For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಏಷ್ಯಾದ ಶ್ರೀಮಂತ ಪಟ್ಟ ಕಳೆದುಕೊಂಡ ಮುಕೇಶ್ ಅಂಬಾನಿ

|

ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದಲ್ಲೇ ನಂಬರ್ 1 ಶ್ರೀಮಂತ ಎಂಬ ಪಟ್ಟವನ್ನು ಕಳೆದುಕೊಂಡಿದ್ದಾರೆ. ಸೋಮವಾರ (ಮಾರ್ಚ್ 9) ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಹಾಗೂ ಷೇರು ಬೆಲೆ ಕುಸಿತದ ಪರಿಣಾಮ ಮುಕೇಶ್‌ ಅಂಬಾನಿ ಮೊದಲ ಸ್ಥಾನದಿಂದ ಕೆಳಗೆ ಜಾರಿದ್ದಾರೆ.

ಮುಕೇಶ್‌ ಅಂಬಾನಿ ಏಷ್ಯಾದ ಸಿರಿವಂತ ಪಟ್ಟವನ್ನು ಕಳೆದುಕೊಂಡ ಬಳಿಕ ಚೀನಾದ ಅಲಿಬಾಬಾ ಗ್ರೂಪ್‌ನ ಸಂಸ್ಥಾಪಕ ಜಾಕ್‌ ಮಾ ಏಷ್ಯಾದ ನಂಬರ್ 1 ಶ್ರೀಮಂತ ಸ್ಥಾನ ಪಡೆದಿದ್ದಾರೆ.

ಕೊರೊನಾ ಭೀತಿಗೆ ಕಂಗೆಟ್ಟಿರುವ ಷೇರುಪೇಟೆ

ಕೊರೊನಾ ಭೀತಿಗೆ ಕಂಗೆಟ್ಟಿರುವ ಷೇರುಪೇಟೆ

ಸೋಮವಾರ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಹೋಯಿತು. ಸೆನ್ಸೆಕ್ಸ್ 1,941.67 ಅಂಶಗಳು ಕುಸಿತಗೊಂಡಿದು. ಎನ್‌ಎಸ್‌ಇ ಸೂಚ್ಯಕ ನಿಫ್ಟಿ 538 ಅಂಶಗಳು ಕುಸಿತ ಕಾಣುವ ಮೂಲಕ ಷೇರುಪೇಟೆಯಲ್ಲಿ ಹೂಡಿಕೆದಾರರ ಆರು ಲಕ್ಷಕ್ಕೂ ಅಧಿಕ ಸಂಪತ್ತು ಕರಗಿ ಹೋಯಿತು.

ರಿಲಯನ್ಸ್ ಸೇರಿದಂತೆ ಅನೇಕ ಕಂಪನಿಗಳ ಷೇರು ಭಾರೀ ಕುಸಿತ

ರಿಲಯನ್ಸ್ ಸೇರಿದಂತೆ ಅನೇಕ ಕಂಪನಿಗಳ ಷೇರು ಭಾರೀ ಕುಸಿತ

ಸೋಮವಾರ ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ ಬೃಹತ್ ಕಂಪನಿಗಳಲ್ಲಿ ಪ್ರಮುಖವಾದುದು ರಿಲಯನ್ಸ್‌ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ಕಂಪನಿಯ ಷೇರುಗಳು. ಕಳೆದ ವರ್ಷ ಡಿಸೆಂಬರ್‌ 20ರಂದು 1,617.55 ರುಪಾಯಿಗೆ ತಲುಪಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮೂರು ತಿಂಗಳ ಒಳಗೆ 1114.15 ಅಂಶಗಳಿಗೆ ತಲುಪಿದೆ. ಸೋಮವಾರ ಆರ್‌ಐಎಲ್ 156.85 ಪಾಯಿಂಟ್ಸ್‌ ಇಳಿಕೆಗೊಂಡಿತು.

ಷೇರುಪೇಟೆಯಲ್ಲಿ ಕರಡಿ ತಕ ತಕ ಕುಣಿತ: 5 ಲಕ್ಷ ಕೋಟಿ ಸಂಪತ್ತು ಢಮಾರ್ಷೇರುಪೇಟೆಯಲ್ಲಿ ಕರಡಿ ತಕ ತಕ ಕುಣಿತ: 5 ಲಕ್ಷ ಕೋಟಿ ಸಂಪತ್ತು ಢಮಾರ್

ಒಂದೇ ದಿನದಲ್ಲಿ ಅಂಬಾನಿಯ 42,855 ಕೋಟಿ ರುಪಾಯಿ ನಾಶ

ಒಂದೇ ದಿನದಲ್ಲಿ ಅಂಬಾನಿಯ 42,855 ಕೋಟಿ ರುಪಾಯಿ ನಾಶ

ಒಂದೇ ದಿನದಲ್ಲಿ ಮುಕೇಶ್ ಅಂಬಾನಿಯ 5.8 ಬಿಲಿಯನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 42,855 ಕೋಟಿ ರುಪಾಯಿ ಕರಗಿ ಹೋಗಿದೆ. ಇದರಿಂದಾಗಿ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದಕೊಂಡು ಎರಡನೇ ಸ್ಥಾನಕ್ಕೆ ಕುಸಿದರು ಎಂದು ಬ್ಲೂಮಬರ್ಗ್ ವರದಿ ಮಾಡಿದೆ.

ನಂಬರ್ 1 ಸ್ಥಾನದಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ

ನಂಬರ್ 1 ಸ್ಥಾನದಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ

2018ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥಾಪಕ ಜಾಕ್ ಮಾ 44.5 ಬಿಲಿಯನ್ ಡಾಲರ್ ಭಾರತದ ರುಪಾಯಿಗಳಲ್ಲಿ ಸುಮಾರು 3.29 ಲಕ್ಷ ಕೋಟಿ ರುಪಾಯಿ ಸಂಪತ್ತಿನೊಂದಿಗೆ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ.

ಜಾಕ್ ಮಾ ಅಂಬಾನಿಯ ಸಂಪತ್ತಿಗಿಂತ 2.6 ಬಿಲಿಯನ್ ಡಾಲರ್ ಅಧಿಕ ಸಂಪತ್ತು ಹೊಂದಿದ್ದಾರೆ.

 

ಸೌದಿ ಅರೇಬಿಯಾ-ರಷ್ಯಾ ನಡುವೆ ತೈಲ ಸಮರ

ಸೌದಿ ಅರೇಬಿಯಾ-ರಷ್ಯಾ ನಡುವೆ ತೈಲ ಸಮರ

ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ತೈಲ ಸಮರದಿಂದಾಗಿ 29 ವರ್ಷಗಳಲ್ಲಿ ಕಚ್ಚಾ ತೈಲ ದರವು ಅತ್ಯಧಿಕ ಕುಸಿತ ಕಂಡಿದೆ. ಇದರ ಜೊತೆಗೆ ಕೊರೊನಾವೈರಸ್ ಪರಿಣಾಮವಾಗಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೇಡಿಕೆಯು ಕಡಿಮೆ ಆಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆ ಹಾಗೂ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬೀರಿದೆ.

English summary

Mukesh Ambani Lost Asia's Richest Crown

Indian energy tycoon Mukesh Ambani is no longer Asia’s richest man, relinquishing the title to Jack Ma after oil prices collapsed along with global stocks.
Story first published: Tuesday, March 10, 2020, 14:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X