For Quick Alerts
ALLOW NOTIFICATIONS  
For Daily Alerts

ನೆಟ್ ಫ್ಲಿಕ್ಸ್ ಸೈನ್ ಅಪ್ ಆಗಿ, ಡಿಸೆಂಬರ್ 5, 6 ಪುಕ್ಕಟೆ ನೋಡಿ

|

ಭಾರತೀಯರಿಗೆ ಒಟಿಟಿ ಪ್ಲಾಟ್ ಫಾರ್ಮ್ ನೆಟ್ ಫ್ಲಿಕ್ಸ್ 'ರುಚಿ' ಹತ್ತಿಸಬೇಕು ಎಂದು ನಿರ್ಧರಿಸಿದೆ. ಆ ಕಾರಣಕ್ಕೆ ಭಾರತದ ಮಾರುಕಟ್ಟೆಯಲ್ಲಿ ಎಕ್ಸ್ ಕ್ಲೂಸಿವ್ ಆಗಿ ಸದಸ್ಯರಲ್ಲದವರಿಗೂ ಎರಡು ದಿನಗಳ ಉಚಿತ ಸೇವೆ ಒದಗಿಸಲಿದೆ. ಇದು ಪ್ರಮೋಷನಲ್ ಕಾರ್ಯಕ್ರಮ ಆಗಿದೆ. ನೆಟ್ ಫ್ಲಿಕ್ಸ್ ಸದ್ಯರಾದವರಿಗೆ ಏನೆಲ್ಲ ಸೇವೆ ದೊರೆಯುತ್ತದೆ ಅವೆಲ್ಲವೂ ಸದಸ್ಯರಲ್ಲದವರೂ ಎರಡೂ ದಿನಗಳ ಕಾಲ ಅನುಭವಕ್ಕೆ ಪಡೆಯಬಹುದು.

ಡಿಸೆಂಬರ್ 5ನೇ ತಾರೀಕಿನ ರಾತ್ರಿ 12.01ಕ್ಕೆ ಆರಂಭವಾದರೆ ಡಿಸೆಂಬರ್ 6ನೇ ತಾರೀಕಿನ ರಾತ್ರಿ 11.59ರ ತನಕ ಇದು ಚಾಲ್ತಿಯಲ್ಲಿ ಇರುತ್ತದೆ. ಇಷ್ಟು ಸಮಯ ಒಂದು ತಿಂಗಳ ಉಚಿತ ಟ್ರಯಲ್ ನೀಡುತ್ತಿದ್ದ ನೆಟ್ ಫ್ಲಿಕ್ಸ್ ಅದನ್ನು ನಿಲ್ಲಿಸಿದೆ. ನೆಟ್ ಫ್ಲಿಕ್ಸ್ ಗ್ ಸೈನ್ ಅಪ್ ಆಗುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡುವ ಅಗತ್ಯ ಇಲ್ಲ.

 

ಲಾಕ್‌ಡೌನ್ ಎಫೆಕ್ಟ್: ನೆಟ್‌ಫ್ಲಿಕ್ಸ್‌ಗೆ 15 ದಶಲಕ್ಷ ಹೊಸ ಚಂದಾದಾರರು

ಯಾರು ಬೇಕಾದರೂ ಇದಕ್ಕೆ ತಮ್ಮ ಹೆಸರು, ಇಮೇಲ್ ಅಥವಾ ಫೋನ್ ನಂಬರ್ ಮತ್ತು ಪಾಸ್ ವರ್ಡ್ ಹಾಕಿ ಸೈನ್ ಅಪ್ ಆಗಬಹುದು. ಡೆಸ್ಕ್ ಟಾಪ್ ಅಥವಾ ಆಂಡ್ರಾಯಿಡ್ ಉಪಕರಣಗಳ ಮೂಲಕ ನೆಟ್ ಫ್ಲಿಕ್ಸ್ ಅಪ್ಲಿಕೇಷನ್ ಬಳಸಿಕೊಂಡು ಸಿನಿಮಾ, ವೆಬ್ ಸಿರೀಸ್, ಡಾಕ್ಯುಮೆಂಟರಿ ಮೊದಲಾದವುಗಳನ್ನು ನೋಡಬಹುದು.

ನೆಟ್ ಫ್ಲಿಕ್ಸ್ ಸೈನ್ ಅಪ್ ಆಗಿ, ಡಿಸೆಂಬರ್ 5, 6 ಪುಕ್ಕಟೆ ನೋಡಿ

ವಾರಾಂತ್ಯದಲ್ಲಿ ಎಲ್ಲರಿಗೂ ನೆಟ್ ಫ್ಲಿಕ್ಸ್ ಬಳಸುವುದಕ್ಕೆ ಉಚಿತವಾಗಿ ಅವಕಾಶ ನೀಡಿದಲ್ಲಿ ಹೊಸಬರಿಗೆ ಪರಿಚಯ ಮಾಡಿಸಿದಂತಾಗುತ್ತದೆ. ನೆಟ್ ಫ್ಲಿಕ್ಸ್ ನಲ್ಲಿ ಎಷ್ಟೆಲ್ಲ ಅದ್ಭುತ ಕಾರ್ಯಕ್ರಮಗಳಿವೆ ಎಂದು ಪರಿಚಯಿಸಿದಂತಾಗುತ್ತದೆ. ಭಾರತದಲ್ಲಿ ನೆಟ್ ಫ್ಲಿಕ್ಸ್ ಬಳಕೆದಾರರ ಸಂಖ್ಯೆ ಹೆಚ್ಚಳ ಮಾಡಿಕೊಳ್ಳಲು ಇದರಿಂದ ಸಹಾಯ ಆಗುತ್ತದೆ ಎನ್ನಲಾಗಿದೆ.

English summary

Netflix To Be Free For Everyone In India During The First Weekend Of December

OTT major Netflix to be free for everyone in Indian market on December 5th and 6th. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X