For Quick Alerts
ALLOW NOTIFICATIONS  
For Daily Alerts

ದುಬಾರಿ ದುನಿಯಾ: ತರಕಾರಿ, ಚಿಕನ್, ಫಿಶ್, ಹಣ್ಣು ಶ್ರೀಮಂತರಿಗೂ ಎಟುಕಲ್ಲ

|

"ಯಾವತ್ತೂ ತಿನ್ನಕ್ಕೋಸ್ಕರ ಬದುಕಬಾರದು ಕಣ್ರೀ, ಬದುಕಕ್ಕೋಸ್ಕರ ತಿನ್ನಬೇಕು" ಅನ್ನೋ ಮಾತನ್ನು ಕೇಳಿಸಿಕೊಂಡಿದ್ದೀರಾ? ಇಂಥ ಸಲಹೆ ನೀಡೋರು ಸಹ ಬದಲಾಗಬೇಕು ಅಂಥದ್ದೊಂದು ಮಾಹಿತಿ ಇಲ್ಲಿದೆ. ಇವುಗಳನ್ನು ಒಮ್ಮೆ ತಿನ್ನುವುದಕ್ಕಾದರೂ ತಾನು ಬದುಕಿರಬೇಕು ಅಂದುಕೊಳ್ಳುವಂಥ ಪದಾರ್ಥಗಳಿವು.

ಅದೆಂಥ ಶ್ರೀಮಂತನಾದರೂ ಇಂಥ ಆಹಾರ ಪದಾರ್ಥವನ್ನು ಒಂದು ಹೊತ್ತು ತಿನ್ನುವುದಕ್ಕೂ ಬಜೆಟ್ ಲೆಕ್ಕ ಹಾಕಿಕೊಳ್ಳಬೇಕು ಹಾಗಿದೆ ಇವುಗಳ ರೇಟು. ಇವುಗಳನ್ನು ತಿಂತೀರೋ ಬಿಡ್ತೀರೋ ಬೇರೆ ವಿಚಾರ. ರೇಟು ಎಷ್ಟು ಅಂತ ತಿಳಿದುಕೊಳ್ಳಿ. ಆಮೇಲೆ ಅವುಗಳ ಬೆಲೆ ಯಾಕಿಷ್ಟು ದುಬಾರಿ ಅಂತಲೂ ಗೊತ್ತು ಮಾಡಿಟ್ಟುಕೊಳ್ಳಿ. ಯಾರಿಗಾದರೂ ಹೇಳುವುದಕ್ಕಾದರೂ ಒಳ್ಳೆ ಮಾಹಿತಿ.

ಅಯಾಮ್ ಸೆಮಾನಿ ಬ್ಲ್ಯಾಕ್ ಚಿಕನ್

ಅಯಾಮ್ ಸೆಮಾನಿ ಬ್ಲ್ಯಾಕ್ ಚಿಕನ್

ಇದು ಇಂಡೋನೇಷ್ಯಾದ ತಳಿ. ಆದರೆ ಇದನ್ನು ಯಾವುದೇ ದೇಶಕ್ಕೂ ರಫ್ತು ಮಾಡಲ್ಲ. ಏಕೆಂದರೆ, ಇವುಗಳಿಂದ ಹಕ್ಕಿ ಜ್ವರ ಹರಡಬಹುದು ಅನ್ನೋ ಆತಂಕ. ಇದು ತೀರಾ ಅಪರೂಪದ ತಳಿ. ಒಂದು ಕೋಳಿಯ ಬೆಲೆ $ 200 ಆಗಬಹುದು. ಅದು ಇಂಡೋನೇಷ್ಯಾದಲ್ಲಿ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 15 ಸಾವಿರ ರುಪಾಯಿಗೂ ಹೆಚ್ಚು. ಅದೇ ಇಂಡೋನೇಷ್ಯಾದ ಆಚೆಗೆ ಇದು ಬೇಕು ಅಂದರೆ, ಸಾವಿರಾರು ಅಮೆರಿಕನ್ ಡಾಲರ್ ಆಗುತ್ತದೆ. ಆದರೂ ಮಲೇಷ್ಯಾದಲ್ಲಿ ಅಯಾಮ್ ಸೆಮಾನಿ ಬಹಳ ಸಾಮಾನ್ಯವಾಗಿ ಸಿಗುತ್ತದೆ. ಕಪ್ಪಗೆ ಬಣ್ಣ ಬಳಿದಂತೆ ಕಾಣುವ ಈ ಕೋಳಿಯನ್ನು ಕತ್ತರಿಸಿದ ಮೇಲೂ ಒಳ ಭಾಗಗಳೂ ಕಪ್ಪೋ ಕಪ್ಪು.

ಬೃಹತ್ ಬ್ಲೂಫಿನ್ ಟುನಾ

ಬೃಹತ್ ಬ್ಲೂಫಿನ್ ಟುನಾ

ಜಪಾನ್ ತ್ಸುಕಿಜಿ ಮೀನಿನ ಮಾರುಕಟ್ಟೆಯಲ್ಲಿ ಸಿಗುವ ಅತ್ಯಂತ ದುಬಾರಿ ಮೀನಿದು. ನೀವು ಎಲ್ಲಿ ಖರೀದಿ ಮಾಡುತ್ತಿದ್ದೀರಿ ಹಾಗೂ ಮೀನಿನ ಯಾವ ಭಾಗವನ್ನು ನೀವು ತಿನ್ನುತ್ತಿದ್ದೀರಿ ಎಂಬುದರ ಆಧಾರದಲ್ಲಿ ಬೆಲೆ ನಿಗದಿ ಆಗುತ್ತದೆ. 2013ರಲ್ಲಿ ಜಪಾನ್ ನಲ್ಲಿ ನಡೆದ ಹರಾಜಿನ ವೇಳೆ ಇದು 1.8 ಮಿಲಿಯನ್ ಅಮೆರಿಕನ್ ಡಾಲರ್ ಗೆ ಮಾರಾಟ ಆಗಿತ್ತು. ವಿಪರೀತ ದೊಡ್ಡದಾದ ಈ ಮೀನು ಸಿಗುವುದು, ಸಿಕ್ಕಿದರೂ ಹಿಡಿಯುವುದು ಬಹಳ ಕಷ್ಟದ ಮಾತು. ಅಕಸ್ಮಾತ್ ಬಲೆಗೆ ಬಿತ್ತು ಅಂದುಕೊಳ್ಳಿ. ಆ ವ್ಯಕ್ತಿಯ ಲಕ್ ಬದಲಾಗಿ ಹೋಗುತ್ತದೆ. ಕೋಟ್ಯಧಿಪತಿ ಆಗಿಬಿಡಬಹುದು.

ಡೆನ್ಸುಕ್ ಕಲ್ಲಂಗಡಿ

ಡೆನ್ಸುಕ್ ಕಲ್ಲಂಗಡಿ

ಇದು ಬೆಳೆಯುವುದು ಜಪಾನ್ ನ ಹೊಕಾಯ್ಡೊದಲ್ಲಿ. ತುಂಬ ಕೆಂಪಾಗಿ ಕಾಣುವ ಈ ಕಲ್ಲಂಗಡಿ ಹಣ್ಣು ಉಳಿದೆಲ್ಲ ತಳಿಯ ಹಣ್ಣಿಗಿಂತ ವಿಪರೀತ ಸಿಹಿ. ತುಂಬ ತೂಕದ ಹಣ್ಣು ಅಂದರೆ ಎಂಟು ಪೌಂಡ್ ತೂಗುತ್ತದೆ. ಇದು ಎಷ್ಟು ಅಪರೂಪದ ಹಣ್ಣು ಅಂದರೆ ಒಂದು ವರ್ಷಕ್ಕೆ ನೂರರಷ್ಟು ಹಣ್ಣುಗಳು ಬೆಳೆಯುತ್ತವೆ. ಇನ್ನು ಬೆಲೆ 250 ಅಮೆರಿಕನ್ ಡಾಲರ್ ನಿಂದ ಆರಂಭವಾಗಿ 6000 ಡಾಲರ್ ತನಕ ಇರುತ್ತದೆ. ಈ ಹಣ್ಣು ಬೆಳೆಯಲು ಎಷ್ಟು ಸಮಯ ಮೀಸಲಾಗಿ ಇಡಲಾಯಿತು ಹಾಗೂ ಎಷ್ಟು ಸ್ಥಳ ಮೀಸಲಿಡಲಾಯಿತು ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ಕಲ್ಲಂಗಡಿ ಹಣ್ಣಿನ ಬೀಜ ವಾಣಿಜ್ಯ ಉದ್ದೇಶಗಳಿಗಾಗಿ ಯುರೋಪ್, ಅಮೆರಿಕದಲ್ಲಿ ಮಾರಲಾಗುತ್ತದೆ. ಆದರೆ ಈ ಡೆನ್ಸುಕ್ ಕಲ್ಲಂಗಡಿಯನ್ನು ಜಪಾನ್ ನ ಹೊರಗೆ ವ್ಯಾಪಕವಾಗಿ ಬೆಳೆದಿಲ್ಲ. ತುಂಬ ಜೋಪಾನ ಮಾಡೀ ಬೆಳೆಸಿದರೂ ಒಂದು ವರ್ಷಕ್ಕೆ ಮಾರಾಟಕ್ಕೆ ಸಿಗುವುದು ಕೆಲವೇ ಹಣ್ಣುಗಳು ಮಾತ್ರ ಎಂಬುದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು.

ಲಾ ಬೊನೆಟೆ ಆಲೂಗಡ್ಡೆ

ಲಾ ಬೊನೆಟೆ ಆಲೂಗಡ್ಡೆ

ಈ ತಳಿಯನ್ನು ಬೆಳೆಯುವುದು ಫ್ರಾನ್ಸ್ ನ ಒಂದು ದ್ವೀಪದಲ್ಲಿ. ಈ ದ್ವೀಪದಲ್ಲಿನ ಮಣ್ಣು ವಿಶೇಷವಂತೆ. ಆದ್ದರಿಂದ ಈ ಆಲೂಗಡ್ಡೆಯ ರುಚಿಯೂ ತೀರಾ ಭಿನ್ನ ಎನ್ನಲಾಗುತ್ತದೆ. ಈ ಆಲೂಗಡ್ಡೆ ಬೆಳೆಯುವುದರಿಂದ ಮೊದಲುಗೊಂಡು ಪ್ರತಿ ಹಂತದಲ್ಲೂ ಕಾರ್ಮಿಕರ ವೆಚ್ಚ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಯಾವುದೇ ಯಂತ್ರೋಪಕರಣವನ್ನು ಇದಕ್ಕಾಗಿ ಬೆಳೆಸುವುದಿಲ್ಲ. ಒಂದು ವರ್ಷಕ್ಕೆ ಅಂದಾಜು 20 ಸಾವಿರ ಕೇಜಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಒಂದು ಕೇಜಿಗೆ 655 ಅಮೆರಿಕನ್ ಡಾಲರ್ ನಷ್ಟು ಬೆಲೆ ಸಿಗುತ್ತದೆ. ಕೆಲವು ಬಾರಿ ಇದಕ್ಕಿಂತ ಹೆಚ್ಚಿನ ಬೆಲೆಗೂ ಬಿಕರಿ ಆಗುತ್ತದೆ.

English summary

Most Expensive Food Items of World

Here is the list of most expensive food items of world. Even rich people cannot afford it.
Story first published: Sunday, April 5, 2020, 12:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X