For Quick Alerts
ALLOW NOTIFICATIONS  
For Daily Alerts

2021ರ ಡಿಸೆಂಬರ್ ಹೊತ್ತಿಗೆ ಸೆನ್ಸೆಕ್ಸ್ 50,000 ಪಾಯಿಂಟ್: ಮೋರ್ಗನ್ ಸ್ಟ್ಯಾನ್ಲಿ

By ಅನಿಲ್ ಆಚಾರ್
|

ಕಳೆದ ವಾರ ಈಕ್ವಿಟಿ ಮಾರ್ಕೆಟ್ ನಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಗಳು ಭಾರತೀಯ ಷೇರು ಮಾರ್ಕೆಟ್ ಬಗ್ಗೆ ಮತ್ತೆ ಸಕಾರಾತ್ಮಕ ಮಾತುಗಳನ್ನಾಡುತ್ತಿದ್ದಾರೆ. ಅಷ್ಟೇ ಅಲ್ಲ. ಒಂದು ವರ್ಷದ ನಂತರ ಯಾವ ಮಟ್ಟವನ್ನು ತಲುಪಬಹುದು ಎಂಬ ಬಗ್ಗೆ ತಮ್ಮ ಅಂದಾಜನ್ನು ಹೇಳುತ್ತಿದ್ದಾರೆ.

ಮೋರ್ಗನ್ ಸ್ಟ್ಯಾನ್ಲಿ ಪ್ರಕಾರ, 2021ರ ಡಿಸೆಂಬರ್ ಹೊತ್ತಿಗೆ ಸೆನ್ಸೆಕ್ಸ್ 50,000 ಪಾಯಿಂಟ್ ತಲುಪಬಹುದು. ಅದೇ ಸಂಸ್ಥೆ ಈ ಹಿಂದೆ ಮಾಡಿದ್ದ ಅಂದಾಜು: 2021ರ ಜೂನ್ ಗೆ 37,300 ಪಾಯಿಂಟ್. ಸೂಚ್ಯಂಕಗಳು ಇನ್ನಷ್ಟು ಎತ್ತರಕ್ಕೆ ಏರುವ ಬಗ್ಗೆ ಅಂದಾಜು ಮಾಡಲಾಗಿದೆ.

ಟಾಪ್ 8 ಕಂಪೆನಿಗಳ ಮಾರುಕಟ್ಟೆ ಮೌಲ್ಯ 1.90 ಲಕ್ಷ ಕೋಟಿ ರು. ಹೆಚ್ಚಳ

 

ಇನ್ನು FY21, FY22 ಹಾಗೂ FY23ಕ್ಕ್ ಅರ್ನಿಂಗ್ ಪರ್ ಷೇರ್ (ಇಪಿಎಸ್) ಅಂದಾಜು 15 ಪರ್ಸೆಂಟ್, 10 ಪರ್ಸೆಂಟ್ ಹಾಗೂ 9 ಪರ್ಸೆಂಟ್ ಗೆ ಅಂದಾಜನ್ನು ಹೆಚ್ಚಳ ಮಾಡಿದೆ. ಕ್ರಮವಾಗಿ ಒಟ್ಟಾರೆ ಅಂದಾಜು ಮಾಡಿದ್ದ 6 ಪರ್ಸೆಂಟ್ ಮತ್ತು 7 ಪರ್ಸೆಂಟ್ ಗಿಂತ ಇದು ಹೆಚ್ಚಿದೆ. ಸೆನ್ಸೆಕ್ಸ್ ಗೆ ಗುರಿಯಾಗಿ ಸೂಚ್ಯಂಕವು ಇನ್ನು ಮುಂದೆ ಪ್ರೈಸ್ ಟು ಅರ್ನಿಂಗ್ಸ್ (ಪಿಇ) 16 ಪಟ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

ಕೊರೊನಾ ಸೋಂಕಿಯ ಪ್ರಕರಣಗಳು ಗರಿಷ್ಠ ಮಟ್ಟದಲ್ಲಿದ್ದು, ಹೈ ಫ್ರಿಕ್ವೆನ್ಸಿ ಬೆಳವಣಿಗೆಯ ಸೂಚ್ಯಂಕಗಳು ಪ್ರಬಲವಾಗಿವೆ. ಸರ್ಕಾರ ನೀತಿಗಳು ನಿರೀಕ್ಷೆಯನ್ನು ಮೀರಿವೆ. ಕೊರೊನಾವನ್ನು ಮೀರಿ ಭಾರತದ ಕಂಪೆನಿಗಳಲ್ಲಿ ಚಟುವಟಿಕೆ ಆರಂಭವಾಗಿದೆ. ಆದ್ದರಿಂದ ಮೇಲ್ಮುಖವಾಗಿ ಬೆಳವಣಿಗೆ ನಿರೀಕ್ಷೆ ಮಾಡ್ತೀವಿ ಎಂದು ಮೋರ್ಗನ್ ಸ್ಟ್ಯಾನ್ಲಿ ಹೇಳಿದೆ.

ಒಂದು ವೇಳೆ ಮಾರ್ಕೆಟ್ ನಲ್ಲಿ 'ಗೂಳಿ' ಓಟ ಕಂಡುಬಂದಲ್ಲಿ ಸೆನ್ಸೆಕ್ಸ್ 59,000 ಪಾಯಿಂಟ್ ತಲುಪಬಹುದು. ಕೊರೊನಾ ಚೇತರಿಕೆ ಕಂಡು, ಬೆಳವಣಿಗೆ ಮುಂದುವರಿದು, ಜಾಗತಿಕ ಉತ್ತೇಜನ ಕ್ರಮಗಳ ಬೆಂಬಲ ದೊರೆತಲ್ಲಿ ಹೂಡಿಕೆದಾರರು ಉತ್ಸಾಹ ತೋರಿಸಲಿದ್ದಾರೆ. ಒಂದು ವೇಳೆ ಕೊರೊನಾ 2021ಕ್ಕೂ ಮುಂದುವರಿದಲ್ಲಿ ಹಾಗೂ ಭಾರತದಲ್ಲಿ ಬೆಳವಣಿಗೆ ದಾಖಲಿಸಲು ಸೂಕ್ತ ನೀತಿ ನಿರೂಪಿಸಲು ಸಾಧ್ಯವಾಗದಿದ್ದಲ್ಲಿ ಸೆನ್ಸೆಕ್ಸ್ 37000 ಪಾಯಿಂಟ್ಸ್ ತಲುಪಬಹುದು ಎನ್ನಲಾಗಿದೆ.

ಒಟ್ಟಾರೆಯಾಗಿ, ಮೋರ್ಗನ್ ಸ್ಟ್ಯಾನ್ಲಿ ಪ್ರಕಾರ ಸ್ಮಾಲ್ ಕ್ಯಾಪ್ಸ್ ಮತ್ತು ಮಿಡ್ ಕ್ಯಾಪ್ಸ್ 2021ರಲ್ಲಿ ನಿರೀಕ್ಷೆಗೆ ಮೀರಿದ ಫಲಿತಾಂಶ ನೀಡಲಿವೆ.

English summary

Morgan Stanley Expect Sensex To Hit 50000 Points By 2021 December

Global brokerage firm Morgan Stanley expect Sensex to hit 50,000 points by 2021 December.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X