For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ದಿಕ್ಕೆಟ್ಟು ಆರ್ಥಿಕ ಸಹಾಯಕ್ಕೆ ಕೈಯೊಡ್ಡಿ ನಿಂತಿವೆ 100 ದೇಶಗಳು

|

ಕೊರೊನಾದಿಂದ ಬಿದ್ದಿರುವ ಆರ್ಥಿಕ ಹೊಡೆತಕ್ಕೆ ಇಡೀ ವಿಶ್ವ ತತ್ತರಿಸಿಹೋಗಿದೆ. ಇಂಥ ಸನ್ನಿವೇಶದಲ್ಲಿ ಆರ್ಥಿಕ ನೆರವು ನೀಡುವಂತೆ 100ಕ್ಕೂ ಹೆಚ್ಚು ದೇಶಗಳು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಬಳಿ ನೆರವು ಕೋರಿವೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಅತಿ ಅಪರೂಪದ ಸನ್ನಿವೇಶದಲ್ಲಿ ಸಭೆ ನಡೆಸಿದ್ದು, ಅತಿ ಅಪರೂಪದ ಕ್ರಮಕ್ಕೆ ಕರೆ ನೀಡುತ್ತಿದ್ದೇವೆ ಎಂದು ಗುರುವಾರದಲ್ಲಿ ನಡೆದ ಐಎಂಎಫ್ ವಾರ್ಷಿಕ ಸಭೆಯ ನಂತರ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. ಈ ಹಿಂದೆಂದಿಗಿಂತ ಈಗ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇಂಥ ಕ್ಲಿಷ್ಟಕರ ಸನ್ನಿವೇಶಕ್ಕೆ ಪ್ರತಿಕ್ರಿಯಿಸಬೇಕಿದ್ದು, ಚೇತರಿಕೆಗೆ ಸಿದ್ಧಗೊಳ್ಳಬೇಕು ಎಂದಿದ್ದಾರೆ.

2020ರಲ್ಲಿ ಬೆಳವಣಿಗೆ ದರ 0; ಇದು 60 ವರ್ಷದಲ್ಲೇ ಮೊದಲು2020ರಲ್ಲಿ ಬೆಳವಣಿಗೆ ದರ 0; ಇದು 60 ವರ್ಷದಲ್ಲೇ ಮೊದಲು

102 ದೇಶಗಳು ಈಗಾಗಲೇ ಐಎಂಎಫ್ ಬಳಿ ಸಹಾಯ ಕೇಳಿವೆ. ಅದರಲ್ಲಿ 15- ಎಲ್ ಸಲ್ವಡಾರ್, ಈಕ್ವೆಡಾರ್, ಮಡಗಾಸ್ಕರ್, ರವಾಂಡ ಮತ್ತು ಟೋಗೋ ಅರ್ಜಿಗಳಿಗೆ ಮಂಜೂರು ಸಿಕ್ಕಿದೆ. ಈ ಅನುದಾನ ಬಿಡುಗಡೆ ಮಾಡುವ ಅಧಿಕಾರಿಗಳು ಏಪ್ರಿಲ್ ಕೊನೆಯ ಹೊತ್ತಿಗೆ ಇನ್ನಷ್ಟು ದೇಶಗಳಿಗೆ ಸಹಾಯ ಮಾಡಲು ಅರ್ಜಿ ಅಂತಿಮಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾದಿಂದ ಆರ್ಥಿಕ ಸಹಾಯಕ್ಕೆ ಕೈಯೊಡ್ಡಿ ನಿಂತಿವೆ 100 ದೇಶಗಳು

ಈ ಹಿಂದೆ, 2009ರಲ್ಲಿ ಜಾಗತಿಕ ಆರ್ಥಿಕ ಕುಸಿತವಾಗಿದ್ದಾಗ 0.1% ನಷ್ಟು ಇಡೀ ವಿಶ್ವದ ಆರ್ಥಿಕತೆಗೆ ಹಿನ್ನಡೆ ಆಗಿತ್ತು. ಆದರೆ 2020ರಲ್ಲಿ 3 ಪರ್ಸೆಂಟ್ ಕಡಿಮೆ ಆಗುವ ಬಗ್ಗೆ ಐಎಂಎಫ್ ವರದಿಯಲ್ಲಿ ತಿಳಿಸಲಾಗಿದೆ.

ಕೊರೊನಾ ವೈರಸ್ ನ ಉತ್ತುಂಗದ ಹಂತ ಇನ್ನೂ ಮುಂದಿದೆ. ಹಲವು ದೇಶಗಳ ಆರ್ಥಿಕತೆಗೆ ದೊಡ್ಡ ಮಟ್ಟದ ಹಣಕಾಸಿನ ಉತ್ತೇಜನ ಬೇಕು. ದಿವಾಳಿ, ಉದ್ಯೋಗ ನಷ್ಟವನ್ನು ಈ ಸಮಯದಲ್ಲಿ ಕಡಿಮೆ ಮಾಡಬೇಕಿದೆ ಎಂದು ಐಎಂಎಫ್ ಮುಖ್ಯಸ್ಥರು ಹೇಳಿದ್ದಾರೆ.

English summary

More Than 100 Countries Ask Financial Aid From IMF

Due to Corona economic crisis more than 100 countries ask for financial aid from IMF. Here is the details.
Story first published: Friday, April 17, 2020, 18:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X