ಪ್ರಧಾನಮಂತ್ರಿ- ಕಿಸಾನ್ ಯೋಜನೆ: ವರ್ಷದಲ್ಲಿ 50,850 ಕೋಟಿ ಬಿಡುಗಡೆ

ಪ್ರಧಾನಮಂತ್ರಿ- ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಈ ತನಕ 50,850 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಕೃಷಿ ಸಚಿವಾಲಯವು ಈ ಯೋಜನೆ ಅಡಿ ಆಗಿರುವ ಪ್ರಗತಿಯನ್ನು ಹಂಚಿಕೊಂಡಿದೆ. ಫೆಬ್ರವರಿ 24ಕ್ಕೆ ಪ್ರಧಾನಮಂತ್ರಿ- ಕಿಸಾನ್ ಯೋಜನೆ ಜಾರಿಯಾಗಿ ಒಂದು ವರ್ಷ ಸಂಪೂರ್ಣವಾಗುವ ಹಿನ್ನೆಲೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

ಕಳೆದ ವರ್ಷ ಫೆಬ್ರವರಿ 24ರಂದು ಪಿಎಂ-ಕಿಸಾನ್ ಯೋಜನೆಗೆ ಅಧಿಕೃತವಾದ ಚಾಲನೆ ದೊರೆಯಿತು. ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆ ಅಡಿಯಲ್ಲಿ ಕೇಂದ್ರದಿಂದ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರುಪಾಯಿ ವರ್ಗಾವಣೆ ಮಾಡಲಾಗುತ್ತದೆ. ಮೂರು ಸಮಾನ ಕಂತುಗಳಲ್ಲಿ ಈ ಹಣ ವರ್ಗಾವಣೆ ಆಗುತ್ತದೆ.

ಪ್ರಧಾನಮಂತ್ರಿ- ಕಿಸಾನ್ ಯೋಜನೆ: ವರ್ಷದಲ್ಲಿ  50,850 ಕೋಟಿ ಬಿಡುಗಡೆ

ಫೆಬ್ರವರಿ 20, 2020ರ ತನಕ ದೇಶದ 8.46 ಕೋಟಿ ರೈತ ಕುಟುಂಬಗಳಿಗೆ ಈ ಯೋಜನೆಯ ಅನುಕೂಲ ದೊರೆತಿದೆ. ಈ ಯೋಜನೆಯ ಆರಂಭದ ಸಮಯದಲ್ಲಿ ಎರಡು ಹೆಕ್ಟೇರ್ ನೊಳಗೆ ಭೂಮಿ ಹೊಂದಿರುವ ರೈತರಿಗೆ ಆರ್ಥಿಕ ಸಹಾಯವನ್ನು ಮಾಡುವುದು ಪಿಎಂ- ಉದ್ದೇಶವಾಗಿತ್ತು. ಆ ನಂತರ ಯಾವುದೇ ಪ್ರಮಾಣದಲ್ಲಿ ಭೂಮಿ ಇದ್ದರೂ ಕೃಷಿಕ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+