For Quick Alerts
ALLOW NOTIFICATIONS  
For Daily Alerts

ಅತ್ಯುತ್ತಮ ರಿಟರ್ನ್ಸ್ ನೀಡಿರುವ 3 ಬೆಸ್ಟ್ ಮಲ್ಟಿ ಕ್ಯಾಪ್ ಫಂಡ್

|

ಈಚೆಗೆ ಸೆಬಿಯಿಂದ ಹೊಸ ನಿಯಮಾವಳಿ ಘೋಷಣೆ ಆದ ಮೇಲೆ ಮಲ್ಟಿ- ಕ್ಯಾಪ್ ಸ್ಕೀಮ್ ಗಳಲ್ಲಿ ಹಣ ತೊಡಗಿಸಿದ ಹೂಡಿಕೆದಾರರು ಭಯಗೊಂಡಿದ್ದಾರೆ. ಈವರೆಗಿನ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ ಆ ರೀತಿಯ ಭಯ ಅಗತ್ಯ ಇಲ್ಲ. ಏಕೆಂದರೆ ಈ ಫಂಡ್ ನಲ್ಲಿ ಮೂಲಭೂತವಾದ ಯಾವುದೇ ಬದಲಾವಣೆ ಆಗಲಿಕ್ಕಿಲ್ಲ. ಒಂದು ವೇಳೆ ಏನಾದರೂ ಬದಲಾವಣೆಯಾದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ.

 

ಮುಖ್ಯವಾಗಿ ಮಲ್ಟಿ ಕ್ಯಾಪ್ ಸ್ಕೀಮ್ ಗಳು ಓಪನ್ ಎಂಡೆಡ್ ಸ್ಕೀಮ್ ಗಳು. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳು ಹೀಗೆ ವಿವಿಧ ಗಾತ್ರದ ಕಂಪೆನಿಗಳ ಷೇರುಗಳ ಮೇಲೆ ಈ ಫಂಡ್ ಗಳು ಹೂಡಿಕೆ ಮಾಡಿರುತ್ತವೆ. ಸೆಬಿಯ ಹೊಸ ನಿಯಮ ಬಂದ ಮೇಲೆ ಮಲ್ಟಿ- ಕ್ಯಾಮ್ ಸ್ಕೀಮ್ ಗಳು ಅವುಗಳ ಹೆಸರಿಗೆ ನಿಜವಾದ ಅರ್ಥ ಪಡೆಯುತ್ತವೆ.

ಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭ

ಇಲ್ಲಿ ಕೆಲವು ಮಲ್ಟಿ ಕ್ಯಾಪ್ ಸ್ಕೀಮ್ ಗಳನ್ನು ನೀಡಲಾಗಿದೆ. ಇವುಗಳು ಒಂದು ವರ್ಷದ ಅವಧಿಗೆ 20%ಗೂ ಹೆಚ್ಚು ರಿಟರ್ನ್ ನೀಡಿವೆ.

ಪರಾಗ್ ಪರೀಖ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

ಪರಾಗ್ ಪರೀಖ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

ಇದನ್ನು 2013ರಲ್ಲಿ ಆರಂಭಿಸಲಾಯಿತು. ಈ ಸ್ಕೀಮ್ ವಾರ್ಷಿಕ ರಿಟರ್ನ್ 23% ಇದೆ. ಐದು ವರ್ಷಗಳ ರಿಟರ್ನ್ 14% ಇದೆ. ಎಸ್ ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್) ರಿಟರ್ನ್ ಕೂಡ ತುಂಬ ಚೆನ್ನಾಗಿದೆ. ಹೂಡಿಕೆದಾರರು ಕನಿಷ್ಠ 1000 ರುಪಾಯಿಯಿಂದ ಆರಂಭಿಸಿ, ಎಸ್ ಐಪಿ ಮೂಲಕ ಹೂಡಿಕೆ ಶುರು ಮಾಡಬಹುದು. ಎಸ್ ಐಪಿ ರಿಟರ್ನ್ಸ್ ವಾರ್ಷಿಕ ಆಧಾರದಲ್ಲಿ ಐದು ವರ್ಷಕ್ಕೆ 14.61% ಇದೆ. ಅಂತರರಾಷ್ಟ್ರೀಯ ಈಕ್ವಿಟಿಯಲ್ಲಿ ತುಂಬ ಆರಂಭದಲ್ಲೇ ಹಣ ತೊಡಗಿಸಿದ ಸ್ಕೀಮ್ ಇದು. ಅವುಗಳು ಉತ್ತಮ ಪ್ರದರ್ಶನವನ್ನೂ ತೋರುತ್ತಿವೆ. ಈ ಫಂಡ್ 35% ತನಕ ಅಂತರರಾಷ್ಟ್ರೀಯ ಹೂಡಿಕೆ ಮಾಡಿದ್ದು, ಅದರಲ್ಲಿ ಅಮೆಜಾನ್, ಗೂಗಲ್, ಫೇಸ್ ಬುಕ್, ಸುಜುಕಿ ಮೋಟೋಕಾರ್ಪ್ ಎಡಿಆರ್ ಹಾಗೂ ಮೈಕ್ರೋಸಾಫ್ಟ್ ಒಳಗೊಂಡಿದೆ.

PGIM ಇಂಡಿಯಾ ಡೈವರ್ಸಿಫೈಡ್ ಈಕ್ವಿಟಿ ಫಂಡ್- ಗ್ರೋಥ್

PGIM ಇಂಡಿಯಾ ಡೈವರ್ಸಿಫೈಡ್ ಈಕ್ವಿಟಿ ಫಂಡ್- ಗ್ರೋಥ್

ಇದು CRISIL- 5 ಸ್ಟಾರ್ ರೇಟೆಡ್ ಫಂಡ್. ಒಂದು ವರ್ಷದ ವಾರ್ಷಿಕ ರಿಟರ್ನ್ 24.52% ಪಡೆದಿದೆ. ಅಂದ ಹಾಗೆ ಈ ಕ್ಯಾಟಗಿರಿಯಲ್ಲಿ ಬರುವ ಫಂಡ್ ಗಳ ಸರಾಸರಿ 6.78% ಇದೆ. ಇನ್ನು ಎಸ್ ಐಪಿ ಮೂಲಕ ಒಂದು ವರ್ಷ ರಿಟರ್ನ್ 37.9% ಇದೆ. ಎಸ್ ಐಪಿ ಮೂಲಕ ಈ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರು ಕನಿಷ್ಠ 100 ರುಪಾಯಿಯಿಂದ ಆರಂಭಿಸಬಹುದು. ಲಮ್ ಸಮ್ ಪಾವತಿ 100 ರುಪಾಯಿ ಕೂಡ ಮಾಡಬಹುದು.

ಕೆನರಾ ರೊಬೊಕೊ ಈಕ್ವಿಟಿ ಡೈವರ್ಸಿಫೈಡ್-ರೆಗ್ಯುಲರ್ ಪ್ಲಾನ್- ಗ್ರೋಥ್
 

ಕೆನರಾ ರೊಬೊಕೊ ಈಕ್ವಿಟಿ ಡೈವರ್ಸಿಫೈಡ್-ರೆಗ್ಯುಲರ್ ಪ್ಲಾನ್- ಗ್ರೋಥ್

ಇದು ಕೂಡ ಇದು CRISIL- 5 ಸ್ಟಾರ್ ರೇಟೆಡ್ ಫಂಡ್. ಈ ಫಂಡ್ ಐದು ವರ್ಷಕ್ಕೆ ಸರಾಸರಿ 10.2% ರಿಟರ್ನ್ ಮತ್ತು 1 ವರ್ಷಕ್ಕೆ 14% ರಿಟರ್ನ್ ನೀಡಿದೆ. ಎಸ್ ಐಪಿ ಮೂಲಕ ಈ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರು ತಿಂಗಳಿಗೆ ಕನಿಷ್ಠ 1000 ರುಪಾಯಿ ಹಾಕಬೇಕು. ಎಸ್ ಐಪಿ ವಾರ್ಷಿಕ ರಿಟರ್ನ್ಸ್ ವರ್ಷಕ್ಕೆ 19.5% ಇದೆ. ಈ ರಿಟರ್ನ್ ಲೆಕ್ಕಾಚಾರವನ್ನು ಮನಿಕಂಟ್ರೋಲ್ ವೆಬ್ ಸೈಟ್ ನಲ್ಲಿ ಸೆಪ್ಟೆಂಬರ್ 16, 2020ರಂದು ಪ್ರಕಟವಾದ ಮಾಹಿತಿಯಿಂದ ತೆಗೆದುಕೊಳ್ಳಲಾಗಿದೆ.

ಅಂದ ಹಾಗೆ ಇಲ್ಲಿನ ಲೇಖನವು ಕೇವಲ ಮಾಹಿತಿಯೇ ಹೊರತು ಖರೀದಿ ಮಾಡುವುದಕ್ಕೆ ಶಿಫಾರಸಲ್ಲ. ಈ ಲೇಖನದ ಆಧಾರದ ಮೇಲೆ ಖರೀದಿ ಅಥವಾ ಮಾರಾಟ ಮಾಡಿದಲ್ಲಿ ಅದಕ್ಕೆ ಗ್ರೇನಿಯಂ ಆಗಲೀ ಅಥವಾ ಲೇಖಕರಾಗಲೀ ಹೊಣೆಯಲ್ಲ. ವೃತ್ತಿಪರ ಆರ್ಥಿಕ ಸಲಹೆಗಾರರನ್ನು ಭೇಟಿಯಾಗಿ, ಅವರ ಸಲಹೆ ಮೇರೆಗೆ ಹೂಡಿಕೆ ನಿರ್ಧಾರ ಮಾಡುವುದು ಉತ್ತಮ.

English summary

Mutual Funds: 3 Best Multi Cap Funds Return Wise

Mutual funds: Here are some of the multi-cap schemes which have managed to deliver over 20% return in a 1-year time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X