For Quick Alerts
ALLOW NOTIFICATIONS  
For Daily Alerts

ಒಂದೇ ದಿನದಲ್ಲಿ ಜಗತ್ತಿನ ಐನೂರು ಶ್ರೀಮಂತರ 23.17 ಲಕ್ಷ ಕೋಟಿ ಖಲಾಸ್

|

ಜಗತ್ತಿನ ಐನೂರು ಮಂದಿ ಶ್ರೀಮಂತರ ಒಟ್ಟು ಆಸ್ತಿ ಗುರುವಾರ ಒಂದೇ ದಿನ 331 ಬಿಲಿಯನ್ ಅಮೆರಿಕನ್ ಡಾಲರ್ ಕರಗಿಹೋಗಿದೆ. ಇದನ್ನು ಭಾರತೀಯ ರುಪಾಯಿಗಳ ಲೆಕ್ಕದಲ್ಲಿ ಹೇಳಬೇಕೆಂದರೆ, 23.17 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಸಂಪತ್ತು ಕಡಿಮೆ ಆಗಿದೆ. ಇದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತೆರೆದಿಡುತ್ತಿರುವ ಅಂಕಿ-ಅಂಶ.

ಜಾಗತಿಕ ಷೇರು ಮಾರುಕಟ್ಟೆ 20 ಪರ್ಸೆಂಟ್ ಗೂ ಹೆಚ್ಚು ಕುಸಿತ ಕಂಡಿದ್ದು, 'ಕರಡಿ' ಹಿಡಿತದಲ್ಲಿ ಮಾರುಕಟ್ಟೆ ಇದೆ. ಡೌ ಜೋನ್ಸ್ ನ ಇಂಡಸ್ಟ್ರಿಯಲ್ ಸರಾಸರಿಯು 1987ನೇ ಇಸವಿ ನಂತರ ಒಂದು ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 340 ಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.

ಒಂದೇ ದಿನದಲ್ಲಿ ಜಗತ್ತಿನ ಐನೂರು ಶ್ರೀಮಂತರ 23.17 ಲಕ್ಷ ಕೋಟಿ ಖಲಾಸ್

ಜಗತ್ತಿನ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ಗುರುವಾರದಂದು 800 ಕೋಟಿ ಡಾಲರ್ ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದಿನ ಲೆಕ್ಕಾಚಾರದ ಪ್ರಕಾರ, ಜಗತ್ತಿನ ಅತ್ಯಂತ ಶ್ರೀಮಂತರ ಬಳಿ ಒಟ್ಟಾರೆ 6.1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಸಂಪತ್ತು ಇತ್ತು. ಕೊರೊನಾ ವೈರಾಣು ಹಾಗೂ ತೈಲ ಬೆಲೆ ಇಳಿಕೆ ಕಾರಣಕ್ಕೆ ಷೇರು ಮಾರುಕಟ್ಟೆ ಕುಸಿದು, ಇವರ ಸಂಪತ್ತಿನ ಮೌಲ್ಯವು ಕುಸಿದಿದೆ.

English summary

More Than 23 Lakh Crore Wealth Of 500 Rich People Eroded

On Thursday world's 500 rich peoples 23 lakh crore worth of wealth eroded due to stock market crash. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X