For Quick Alerts
ALLOW NOTIFICATIONS  
For Daily Alerts

ಮಡಚಿ, ಬ್ಯಾಗ್ ನಲ್ಲಿ ಇಡಬಹುದಾದ ಎಲೆಕ್ಟ್ರಿಕಲ್ ಸೈಕಲ್ ಶಿಯೋಮಿಯಿಂದ ಮಾರಾಟ

|

ಚೀನಾದ ಶಿಯೋಮಿ ಕಂಪೆನಿಯು ಎಲೆಕ್ಟ್ರಿಕಲ್ ಸೈಕಲ್ ಸೆಗ್ಮಂಟ್ ನಲ್ಲಿ ಹೊಸ ವಾಹನ ಬಿಡುಗಡೆ ಮಾಡಿದ್ದು, ಅದಕ್ಕೆ Himo H1 ಎಂಬ ಹೆಸರು ಇಟ್ಟಿದೆ. ಈಗಾಗಲೇ ಇರುವ Himo T1 ಹಾಗೂ C20ಗೆ ಇದು ಹೊಸ ಸೇರ್ಪಡೆಯಾಗಿದೆ. Himo H1 ಚಿಕ್ಕದಾಗಿದ್ದು, ಸಾಗಾಟವೂ ಸರಳವಾಗಿ ಇರುವಂಥ ಎಲೆಕ್ಟ್ರಿಕ್ ಸೈಕಲ್ ಇದಾಗಿದೆ.

 

ಶಿಯೋಮಿಯಿಂದ H1 ಹೇಗೆ ಮಾಡಲಾಗಿದೆ ಅಂದರೆ, ಸೈಕಲ್ ನ ಫ್ರೇಮ್, ಹ್ಯಾಂಡಲ್ ಬಾರ್, ಟೈರ್ಸ್ ಮತ್ತು ಸೀಟು ಮಡಚಿ ಒಂದು ಬ್ಯಾಗ್ ನಲ್ಲಿ ಹಾಕಿಕೊಳ್ಳಬಹುದು. ಹೀಗೆ ಕಂಪೆನಿಯಿಂದ ಹೇಳಲಾಗಿದೆ. ಆದರೆ 14.5 ಕೇಜಿ ತೂಕದ ಈ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಒಂದು ಬ್ಯಾಗ್ ನಲ್ಲಿ ಹಾಕಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಉಳಿಯುತ್ತದೆ.

 

75 ಕೇಜಿ ತೂಕವನ್ನು ತಡೆಯುವ ಸಾಮರ್ಥ್ಯ ಇರುವ ಈ ಸೈಕಲ್ ಅನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಇದರ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿ ಹೊರಬರಬೇಕಿದೆ. ಸದ್ಯಕ್ಕೆ ಗೊತ್ತಾಗಿರುವಂತೆ, H1 ವಾಹನದಲ್ಲಿ 108 ವ್ಯಾಟ್ ಎಲೆಕ್ಟ್ರಿಕಲ್ ಮೋಟಾರ್ ಇರುತ್ತದೆ. 7.5 Ah ಬ್ಯಾಟರಿಯು 30 ಕಿ.ಮೀ. ವ್ಯಾಪ್ತಿಯಲ್ಲಿ ಗರಿಷ್ಠ ವೇಗ ಗಂಟೆಗೆ 18 ಕಿ. ಮೀ. ಇರುತ್ತದೆ.

ಮಡಚಿ, ಬ್ಯಾಗ್ ನಲ್ಲಿ ಇಡಬಹುದಾದ ಎಲೆಕ್ಟ್ರಿಕಲ್ ಸೈಕಲ್ ಶಿಯೋಮಿಯಿಂದ

ಇನ್ನು ಬ್ಯಾಟರಿಯನ್ನು 4ರಿಂದ 6 ಗಂಟೆಯೊಳಗೆ ಚಾರ್ಜ್ ಮಾಡಬಹುದು. ಈ ವಾಹನದಲ್ಲಿ LED ಹೆಡ್ ಲೈಟ್ ಕೂಡ ಇದ್ದು, ಜತೆಗೆ ಸಣ್ಣದೊಂದು ಸ್ಪೀಡೋ ಮೀಟರ್ ಸಹ ಇದೆ. ಹಿಮೋ H1ನ ದರವು $ 425 (ರು. 30,300) ಇದೆ. ಪ್ರೀಮಿಯಂ ಸೆಗ್ಮಂಟ್ ಗೆ ಇದು ಸೇರಲಿದೆ. ಭಾರತ ಹಾಗೂ ಅಮೆರಿಕದಲ್ಲಿ ಈ ಸೈಕಲ್ ಯಾವಾಗ ಬಿಡುಗಡೆ ಎಂಬುದನ್ನು ತಿಳಿಸಿಲ್ಲ.

ಚೀನಾದ ಇ ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ಆರ್ಡರ್ ಮಾಡಿ, ಆಮದು ಮಾಡಿಕೊಳ್ಳಬಹುದು. ಹೀಗೆ ಮಾಡುವಾಗ ತೆರಿಗೆ, ಇತರ ಶುಲ್ಕಗಳೂ ಸೇರುವುದರಿಂದ ಬೆಲೆಯಲ್ಲಿ ಸ್ವಲ್ಪ ಏರಿಕೆ ಆಗಬಹುದು.

English summary

New Electrical Scooter By Xiaomi

Chinese company manufactured new electrical cycle Himo H1. Here is the complete details of the vehicle.
Story first published: Monday, December 2, 2019, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X