For Quick Alerts
ALLOW NOTIFICATIONS  
For Daily Alerts

ಮುತ್ತೂಟ್‌ ಫೈನಾನ್ಸ್ ಮಧ್ಯಂತರ ಲಾಭಾಂಶ ಘೋಷಣೆ: ಪ್ರತಿ ಷೇರಿಗೆ 20 ರೂಪಾಯಿ

|

ಭಾರತದ ಅತಿದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕೇತರ ಹಣಕಾಸು(ಎನ್‌ಬಿಎಫ್‌ಸಿ) ಕಂಪನಿ ಮುತ್ತೂಟ್ ಫೈನಾನ್ಸ್‌ 2021ರ ಮಧ್ಯಂತರ ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಿದೆ. ಪ್ರತಿ ಈಕ್ವಿಟಿ ಷೇರಿಗೆ 20 ರೂ. ಡಿವಿಡೆಂಡ್ ಅನ್ನು ನೀಡಲಿದ್ದು, ರೆಕಾರ್ಡ್‌ ದಿನಾಂಕ ಏಪ್ರಿಲ್ 21, 2021 ಆಗಿದೆ.

ಪ್ರತಿ ಈಕ್ವಿಟಿ ಷೇರಿಗೆ 20 ರೂ.ಗಳ ಮಧ್ಯಂತರ ಲಾಭಾಂಶವನ್ನು ಪಾವತಿಸಲು ಮುತ್ತೂಟ್ ಫೈನಾನ್ಸ್ ಆಡಳಿತ ಮಂಡಳಿ ಅನುಮೋದನೆ ನೀಡಿದ ನಂತರ, ಮುತೂಟ್ ಫೈನಾನ್ಸ್ ಇಂದು ಶೇಕಡಾ 1.19ರಷ್ಟು ಏರಿಕೆ ಕಂಡು 1,173.40 ರೂ. ತಲುಪಿದೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ, ಇದು 1.70% ನಷ್ಟು ಲಾಭಾಂಶವನ್ನು ನೀಡುತ್ತದೆ.

ಮುತ್ತೂಟ್‌ ಫೈನಾನ್ಸ್ ಮಧ್ಯಂತರ ಲಾಭಾಂಶ ಘೋಷಣೆ: 20 ರೂಪಾಯಿ

ಘೋಷಣೆಯ ದಿನಾಂಕದಿಂದ 30 ದಿನಗಳಲ್ಲಿ ಮಧ್ಯಂತರ ಲಾಭಾಂಶವನ್ನು ಷೇರುದಾರರಿಗೆ ಪಾವತಿಸಲಾಗುವುದು ಎಂದು ಕಂಪನಿಯು ನಿನ್ನೆ (ಏ. 12) ರಂದು ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ.

ಡಿಸೆಂಬರ್ 2020 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ, ವರ್ಷಾಂತ್ಯದ ಆಧಾರದ ಮೇಲೆ ಒಟ್ಟು ಆದಾಯವು 20% ನಷ್ಟು ಹೆಚ್ಚಳವಾಗಿ 2,777 ಕೋಟಿಗೆ ತಲುಪಿದೆ. ಮುತ್ತೂಟ್ ಫೈನಾನ್ಸ್ ಭಾರತದ ಅತಿದೊಡ್ಡ ಚಿನ್ನದ ಹಣಕಾಸು ಕಂಪನಿಯಾಗಿದೆ.

English summary

Muthoot Finance Announces Interim Dividend Rs 20 Per Equity Share

Muthoot Finance rose 1.19% to Rs 1,173.40 after the NBFC's board approved payment of an interim dividend of Rs 20 per equity share.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X