For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!

|

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ನಡುವೆ ಮುಕೇಶ್ ಅಂಬಾನಿ ಮಾಸಿಕ ವೇತನವನ್ನು ಕೇಳಿದ್ರೆ ನೀವು ಶಾಕ್ ಆಗುವುದಂತು ಖಂಡಿತ.

ಹೌದು, ಬಿಲಿಯನೇರ್ ಮುಕೇಶ್ ಅಂಬಾನಿ ಸತತ ಎರಡನೇ ವರ್ಷ ತನ್ನ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಯಾವುದೇ ವೇತನವನ್ನು ಪಡೆದಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಮುಕೇಶ್ ಅಂಬಾನಿ ತನ್ನ ಸಂಸ್ಥೆಯಿಂದ ಯಾವುದೇ ಸಂಬಳವನ್ನು ಪಡೆದುಕೊಂಡಿಲ್ಲ. ಈ ಹಣಕಾಸು ವರ್ಷದಲ್ಲೂ ವೇತನವನ್ನು ಪಡೆದಿಲ್ಲ.

Breaking news: ಮುಕೇಶ್ ರಾಜೀನಾಮೆ, ರಿಲಯನ್ಸ್ ಜಿಯೋ ನೂತನ ‍ಮುಖ್ಯಸ್ಥ ಆಕಾಶ್ ಅಂಬಾನಿBreaking news: ಮುಕೇಶ್ ರಾಜೀನಾಮೆ, ರಿಲಯನ್ಸ್ ಜಿಯೋ ನೂತನ ‍ಮುಖ್ಯಸ್ಥ ಆಕಾಶ್ ಅಂಬಾನಿ

ಕೊರೊನಾ ಸಾಂಕ್ರಾಮಿಕವು ಉದ್ಯಮ ಹಾಗೂ ಆರ್ಥಿಕತೆಗೆ ಏಟು ನೀಡಿದೆ. ಇದರಿಂದಾಗಿ ತನ್ನ ಸಂಬಳವನ್ನು ಮುಕೇಶ್ ಅಂಬಾನಿ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮಾಹಿತಿ ನೀಡಿದೆ. ಹಣಕಾಸು ವರ್ಷ 2020-21ರಲ್ಲಿ ಮುಕೇಶ್ ಅಂಬಾನಿ ವೇತನ "ಶೂನ್ಯ" ಎಂದು ಸಂಸ್ಥೆ ಹೇಳಿದೆ. ಈ ಹಿಂದೆ ಮುಕೇಶ್ ಅಂಬಾನಿ ಎಷ್ಟು ವೇತನ ಪಡೆಯುತ್ತಿದ್ದರು, ಸಂಸ್ಥೆಯ ಇತರೆ ವ್ಯಕ್ತಿಗಳ ವೇತನ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಕಳೆದ ವರ್ಷವೂ ವೇತನ ಬಿಟ್ಟುಕೊಟ್ಟಿದ್ದ ಮುಕೇಶ್

ಕಳೆದ ವರ್ಷವೂ ವೇತನ ಬಿಟ್ಟುಕೊಟ್ಟಿದ್ದ ಮುಕೇಶ್

2020ರ ಜೂನ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತನ್ನ ವೇತನವನ್ನು ಸಂಸ್ಥೆಗೆ ಬಿಟ್ಟುಕೊಡುವ ನಿರ್ಧಾರವನ್ನು ಮಾಡಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೂಡಾ ತಿಳಿಸಿದ್ದರು. ಈಗ 2021-22ರ ಹಣಕಾಸು ವರ್ಷದಲ್ಲೂ ತನ್ನ ಸಂಬಳವನ್ನು ಸಂಸ್ಥೆಗೆ ಬಿಟ್ಟುಕೊಡುವ ನಿರ್ಧಾರವನ್ನು ಮುಕೇಶ್ ಅಂಬಾನಿ ಮಾಡಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮುಖ್ಯಸ್ಥ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮುಕೇಶ್ ಅಂಬಾನಿ ಈ ಎರಡು ಹಣಕಾಸು ವರ್ಷದಲ್ಲೂ ಸಂಸ್ಥೆಯಿಂದ ವೇತನ ಮಾತ್ರವಲ್ಲದೇ, ಭತ್ಯೆ, ಇನ್ನಿತರ ಸೌಲಭ್ಯ, ನಿವೃತ್ತಿ ಪ್ರಯೋಜನ, ಕಮಿಷನ್, ಸ್ಟಾಕ್‌ ಲಾಭವನ್ನು ಪಡೆದುಕೊಂಡಿಲ್ಲ.

 ಈ ಹಿಂದಿನ ವೇತನ ಎಷ್ಟಿತ್ತು?

ಈ ಹಿಂದಿನ ವೇತನ ಎಷ್ಟಿತ್ತು?

ಇನ್ನು 2008-09ರಿಂದ 15 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಹಣಕಾಸು ವರ್ಷ 2019-20ರಲ್ಲಿ ಮುಕೇಶ್ ಅಂಬಾನಿ 15 ಕೋಟಿ ಸಂಬಳವನ್ನು ಪಡೆದುಕೊಂಡಿದ್ದು, ಸತತ 11 ವರ್ಷಗಳಿಂದ ಅಷ್ಟೇ ವೇತನವನ್ನು ಪಡೆದುಕೊಂಡಿದ್ದಾರೆ. ವೇತನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯಲ್ಲಿ ಪ್ರತಿ ವರ್ಷ ವೇತನ ಹೆಚ್ಚಳ ಮಾಡಲಾಗುತ್ತದೆಯಾದರೂ ಮುಕೇಶ್ ಅಂಬಾನಿ ಮಾತ್ರ ವೇತನ ಹೆಚ್ಚಿಸಿಕೊಂಡಿಲ್ಲ. ಆದರೆ ಉಳಿದ ಭತ್ಯೆ, ಸೌಲಭ್ಯ ಸೇರಿ ಮುಕೇಶ್ ಅಂಬಾನಿ ವಾರ್ಷಿಕವಾಗಿ 24 ಕೋಟಿ ರೂಪಾಯಿ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ.

 ಮುಕೇಶ್ ಅಂಬಾನಿ ಸಂಬಂಧಿಕರಿಗೆ ಎಷ್ಟಿದೆ ವೇತನ?

ಮುಕೇಶ್ ಅಂಬಾನಿ ಸಂಬಂಧಿಕರಿಗೆ ಎಷ್ಟಿದೆ ವೇತನ?

ಮುಕೇಶ್ ಅಂಬಾನಿ ಸಂಬಂಧಿಕರಾದ ನಿಖಿಲ್ ಹಾಗೂ ಹಿತಲ್ ಮೇಸ್ವಾನಿ ವೇತನ ಕೂಡಾ ಸ್ಥಿರವಾಗಿದೆ. 24 ಕೋಟಿ ರೂಪಾಯಿ ವೇತನವಿದೆ. ಆದರೆ ಈ ವರ್ಷ ಇದಕ್ಕೆ 17.28 ಕೋಟಿ ರೂಪಾಯಿ ಕಮಿಷನ್ ಕೂಡಾ ಸೇರ್ಪಡೆಯಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕರಾದ ಪಿಎಂಎಸ್ ಪ್ರಸಾದ್ ಹಾಗೂ ಪವನ್ ಕುಮಾರ್ ಕಪಿಲ್ ಭತ್ಯೆ ಕಡಿತವಾಗಿದೆ. 2021-22ರಲ್ಲಿ ಪ್ರಸಾದ್ 11.89 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. 2020-21ರ ಸಂಪಾದನೆಯಿಂದ 11.99 ಕೋಟಿ ರೂಪಾಯಿ ಕಡಿತವಾಗಿದೆ. ಇನ್ನು ಕಪಿಲ್ ವೇತನ ಕಳೆದ ವರ್ಷ 4.24 ಕೋಟಿ ರೂಪಾಯಿ ಇದ್ದು, 2021-22ರಲ್ಲಿ 4.22 ಕೋಟಿ ರೂಪಾಯಿಗೆ ಕುಸಿದಿದೆ.

 ಅಂಬಾನಿ ಪತ್ನಿ ವೇತನ ಗೊತ್ತಾ?

ಅಂಬಾನಿ ಪತ್ನಿ ವೇತನ ಗೊತ್ತಾ?

ಕಂಪನಿಯ ಮಂಡಳಿ ಸದಸ್ಯೆಯಾದ ಅಂಬಾನಿ ಪತ್ನಿ ನೀತಾ ಅಂಬಾನಿ 5 ಲಕ್ಷ ರೂಪಾಯಿ ಹಾಗೂ ಕಮಿಷನ್ ಆಗಿ ಎರಡು ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ 8 ಲಕ್ಷ ರೂಪಾಯಿ ಹಾಗೂ 1.65 ಕೋಟಿ ರೂಪಾಯಿ ಕಮಿಷನ್ ಅನ್ನು ಪಡೆದಿದ್ದರು. ನೀತಾ ಅಂಬಾನಿಯನ್ನು ಹೊರತುಪಡಿಸಿ ಎಲ್ಲಾ ನಿರ್ವಾಹಕರು 2 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ.

English summary

Mukesh Ambani Monthly Salary Will Surprise You, he draws nil salary; Here's Details in Kannada

Billionaire Mukesh Ambani Monthly Salary Will Surprise You, ambani Draws NIL Salary for Second Consecutive Year from his firm Reliance Industries. Here's Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X