ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಯೂರೋಪ್ ಫುಟ್ಬಾಲ್ ದೈತ್ಯ ಲಿವರ್‌ಪೂಲ್ ಕ್ಲಬ್ ಅನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬಂದಿದೆ. ಆದರೆ, ರಿಲಾಯನ್ಸ್ ವತಿಯಿಂದ ಇನ್ನೂ ಖಚಿತತೆ ಬಂದಿಲ್ಲ. ಅದೇನೇ ಇದ್ದರೂ ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ಅನ್ನು ಮಾರಾಟಕ್ಕಿಡಲಾಗಿರುವುದಂತೂ ಹೌದು.
ವರದಿಯ ಪ್ರಕಾರ ಲಿವರ್‌ಪೂಲ್ ಫುಟ್ಬಾಲ್ ಕ್ಲಬ್‌ನ ಈಗಿನ ಮಾಲೀಕರಾದ ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್ (ಎಫ್‌ಎಸ್‌ಜಿ) ಅವರು 4 ಬಿಲಿಯನ್ ಪೌಂಡ್ (38 ಸಾವಿರ ಕೋಟಿ ರೂಪಾಯಿ) ಹಣಕ್ಕೆ ಮಾರಲು ಹೊರಟಿದ್ದಾರೆನ್ನಲಾಗಿದೆ.
2010ರಲ್ಲಿ ಲಿವರ್‌ಪೂಲ್ ಕ್ಲಬ್ ಅನ್ನು ಮುಕೇಶ್ ಅಂಬಾನಿ ಖರೀದಿಸಲು ಯತ್ನಿಸಿದ್ದಂಟು. ಆಗ ಲಿವರ್‌ಪೂಲ್ ಟಾಮ್ ಹಿಕ್ಸ್ ಮತ್ತು ಜಾರ್ಜ್ ಗಿಲೆಟ್ ಅವರ ಒಡೆತನದಲ್ಲಿತ್ತು. ಅಂಬಾನಿ ಜೊತೆ ಸಹಾರಾ ಗ್ರೂಪ್‌ನ ಸುಬ್ರತಾ ರಾಯ್ ಕೂಡ ಲಿವರ್ ಪೂಲ್ ಕ್ಲಬ್ ಖರೀದಿಗೆ ಬಿಡ್ಡಿಂಗ್ ಹಾಕಲೊರಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಎಫ್‌ಎಸ್‌ಜಿಯವರು 300 ಮಿಲಿಯನ್ ಪೌಂಡ್ (ಸುಮಾರು 2.5 ಸಾವಿರ ಕೋಟಿ ರೂ) ಹಣಕ್ಕೆ ಆ ಕ್ಲಬ್ ಅನ್ನು ಖರೀದಿಸಿದ್ದರು. ಇದೀಗ ಒಳ್ಳೆಯ ಓಟದಲ್ಲಿರುವಾಗ ಕ್ಲಬ್ ಅನ್ನು ಮಾರಲು ಮುಂದಾಗಿದ್ದಾರೆ.

ವಿಶ್ವದ 9ನೇ ಅತಿದೊಡ್ಡ ಶ್ರೀಮಂತನಾಗಿರುವ ಮುಕೇಶ್ ಅಂಬಾನಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಖಚಿತವಾಗಿ ಹೇಳಲಾಗದು. ಸುದ್ದಿಸಂಸ್ಥೆಯೊಂದರ ವರದಿ ಪ್ರಕಾರ, ಲಿವರ್‌ಪೂಲ್ ಕ್ಲಬ್ ಅನ್ನು ಖರೀದಿಸುವ ಯಾವುದೇ ಆಸಕ್ತಿಯನ್ನು ಅಂಬಾನಿ ವ್ಯಕ್ತಪಡಿಸಿಲ್ಲ. ಲಿವರ್ ಪೂಲ್ ಕ್ಲಬ್ ಅನ್ನು ರಿಲಾಯನ್ಸ್ ಖರೀದಿಸಲು ಮುಂದಾಗಿದೆ ಎನ್ನುವ ಸುದ್ದಿ ಸುಳ್ಳು ಎಂದು ರಿಲಾಯನ್ಸ್ ಹೇಳಿದೆ ಎಂದು ಸುದ್ದಿಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಸಂಸ್ಥೆ ಎಐಎಫ್‌ಎಫ್‌ನ ಕಮರ್ಷಿಯಲ್ ಪಾರ್ಟ್ನರ್ ಆಗಿದೆ. ಭಾರತದ ಅಗ್ರಮಾನ್ಯ ಫುಟ್ಬಾಲ್ ಟೂರ್ನಿ ಇಂಡಿಯನ್ ಸೂಪರ್ ಲೀಗ್‌ನ ಆಯೋಜನೆ ರಿಲಾಯನ್ಸ್ ಮಾಡುತ್ತದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವ ರಿಲಾಯನ್ಸ್‌ನದ್ದಾಗಿದೆ.
ಲಿವರ್‌ಪೂಲ್ ಕ್ಲಬ್ ವಿಶ್ವದ ಟಾಪ್-5 ಅತಿ ಮೌಲ್ಯಯುತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದೆನಿಸಿದೆ. ಇಂಗ್ಲೀಷ್ ಪ್ರೀಮಿಯರ್ ಲೀಗ್‌ನಲ್ಲಿ ಲಿವರ್‌ಪೂಲ್ ಪ್ರಮುಖ ತಂಡವೆನಿಸಿದೆ. ಜರ್ಮನಿಯ ಜುರ್ಗೆನ್ ಕ್ಲಾಬ್ ಕೋಚ್ ಆದ ಬಳಿಕ ಲಿವರ್‌ಪೂಲ್ ತಂಡ ಹೆಚ್ಚು ಬಲಿಷ್ಠವಾಗಿ ಹೊರಹೊಮ್ಮಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications