ದೀಪಾವಳಿಯ ಸಂದರ್ಭದಲ್ಲಿ ನವೆಂಬರ್ 4, 2021ರಂದು 'ಮುಹೂರ್ತ' ಟ್ರೇಡಿಂಗ್ ಸೆಷನ್ ನಡೆದಿದೆ. ಈ ಸೆಷನ್ ಮೂಲಕ ಬಿಎಸ್‌ಇ ಹಾಗೂ ಎನ್‌ಎಸ್‌ಇ ಹೂಡಿಕೆದಾರರು ಸ್ಟಾಕ್ ಅನ್ನು ಖರೀದಿ ಮಾಡಲು ಹಾಗೂ ಮಾರಾಟ ಮಾಡಲು ಅವಕಾಶವನ್ನು ನೀಡಲಾಗಿತ್ತು.
ಗುರವಾರದಂದು ನಡೆದ ಮುಹೂರ್ತ ಟ್ರೇಡಿಂಗ್ ಸೆಷನ್ನಲ್ಲಿ ಸೆನ್ಸೆಕ್ಸ್ ಮತ್ತೆ 60,500 ಪಾಯಿಂಟ್ಸ್ ಕಂಡಿದೆ. ಇದೇ ಸಂದರ್ಭದಲ್ಲಿ ನಿಫ್ಟಿ 50 ಸೂಚ್ಯಂಕವು 18000 ಪಾಯಿಂಟ್ಸ್ ಸಮೀಪಕ್ಕೆ ತಲುಪಿದೆ.
ದೀಪಾವಳಿ ಹಿನ್ನೆಲೆ ನಡೆಯುವ 'ಮುಹೂರ್ತ' ಟ್ರೇಡಿಂಗ್ ಸೆಷನ್ ಸಂದರ್ಭದಲ್ಲಿ ಹೂಡಿಕೆದಾರರಿಗೆ ಉತ್ತಮವಾದ ರಿಟರ್ನ್ ಅನ್ನು ನೀಡುವ ಪ್ರೀ-ಓಪನ್ ಸೆಷನ್ನಲ್ಲಿ ನೀಡಲಾಗಿದೆ. ಆ ಬಳಿಕ ನಡೆದ ವಹಿವಾಟಿನ ಅಂತ್ಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 295.70 ಪಾಯಿಂಟ್ಸ್ ಅಥವಾ ಶೇ 0.49ರಷ್ಟು ಮೇಲೇರಿದ್ದು 60,067.62 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿದಿದೆ. ಇನ್ನು ನಿಫ್ಟಿ ನಿಫ್ಟಿ 50 ಸೂಚ್ಯಂಕವು 91.80 ಪಾಯಿಂಟ್ಸ್ ಅಥವಾ ಶೇ 0.51ರಷ್ಟು ಮೇಲೇರಿ 17,921 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿಸಿದೆ.

ನವೆಂಬರ್ 4ರಂದು ಸಂಜೆ 5:45ಕ್ಕೆ ಬ್ಲಾಕ್ ಡೀಲ್ ಸೆಷನ್ ಆರಂಭವಾಗಿದೆ. ಸಂಜೆ 5:45ಕ್ಕೆ ಆರಂಭವಾದ ಬ್ಲಾಕ್ ಡೀಲ್ ಸೆಷನ್ 6 ಗಂಟೆಗೆ ಕೊನೆಯಾಗಿದೆ. ಬಳಿಕ ಸಂಜೆ 6 ಮತ್ತು 6:08ರ ನಡುವೆ ಪ್ರೀ- ಓಪನ್ ಸೆಷನ್ ನಡೆದಿದೆ. ಸಾಮಾನ್ಯ ಮಾರುಕಟ್ಟೆಯು ಸಂಜೆ 6:15ರಿಂದ ರಾತ್ರಿ 7:15ರ ವರೆಗೆ ನಡೆದಿದೆ. ಆ ಬಳಿಕ ಕಾಲ್ ಆಕ್ಷನ್ ಇಲಿಕ್ವಿಡ್ ಸೆಷನ್ ಮತ್ತು ಮುಕ್ತಾಯದ ಅವಧಿ ನಡೆಸಲಾಗಿದೆ.
ಇನ್ನು ಈ 'ಮುಹೂರ್ತ' ಟ್ರೇಡಿಂಗ್ ಸೆಷನ್ ಸಂದರ್ಭದಲ್ಲಿ ಸುಮಾರು 2535 ಕಂಪೆನಿಯ ಷೇರುಗಳು ಹೆಚ್ಚಳವಾಗಿದೆ. ಆದರೆ ಇದೇ ಸಂದರ್ಭದಲ್ಲಿ 514 ಕಂಪೆನಿಯ ಷೇರುಗಳು ಇಳಿಕೆಯನ್ನು ದಾಖಲು ಮಾಡಿದೆ. ಈ ನಡುವೆ 146 ಕಂಪನಿಗಳ ಷೇರುಗಳಲ್ಲಿ ಯಾವುದೇ ಬದಲಾವಣೆಗಳು ದಾಖಲು ಆಗಿಲ್ಲ. ಇನ್ನು ವಾಹನ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಸೂಚ್ಯಂಕವು ತಲಾ ಶೇಕಡ ಒಂದರಷ್ಟು ಏರಿಕೆ ಕಂಡಿದೆ. ಮಧ್ಯಮ ಬಂಡವಾಳದ ಹಾಗೂ ಸಣ್ಣ ಬಂಡವಾಳದ ಸೂಚ್ಯಂಕಗಳು ಶೇಕಡ 0.5ರಿಂದ ಶೇ 1ರ ತನಕ ತಲಾ ಅಧಿಕವಾಗಿದೆ.
ಪ್ರಮುಖವಾಗಿ ಯಾವೆಲ್ಲಾ ಷೇರುಗಳಲ್ಲಿ ಏರಿಕೆ ಕಂಡಿದೆ?
ಇನ್ನು ನಿಫ್ಟಿಯಲ್ಲಿ ಪ್ರಮುಖವಾಗಿ ಕೆಲವು ಸುಮಾರು 2535 ಕಂಪೆನಿಯ ಷೇರುಗಳು ಏರಿಕೆ ಕಂಡಿದೆ. ಐಷರ್ ಮೋಟಾರ್ಸ್‌ನ ಷೇರುಗಳು ಶೇಕಡ 5.54 ರಷ್ಟು ಹೆಚ್ಚಳವನ್ನು ದಾಖಲು ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾವು ಶೇಕಡ 2.81 ಷೇರು ಏರಿಕೆಯನ್ನು ಕಂಡಿದೆ. ಈ ನಡುವೆ ಐಟಿಸಿ ಷೇರು ಶೇಕಡ 1.84 ರಷ್ಟು ಹೆಚ್ಚಳವಾಗಿದೆ. ಇನ್ನು ಬಜಾಜ್ ಆಟೋ ಷೇರು ಶೇಕಡ 1.65 ರಷ್ಟು ಅಧಿಕ ಆಗಿದೆ. ಈ ಮಧ್ಯೆ ಐಒಸಿ ಷೇರುಗಳು ಶೇಕಡ 1.58 ರಷ್ಟು ಏರಿಕೆಯನ್ನು ದಾಖಲು ಮಾಡಿದೆ.
ಇಳಿಕೆ ಕಂಡ ಪ್ರಮುಖ ಷೇರುಗಳು ಯಾವುದು?
'ಮುಹೂರ್ತ' ಟ್ರೇಡಿಂಗ್ ಸೆಷನ್ ಸಂದರ್ಭದಲ್ಲಿ ಹೆಚ್ಚಾಗಿ ಷೇರುಗಳು ಏರಿಕೆ ಆಗುವ ನಿರೀಕ್ಷೆ ಇರುತ್ತದೆ. 2535 ಕಂಪೆನಿಯ ಷೇರುಗಳು ಏರಿಕೆ ಕಂಡಿದೆ. ಆದರೆ ಈ ಸಂದರ್ಭದಲ್ಲೇ 514 ಕಂಪೆನಿಯ ಷೇರುಗಳು ಇಳಿಕೆಯನ್ನು ದಾಖಲು ಮಾಡಿದೆ. ಪ್ರಮುಖವಾಗಿ ಹಿಂಡಾಲ್ಕೋ ಷೇರು ಶೇಕಡ -1.19 ರಷ್ಟು ಇಳಿಕೆ ದಾಖಲಿಸಿದೆ. ಐಸಿಐಸಿಐ ಬ್ಯಾಂಕು ಷೇರು ಶೇಕಡ -0.49 ರಷ್ಟು ಇಳಿಕೆ ಕಂಡಿದೆ. ಏಷ್ಯನ್ ಪೇಂಟ್ಸ್ ಷೇರು ಶೇಕಡ -0.36 ರಷ್ಟು ಕುಸಿದಿದೆ. ಜೆಎಸ್ಡಬ್ಲ್ಯು ಸ್ಟೀಲ್ ಷೇರು ಶೇಕಡ -0.24 ರಷ್ಟು ಪಾತಾಳಕ್ಕೆ ಇಳಿದಿದೆ. ಇನ್ನು ಈ ಸಂದರ್ಭದಲ್ಲೇ ಸಿಪ್ಲಾ ಷೇರು ಕೂಡಾ ಶೇಕಡ -0.21 ರಷ್ಟು ಇಳಿದಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications