For Quick Alerts
ALLOW NOTIFICATIONS  
For Daily Alerts

ಆರ್‌ಬಿಐನ ಎಂಪಿಸಿ ಸಭೆ ನಡುವೆ ಷೇರುಪೇಟೆ ಹೇಗಿದೆ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನವೆಂಬರ್ 3ರಂದು (ಇಂದು) ಎಂಪಿಸಿ ಸಭೆಯನ್ನು ನಡೆಸುವುದಾಗಿ ಅಕ್ಟೋಬರ್ 27ರಂದು ತಿಳಿಸಿದೆ. ಇಂದು ಎಂಪಿಸಿ ಸಭೆಯ ನಡುವೆಯೇ ಅಮೆರಿಕದಲ್ಲಿ ಬಡ್ಡಿದರವನ್ನು ಮತ್ತೆ ತೀವ್ರವಾಗಿ ಏರಿಕೆ ಮಾಡಲಾಗಿದೆ.

ಈಗ ಭಾರತದಲ್ಲಿಯೂ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಲಾಗುತ್ತದೆಯೇ ಎಂಬ ಚರ್ಚೆಗಳು ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಈ ಸಮಯಕ್ಕೆ ಹಾಗೂ ಆರಂಭಿಕ ವಹಿವಾಟಿನಲ್ಲಿ ಇಂದು ಷೇರು ಮಾರುಕಟ್ಟೆ ಹೇಗಿದೆ ಎಂಬುವುದನ್ನು ನಾವಿಲ್ಲಿ ವಿವರಿಸಿದ್ದೇವೆ. ಆರಂಭಿಕ ವಹಿವಾಟಿನಲ್ಲಿ ಷೇರುಮಾರುಕಟ್ಟೆಯು ಕುಸಿತದೊಂದಿಗೆ ವಹಿವಾಟಿಗೆ ಇಳಿದಿದೆ. ನವೆಂಬರ್ 3ರಂದು ಸೆನ್ಸೆಕ್ಸ್ ಹಾಗೂ ನಿಫ್ಟಿ ವಹಿವಾಟಿನ ಆರಂಭದಲ್ಲಿ ಕುಸಿದಿದೆ. ಮಧ್ಯಾಹ್ನದ ವೇಳೆಗೂ ಷೇರುಪೇಟೆ ಪಾತಾಳಕ್ಕೆ ಇಳಿಯುತ್ತಲೇ ಇದೆ.

ಇಂದು ಆರ್‌ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?ಇಂದು ಆರ್‌ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?

ಗುರುವಾರ 30 ಷೇರುಗಳ ಬಿಎಸ್‌ಇ ಸೂಚ್ಯಂಕ 270.48 ಅಂಕ ಅಥವಾ ಶೇಕಡ 0.44ರಷ್ಟು ಇಳಿಕೆಯಾಗಿ 60635.61ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು ನಿಫ್ಟಿ 79.00 ಅಂಕ ಅಥವಾ ಶೇಕಡ 0.44ರಷ್ಟು ಕುಸಿದು 18003.80ಕ್ಕೆ ವಹಿವಾಟಿಗೆ ಇಳಿದಿದೆ. ಇನ್ನು 765 ಷೇರುಗಳು ಏರಿಕೆಯಾಗಿದ್ದರೆ, 1119 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 129 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

 ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?

ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?

ಆರಂಭಿಕ ವಹಿವಾಟಿನಲ್ಲಿ ಹಿಂಡಾಲ್ಕೋ ಇಂಡಸ್ಟ್ರೀಸ್, ವಿಪ್ರೋ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಕೋಲ್ ಇಂಡಿಯಾ ಸ್ಟಾಕ್ ಕುಸಿದಿದೆ. ಬಜಾಜ್ ಆಟೋ, ಟೈಟಾನ್ ಕಂಪನಿ, ಐಟಿಸಿ, ಈಚರ್ ಮೋಟಾರ್ಸ್ ಹಾಗೂ ಬ್ರಿಟಾನಿಯ ಇಂಡಸ್ಟ್ರೀಸ್ ಸ್ಟಾಕ್‌ಗಳು ಏರಿಕೆಯಾಗಿದೆ. ಪ್ರಸ್ತುತ ಬಜಾಜ್ ಆಟೋ ಸ್ಟಾಕ್ ಟಾಪ್ ಸ್ಟಾಕ್ ಆಗಿದೆ. ಸ್ಟಾಕ್ ಸುಮಾರು ಶೇಕಡ 1.42ರಷ್ಟು ಏರಿಕೆಯಾಗಿ ರೂಪಾಯಿ 3,790.00ಕ್ಕೆ ತಲುಪಿದೆ. ಹಿಂಡಾಲ್ಕೋ ಸ್ಟಾಕ್ ಶೇಕಡ 2.61ರಷ್ಟು ಕುಸಿದು, ರೂಪಾಯಿ 410.30ಕ್ಕೆ ತಲುಪಿದೆ. ಇನ್ನು ನಿಫ್ಟಿ ಪಿಯುಸಿ ಬ್ಯಾಂಕ್ ಬೆಸ್ಟ್ ಸೆಕ್ಟರ್ ಆಗಿದೆ. ಶೇಕಡ 1.65ರಷ್ಟು ಹೆಚ್ಚಾಗಿ ರೂಪಾಯಿ 3466.60ಕ್ಕೆ ತಲುಪಿದೆ. ಆದರೆ ನಿಫ್ಟಿ ಐಟಿ ಭಾರೀ ಕುಸಿದಿದೆ. ಶೇಕಡ 1.27ರಷ್ಟು ಇಳಿದು ರೂಪಾಯಿ 28769.50ಕ್ಕೆ ತಲುಪಿದೆ.

 ಹಣದುಬ್ಬರ ಮತ್ತಷ್ಟು ಏರಿಕೆ?

ಹಣದುಬ್ಬರ ಮತ್ತಷ್ಟು ಏರಿಕೆ?

ಈ ನಡುವೆ "2019 ಅಕಾಲಿಕ ಮಳೆಯಾದಾಗ ಆಹಾರ ಉತ್ಪನ್ನಗಳ ಬೆಲೆ ದುಪ್ಪಟ್ಟು ಆಗಿತ್ತು. ಶೇಕಡ 4.9ರಿಂದ ಶೇಕಡ 10.9ರಷ್ಟು ಏರಿತ್ತು. ಪ್ರಸ್ತುತ ಸೆಪ್ಟೆಂಬರ್ ಆಹಾರ ಹಣದುಬ್ಬರ ಶೇಕಡ 8.4ರಷ್ಟು ಇದೆ. ಈ ನಡುವೆ ಡಿಸೆಂಬರ್‌ ಒಳಗೆ ದೇಶದಲ್ಲಿ ಒಟ್ಟಾರೆ ಹಣದುಬ್ಬರವು ಶೇಕಡ 7.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ," ಎಂದು ಎಸ್‌ಬಿಐ ವರದಿ ಹೇಳಿದೆ.

 1 ಗಂಟೆಗೆ ಷೇರುಪೇಟೆ ಹೇಗಿದೆ?

1 ಗಂಟೆಗೆ ಷೇರುಪೇಟೆ ಹೇಗಿದೆ?

ಮಧ್ಯಾಹ್ನ ಸುಮಾರು 12 ಗಂಟೆಗೆ 30 ಷೇರುಗಳ ಬಿಎಸ್‌ಇ ಸೂಚ್ಯಂಕ 94.97 ಅಂಕ ಅಥವಾ ಶೇಕಡ 0.16ರಷ್ಟು ಇಳಿಕೆಯಾಗಿ 60,811.12ಕ್ಕೆ ತಲುಪಿದೆ. ಇನ್ನು ನಿಫ್ಟಿ 33.20 ಅಂಕ ಅಥವಾ ಶೇಕಡ 0.18ರಷ್ಟು ಕುಸಿದು 18,049.60ಕ್ಕೆ ತಲುಪಿದೆ. ಇನ್ನು 1618 ಷೇರುಗಳು ಏರಿಕೆಯಾಗಿದ್ದರೆ, 1475 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 123 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಇನ್ನು 1 ಗಂಟೆ ಸುಮಾರಿಗೆ ಷೇರುಪೇಟೆ ಮತ್ತಷ್ಟು ಕುಸಿದಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 232.71 ಅಂಕ ಅಥವಾ ಶೇಕಡ 0.38ರಷ್ಟು ಇಳಿಕೆಯಾಗಿ 60,673.38ಕ್ಕೆ ತಲುಪಿದೆ. ಇನ್ನು ನಿಫ್ಟಿ 74.00 ಅಂಕ ಅಥವಾ ಶೇಕಡ 0.41ರಷ್ಟು ಕುಸಿದು 18,008.80ಕ್ಕೆ ತಲುಪಿ ವಹಿವಾಟು ನಡೆಸುತ್ತಿದೆ. ಇನ್ನು 1503 ಷೇರುಗಳು ಏರಿಕೆಯಾಗಿದ್ದರೆ, 1634 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 130 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ನವೆಂಬರ್ 3ರಂದು ಆರ್‌ಬಿಐ ಸಭೆ, ಯಾಕಾಗಿ?ನವೆಂಬರ್ 3ರಂದು ಆರ್‌ಬಿಐ ಸಭೆ, ಯಾಕಾಗಿ?

English summary

MPC Meeting: How is Share Market Amid MPC Meeting, Details in Kannada

MPC Meeting: RBI may increase repo rate once again. How is Share Market Amid MPC Meeting. explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X