For Quick Alerts
ALLOW NOTIFICATIONS  
For Daily Alerts

ಗ್ರಾಮೀಣ ಮೂಲಸೌಕರ್ಯ ಯೋಜನೆಗೆ 16,500 ಕೋಟಿ ವಿತರಿಸಿದ ನಬಾರ್ಡ್

|

ವಿವಿಧ ಗ್ರಾಮೀಣ ಮೂಲಸೌಕರ್ಯ ಯೋಜನೆಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದ 10 ತಿಂಗಳಲ್ಲಿ ಸುಮಾರು 30,200 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 16,500 ಕೋಟಿ ವಿತರಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ತಿಳಿಸಿದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್‌ಐಡಿಎಫ್) ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದೆ. ಈ ನಿಧಿಯು ಪ್ರಾರಂಭವಾದ ಬಳಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ 3.11 ಲಕ್ಷ ಕೋಟಿ ವಿತರಿಸಿದೆ.

 ಗ್ರಾಮೀಣ ಮೂಲಸೌಕರ್ಯ ಯೋಜನೆಗೆ 16,500 ಕೋಟಿ ವಿತರಿಸಿದ ನಬಾರ್ಡ್

ಇನ್ನು ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್‌ಐಡಿಎಫ್ಗೆ ನೀಡುವ ಮೊತ್ತವನ್ನು 30 ಸಾವಿರ ಕೋಟಿಯಿಂದ 40 ಸಾವಿರ ಕೋಟಿಗೆ ಏರಿಕೆ ಮಾಡಿದ್ದಾರೆ. ಅದೇ ರೀತಿಯಲ್ಲಿ ಸೂಕ್ಮ ನೀರಾವರಿ ಯೋಜನೆಗೂ ಬಂಡವಾಳವನ್ನು 5 ಸಾವಿರ ಕೋಟಿಗಳಿಂದ 10 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗಿದೆ.

English summary

NABARD Disburses Rs 16,500 Crore Under Rural Infra Fund Till Jan 31 This Fiscal

Nabard Disburses Rs 16,500 To Rural Infra Projects Till This Fiscal Year
Story first published: Saturday, February 6, 2021, 18:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X