For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: 15 ಕೋಟಿ ವೇತನ ಪೂರ್ತಿ ಬಿಟ್ಟುಕೊಟ್ಟ ಮುಕೇಶ್ ಅಂಬಾನಿ

|

ಕೊರೊನಾ ವ್ಯಾಪಿಸಿರುವ ಬೆನ್ನಿಗೆ ಕರೆ ನೀಡಿದ ಲಾಕ್ ಡೌನ್, ಅದರಿಂದ ವ್ಯಾಪಾರಗಳ ಮೇಲೆ ಆದ ಅಡ್ಡ ಪರಿಣಾಮದಿಂದ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಹೊರತಾಗಿಲ್ಲ. ಆದರೆ ಅದು ಅಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ವೇತನ 15 ಕೋಟಿ ರುಪಾಯಿ ಬಿಟ್ಟುಕೊಡುವುದಕ್ಕೆ ನಿರ್ಧರಿಸಿದ್ದಾರೆ.

ಕೊರೊನಾದಿಂದ ವ್ಯಾಪಾರಗಳು ಚೇತರಿಕೆ ಕಾಣಿಸಿಕೊಳ್ಳುವ ತನಕ ಹೀಗೆ ತಮ್ಮ ವೇತನವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. 2009ರಿಂದಲೂ ಮುಕೇಶ್ ಅಂಬಾನಿ ತಮ್ಮ ವೇತನವನ್ನು 15 ಕೋಟಿಗಿಂತಲೂ ಹೆಚ್ಚು ಮಾಡಿಕೊಂಡಿಲ್ಲ. ಆ ಮೂಲಕ ಇತರರಿಗೆ ಒಂದು ಮಾದರಿಯನ್ನು ಸಿದ್ಧಪಡಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಗೆ S&P Globalನಿಂದ BBB+ ರೇಟಿಂಗ್ರಿಲಯನ್ಸ್ ಇಂಡಸ್ಟ್ರೀಸ್ ಗೆ S&P Globalನಿಂದ BBB+ ರೇಟಿಂಗ್

ಏಪ್ರಿಲ್ 1ರಿಂದ ಅನ್ವಯ ಆಗುವಂತೆ ರಿಲಯನ್ಸ್ ಕಂಪೆನಿಯ ನಿರ್ದೇಶಕರು, ಕಾರ್ಯ ನಿರ್ವಾಹಕ ನಿರ್ದೇಶಕರು ಮತ್ತು ಹಿರಿಯ ನಾಯಕತ್ವದ ಸ್ಥಾನದಲ್ಲಿ ಇರುವವರು ತಮ್ಮ ವೇತನದಲ್ಲಿ 30- 50 ಪರ್ಸೆಂಟ್ ಬಿಟ್ಟುಕೊಡಲು ಮುಂದಾಗಿದ್ದಾರೆ. ಇನ್ನು ತೈಲ ಬೇಡಿಕೆಯಲ್ಲಿ ಇಳಿಕೆಯಾದ್ದರಿಂದ ಹೈಡ್ರೋಕಾರ್ಬನ್ ಗೆ ವ್ಯವಹಾರ ಕೈ ಕಚ್ಚಿದೆ.

ಕೊರೊನಾ ಎಫೆಕ್ಟ್: 15 ಕೋಟಿ ವೇತನ ಪೂರ್ತಿ ಬಿಟ್ಟುಕೊಟ್ಟ ಮುಕೇಶ್

ಆದ್ದರಿಂದ ಹೈಡ್ರೋಕಾರ್ಬನ್ಸ್ ನಲ್ಲಿ ಕೆಲಸ ಮಾಡುವವರಲ್ಲಿ ಯಾರಿಗೆ ವರ್ಷಕ್ಕೆ 15 ಲಕ್ಷಕ್ಕೆ ಮೀರಿದ ವೇತನ ಇದೆಯೋ ಅಂಥವರಿಗೆ 10 ಪರ್ಸೆಂಟ್ ಫಿಕ್ಸೆಡ್ ಪೇ ಕಡಿತ ಮಾಡಲಾಗುತ್ತದೆ. ಅದಕ್ಕಿಂತ ಕಡಿಮೆ ಸಂಬಳ ಇರುವವರಿಗೆ ಯಾವುದೇ ಕಡಿತ ಮಾಡುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.

ನಗದು ಬೋನಸ್ ಹಾಗೂ ಪರ್ಫಾರ್ಮೆನ್ಸ್ ಗೆ ಹೊಂದಿಕೊಂಡ ಇನ್ಸೆಂಟಿವ್ ಅನ್ನು ಸಾಮಾನ್ಯವಾಗಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ನೀಡಲಾಗುತ್ತದೆ. ಅದನ್ನು ಮುಂದೂಡಲಾಗಿದೆ.

English summary

Mukesh Ambani Forego His Salary Of 15 Crore

Corona effect: Reliance Industry chairman Mukesh Ambani forego his salary 15 crore. Here is the details.
Story first published: Thursday, April 30, 2020, 19:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X