ ಮಾಂಸ ಹಾಗೂ ಭಾರತದಲ್ಲಿ ಈರುಳ್ಳಿ ದರವು ಜನರಲ್ಲಿ ಕಣ್ಣೀರು ತರಿಸುತ್ತಿದೆ. ಪ್ರಧಾನ ಉತ್ಪನ್ನಗಳೇ ಬೆಲೆ ಏರಿಕೆಯನ್ನು ಎದುರಿಸುತ್ತಿವೆ.

ಟರ್ಕಿ ಮತ್ತು ನೈಜಿರಿಯಾದಲ್ಲಿ ಪೂರೈಕೆ ಸಮಸ್ಯೆಗಳು ವೆಚ್ಚವನ್ನು ಹೆಚ್ಚಿಸುತ್ತಿವೆ. ವಿಶ್ವ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಕಳೆದೆರಡು ವರ್ಷಗಳಿಗಿಂತ ಅಕ್ಟೋಬರ್ ತಿಂಗಳಿನಲ್ಲಿ ಆಹಾರದ ಬೆಲೆಗಳು ವೇಗವಾಗಿ ಏರತೊಡಗಿವೆ.

ಈ ರೀತಿಯಾಗಿ ಆಹಾರದ ಬೆಲೆ ಏರಿಕೆಯು ಬಡಜನರಿಗೆ ನೋವು ಹೆಚ್ಚಿಸುತ್ತಿರುವುದು ಸುಳ್ಳಲ್ಲ. ಜಾಗತಿಕ ಆರ್ಥಿಕತೆಯ ಮಂದಗತಿಯ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವತ್ತ ಗಮನ ಹರಿಸಿವೆ ಹೊರತು, ನೀತಿ ಸರಾಗಗೊಳಿಸುವಿಕೆಗೆ ಬ್ರೇಕ್ ಹಾಕಲು ಕೇಂದ್ರ ಬ್ಯಾಂಕುಗಳು ಮುಂದಾಗಿಲ್ಲ. 'ಬ್ಲೂಮ್‌ಬರ್ಗ್ ಗೇಜ್' ಗ್ರಾಹಕ ಬೆಲೆ ಸೂಚ್ಯಂಕಗಳ ಪ್ರಕಾರ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸರಾಸರಿ ಹಣದುಬ್ಬರವು ಇನ್ನೂ ಸಾರ್ವಕಾಲಿಕ ಕಡಿಮೆಯಾಗಿವೆ.

ಬೆಲೆ ಏರಿಕೆಯ ಶಾಕ್

ಬೆಲೆ ಏರಿಕೆಯ ಶಾಕ್

ಸದ್ಯ ಬೆಲೆ ಏರಿಕೆಯ ಶಾಕ್‌ ಸಾಮಾನ್ಯ ಜನರಿಗೆ ತಟ್ಟಿರುವುದಂತು ನಿಜ. ನೋಮುರಾ ಹೋಲ್ಡಿಂಗ್ಸ್ ಇಂಕ್. ಅರ್ಥಶಾಸ್ತ್ರಜ್ಞರು ಇತ್ತೀಚೆಗಷ್ಟೇ ಹೆಚ್ಚಿನ ಆಹಾರ ವೆಚ್ಚದ ಮೂರು ಸಂಭಾವ್ಯ ಪ್ರಚೋದಕಗಳ (Potential Triggers) ಬಗ್ಗೆ ಎಚ್ಚರಿಸಿದ್ದಾರೆ.

ಹವಾಮಾನ ಬದಲಾವಣೆ, ಹೆಚ್ಚಿದ ತೈಲ ಬೆಲೆ ಹಾಗೂ ಡಾಲರ್‌ ಬೆಲೆಯಲ್ಲಿನ ಏರಿಳಿತವು ಆಹಾರ ವೆಚ್ಚವು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿವೆ. ಇದರಿಂದ ಮಾರುಕಟ್ಟೆ ಹೆಚ್ಚು ಅಪಾಯದಲ್ಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಭಾರತದ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಭಾರತದ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಕಳೆದ ಹಲವು ತಿಂಗಳಲ್ಲಿ ಭಾರತದಲ್ಲಿ ಈರುಳ್ಳಿ ಬೆಲೆಯು ಏರಿಳಿತಕ್ಕೊಳಪಟ್ಟಿದೆ. ಮಾನ್ಸೂನ್ ನಲ್ಲಿನ ಬದಲಾವಣೆ, ಪ್ರವಾಹದಿಂದಾಗಿ ಪೂರೈಕೆ ಪ್ರಮಾಣವು ವ್ಯತ್ಯಯಗೊಂಡಿದೆ. ಈರುಳ್ಳಿಯ ಫಸಲು ಕೂಡ ಕಡಿಮೆಯಾಗಿದೆ. ಜೊತೆಗೆ ತರಕಾರಿ ಬೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 26ರಷ್ಟು ಏರಿಕೆಯಾಗತೊಡಗಿದೆ.

ಅಕ್ಟೋಬರ್‌ನಲ್ಲಿ ಹಣದುಬ್ಬರವು ರಿಸರ್ವ್‌ ಬ್ಯಾಂಕ್ ಮಿತಿಗಿಂತ ಶೇಕಡಾ 4ಕ್ಕಿಂತ ಹೆಚ್ಚಿಸಿದ್ದು, ಕಳೆದ 15 ತಿಂಗಳಿನಲ್ಲಿ ಮೊದಲ ಬಾರಿಗೆ ಈ ಪ್ರಮಾಣ ದಾಖಲಾಗಿದೆ.

ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ಶೇಕಡಾ 4.5ರಷ್ಟು ದಾಖಲಾಗಿದೆ. ಇದು 2013ರಿಂದ ದಾಖಲಾದ ಅತಿ ಕಡಿಮೆ ದತ್ತಾಂಶವಾಗಿದೆ.

 

ಚೀನಾದಲ್ಲಿ ದುಪ್ಪಟ್ಟು ಆಗಿದೆ ಹಂದಿ ಮಾಂಸ ದರ
 

ಚೀನಾದಲ್ಲಿ ದುಪ್ಪಟ್ಟು ಆಗಿದೆ ಹಂದಿ ಮಾಂಸ ದರ

ಚೀನಾದಲ್ಲಿ ಹಂದಿ ಮಾಂಸ ಹಿಂದೆ ಇದ್ದ ಬೆಲೆಗಿಂತ ದುಪ್ಪಟ್ಟಾಗಿದೆ. ಹಂದಿ ಜ್ವರದಿಂದ ಕಾಣಿಸಿಕೊಂಡ ಬಳಿಕ ಅದರಿಂದ ರಕ್ಷಿಸಲು ಬಹು ಪ್ರಮಾಣದಲ್ಲಿ ಹಂದಿಗಳನ್ನು ಕೊಲ್ಲಲಾಯಿತು. ಜೊತೆಗೆ ಸಂತಾನೋತ್ಪತಿಯ ಪ್ರಮಾಣವೂ ತಗ್ಗಿದ ಪರಿಣಾಮ ಹಂದಿಮಾಂಸದ ಬೆಲೆ ದುಪ್ಪಟ್ಟಾಗಿದೆ. ಇದು ಗ್ರಾಹಕರ ಹಣದುಬ್ಬರವನ್ನು ಶೇಕಡಾ 3.8ಕ್ಕೆ ಏರಿಸಿದೆ. ಜನವರಿ 2012ರ ಬಳಿಕ ದಾಖಲಾದ ಗರಿಷ್ಠ ಮಟ್ಟ ಇದಾಗಿದೆ.

ಹಂದಿ ಮಾಂಸದ ಬೆಲೆಯು ಇತ್ತೀಚಿನ ಗರಿಷ್ಠ ಮಟ್ಟದಿಂದ ಹೊರಬಂದಿದ್ದರೂ ಮುಂದಿನ ವರ್ಷ ಜನವರಿಯಲ್ಲಿ ಹಣದುಬ್ಬರವು ಶೇಕಡಾ 5 ಅಥವಾ 6ರಷ್ಟಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಈ ಮಟ್ಟದ ಹಣದುಬ್ಬರವು ಸದ್ಯದ ವ್ಯಾಪಾರ ಯುದ್ದ ಮತ್ತು ದುರ್ಬಲ ದೇಶೀಯ ಬೇಡಿಕೆಯ ಮಧ್ಯೆ ವಿತ್ತೀಯ ನೀತಿಯನ್ನು ಸರಾಗಗೊಳಿಸಲು ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಕ್ರೇಂದ್ರ ಬ್ಯಾಂಕ್‌ಗಳಿಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಟರ್ಕಿಯಲ್ಲಿ ಹೆಚ್ಚಾದ ಆಹಾರ ಹಣದುಬ್ಬರ

ಟರ್ಕಿಯಲ್ಲಿ ಹೆಚ್ಚಾದ ಆಹಾರ ಹಣದುಬ್ಬರ

ಟರ್ಕಿಯಲ್ಲೂ ಆಹಾರ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ದಾಖಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 30ರಷ್ಟಿದ್ದು ವರ್ಷದ ಬಹುಪಾಲು ಶೇಕಡಾ 15ಕ್ಕಿಂತಲೂ ಹೆಚ್ಚಾಗಿದೆ. 2019ರಲ್ಲಿ ಆಹಾರ ಹಣದುಬ್ಬರವು ಶೇಕಡಾ 15 ಪ್ರತಿಶತದಷ್ಟು ಉಳಿದುಕೊಂಡಿದೆ. ಆಗಸ್ಟ್ 2018ರ ಕರೆನ್ಸಿ ಬಿಕಟ್ಟಿನೊಂದಿಗೆ ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ನೈಸರ್ಗಿಕ ನೀರಾವರಿ ಮೇಲಿನ ಹೆಚ್ಚಿನ ಅವಲಂಬನೆಯು ಇದಕ್ಕೆ ಕಾರಣವಾಗಿದೆ.

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಬೆಲೆ ನಿಗದಿ ಮಾಡುವವರನ್ನು ದೇಶದ್ರೋಹಿಗಳು ಮತ್ತು ಭಯೋತ್ಪಾದಕರು ಎಂದು ಖಂಡಿಸಿದ್ದಾರೆ. ಟರ್ಕಿ ಸರ್ಕಾರವು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲು ಮತ್ತು ನಗರಗಳಲ್ಲಿ ಮಾರಾಟ ಮಾಡಲು ನಿರ್ಧಾರ ತೆಗೆದುಕೊಂಡಿದೆ.

ಧಾನ್ಯ ಹೆಚ್ಚಾಗಿ ಉತ್ಪಾದಿಸುವ ಪ್ರಾಂತ್ಯಗಳಲ್ಲಿನ ಇತ್ತೀಚಿನ ಬರಗಾಲವು, ಮುಂದಿನ ವರ್ಷ ಸಂಭವನೀಯ ಪೂರೈಕೆಯಲ್ಲಿ ವ್ಯತ್ಯಯ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ. ಟರ್ಕಿಯ ಕೇಂದ್ರ ಬ್ಯಾಂಕ್ 2020ರ ವೇಳೆಗೆ ಆಹಾರ ಹಣದುಬ್ಬರವು ಶೇಕಡಾ 11 ರಷ್ಟಿರಬಹುದು ಎಂದು ನಿರೀಕ್ಷಿಸಿದೆ.

 

ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣದಲ್ಲಿ ಕುಸಿತ

ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣದಲ್ಲಿ ಕುಸಿತ

ಪ್ರಾದೇಶಿಕ ಬರವು ದಕ್ಷಿಣ ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಜೋಳದ ಉತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಜಾಂಬಿಯಾನ್ ಹಣದುಬ್ಬರವನ್ನು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಳ್ಳಿದೆ . ಜಿಂಬಾಬ್ವೆಯಲ್ಲಿ ಆಹಾರ ಹಣದುಬ್ಬರವು ಸುಮಾರು ಶೇಕಡಾ 50ರಷ್ಟು ತಲುಪಿದೆ.

ನೈಜೀರಿಯದಲ್ಲಿ ಕಳೆದ ಆಗಸ್ಟ್‌ನಲ್ಲಿ ಅಧ್ಷಕ್ಷ ಮುಹಮ್ಮದು ಬುಹಾರಿ ಗಡಿ ಮುಚ್ಚಲು ಆದೇಶಿಸಿದ ಬಳಿಕ ಆಮದು ಮಾಡಿಕೊಂಡ ಅಕ್ಕಿಯ ಬೆಲೆ ಶೇಕಡಾ 7.4ರಷ್ಟು ಏರಿಕೆಯಾಗಿದೆ. ಭಾಗಶಃ ವ್ಯಾಪಕ ಆಹಾರ ಕಳ್ಳಸಾಗಣೆಯನ್ನು ತಡೆಯಲು ಕಳೆದ ಆಗಸ್ಟ್‌ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

 

English summary

More expensive To Eat , Food Prices Are Climbing Fast In India And China

Food Prices are Getting more expensive in the world's biggest emerging markets in India and China and Economists are worried
Story first published: Friday, November 29, 2019, 12:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X