For Quick Alerts
ALLOW NOTIFICATIONS  
For Daily Alerts

ನೆಟ್ ಫ್ಲಿಕ್ಸ್ ನಿಂದ ಮತ್ತೆ ಗುಣಮಟ್ಟದ ವಿಡಿಯೋ ಸೇವೆ ಆರಂಭ

|

ಅಮೆರಿಕ ಮೂಲದ ನೆಟ್ ಫ್ಲಿಕ್ಸ್ ಈಗ ಈ ಹಿಂದಿನ ಗುಣಮಟ್ಟದ ವಿಡಿಯೋವನ್ನು ಒದಗಿಸಲು ಆರಂಭಿಸಿದೆ. ಮಾರ್ಚ್ ನಲ್ಲಿ ಕೆಲವು ಮಾರ್ಕೆಟ್ ನಲ್ಲಿ ಪ್ರಸಾರದ ಗುಣಮಟ್ಟವನ್ನು ನೆಟ್ ಫ್ಲಿಕ್ಸ್ ಇಳಿಸಿತ್ತು. ಅದರಲ್ಲಿ ಯುರೋಪ್, ಭಾರತ ಮತ್ತು ಆಸ್ಟ್ರೇಲಿಯಾ ಕೂಡ ಇತ್ತು. ಇಂಟರ್ ನೆಟ್ ವೇಗದ ಕಾರಣಕ್ಕೆ ನೆಟ್ ಫ್ಲಿಕ್ಸ್ ಈ ತೀರ್ಮಾನ ಮಾಡಿತ್ತು.

ಇದೀಗ ಯುರೋಪ್ ನಾದ್ಯಂತ ಗ್ರಾಹಕರು 4K HDR ವಿಡಿಯೋ ಗುಣಮಟ್ಟವನ್ನು ಪಡೆಯಲಿದ್ದಾರೆ. 15 Mb/s ತನಕ ಡೇಟಾ ವರ್ಗಾವಣೆ ಆಗಲಿದೆ. ಡೆನ್ಮಾರ್ಕ್, ನಾರ್ವೆ, ಜರ್ಮನಿಯಲ್ಲೂ ಇದೇ ಅನ್ವಯ ಆಗಲಿದೆ. ಆದರೆ ಕೆಲವು ಕಡೆ ಮಾತ್ರ ನಿರ್ಬಂಧ ಕೆಲವು ಕಡೆ ಮುಂದುವರಿದಿದೆ.

ಕಳೆದ ವಾರದಿಂದ ಈಚೆಗೆ ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ಬ್ರಾಡ್ ಬ್ಯಾಂಡ್ ವೇಗ ಹೆಚ್ಚಿದೆ. ಆದರೆ ಜರ್ಮನಿಯಲ್ಲಿ ಆ ವೇಗ ಕಡಿಮೆ ಆಗಿದೆ. ಇನ್ನು ನೆಟ್ ಫ್ಲಿಕ್ಸ್ ಈ ಬಗ್ಗೆ ಸ್ಪಷ್ಟತೆ ನೀಡಿದೆ. ಐಎಸ್ ಪಿ ಜತೆ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಳಕ್ಕೆ ಪ್ರಯತ್ನಿಸುತ್ತಿರುವುದಾಗಿ FlatpanelsHDಗೆ ತಿಳಿಸಿದೆ.

ನೆಟ್ ಫ್ಲಿಕ್ಸ್ ನಿಂದ ಮತ್ತೆ ಗುಣಮಟ್ಟದ ವಿಡಿಯೋ ಸೇವೆ ಆರಂಭ

ನೆಟ್ ಫ್ಲಿಕ್ಸ್ ಮಾತನಾಡಿ, ಕಳೆದ ತಿಂಗಳೊಂದರಲ್ಲೇ ಮಾಮೂಲಿ ಸಾಮರ್ಥ್ಯದ ನಾಲ್ಕು ಪಟ್ಟು ಸೇರ್ಪಡೆ ಮಾಡಿದ್ದೇವೆ. ಪರಿಸ್ಥಿತಿ ಚೆನ್ನಾಗಿ ಆಗುತ್ತಾ ಹೋದಂತೆ ಮಿತಿಯನ್ನು ತೆಗೆಯುತ್ತೇವೆ ಎಂದು ತಿಳಿಸಿದೆ.

ಕೊರೊನಾದ ಕಾರಣಕ್ಕೆ ಹೇರಿದ್ದ ನಿರ್ಬಂಧವನ್ನು ಯುರೋಪಿಯನ್ ದೇಶಗಳಲ್ಲಿ ನಿಧಾನವಾಗಿ ತೆಗೆಯಲಾಗುತ್ತಿದೆ. ಕಳೆದ ವಾರ ಶಾಲೆ ಅಂಗಡಿಗಳು, ಶಾಲೆ ತೆರೆಯಲು ಜರ್ಮನಿಯಲ್ಲಿ ಅನುಮತಿ ನೀಡಲಾಗಿದೆ. ಇನ್ನು ಡೆನ್ಮಾರ್ಕ್ ನಲ್ಲಿ ರೀಟೇಲ್ ವಲಯ ಪುನರಾರಂಭ ಮಾಡಲಾಗಿದೆ.

English summary

Netflix Again Started Quality Video Service

American based media service Netflix again started quality video. Here is the details.
Story first published: Monday, May 18, 2020, 9:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X