For Quick Alerts
ALLOW NOTIFICATIONS  
For Daily Alerts

Honda Activa H-Smart : ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ

|

ಬೆಂಗಳೂರು, ಜನವರಿ 23: ಹೊಸ ರೂಪಾಂತರ, ವಿನ್ಯಾಸ, ವಿಶಿಷ್ಟತೆಗಳೊಂದಿಗೆ ಮಾರುಕಟ್ಟೆಗೆ ಹೊಂಡಾ ಆಕ್ಟಿವಾ 6G ಕಾಲಿಟ್ಟಿದೆ. ದ್ವಿಚಕ್ರ ವಾಹನಗಳ (ಗೇರ್‌ಲೆಸ್‌/ಸ್ಕೂಟರ್) ಸಾಲಿನಲ್ಲಿ ಮುಂದಿರುವ ಈ ಹೊಂಡಾ ಕಂಪನಿ ಸೋಮವಾರ ಕೀಲೆಸ್ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವನ್ನು ಬಿಡುಗಡೆ ಮಾಡಿದೆ.

 

ಈ ಹೊಂಡಾ ಆಕ್ಟಿವಾ 6G ಸರುಕ್ಷತಾ ವೈಶಿಷ್ಟ್ಯಗಳು ಏನು?, ಇದರ ಬೆಲೆ, ವಿನ್ಯಾಸ, ಕಾರ್ಯ ನಿರ್ವಹಣೆ, ಮಾದರಿಗಳು ಹಾಗೂ ಕಿಲೆಸ್‌ ಸ್ಟಾರ್ಟ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

 

Anant Ambani Engagement : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ, ಇಬ್ಬರ ಬಗ್ಗೆ ಮಾಹಿತಿ ಇಲ್ಲಿದೆAnant Ambani Engagement : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ, ಇಬ್ಬರ ಬಗ್ಗೆ ಮಾಹಿತಿ ಇಲ್ಲಿದೆ

ಹೊಸ ಬದಲಾವಣೆಯೊಂದಿಗೆ ಹೊಂಡಾ ಕಂಪನಿ ಆಕರ್ಷಕ ರೂಪಾಂತರದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಸ್ಕೂಟರ್ ಬಿಡುಗಡೆ ಮಾಡಿದೆ. 110 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 6G ಆರಂಭಿಕ ಬೆಲೆ 74,536 ರೂಪಾಯಿ ಆಗಿದೆ. ಈವರೆಗಿನ ಆಕ್ಟಿವಾ ಸಾಲಿನಲ್ಲಿ ಸ್ಟ್ಯಾಂಡರ್ಡ್ ಮತ್ತು ಡೀಲಕ್ಸ್ ರೂಪಾಂತರಗಳಲ್ಲಿ ಪಟ್ಟಿಯಲ್ಲಿ ಇದು ಅಗ್ರಸ್ತಾನದಲ್ಲಿದೆ. ಇದರಲ್ಲಿಯೇ ಒಟ್ಟು ಮೂರು ಮಾದರಿ (ವೇರಿಯಂಟ್)ಗಳು ಲಭ್ಯವಿವೆ.

ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿ ಬಿಡುಗಡೆ

ಕಾರುಗಳಲ್ಲಿ ಕಂಡು ಬರುವಂತೆ ಈ ಹೊಂಡಾ ಆಕ್ಟಿವಾ 6G ಒಂದು ಮಾದರಿಯಲ್ಲಿ ವಾಹನದಲ್ಲಿ ಸ್ಮಾರ್ಟ್ ಕೀ ವೈಶಿಷ್ಟ್ಯವಿದೆ. ಈ ಮೊದಲಿನ ವೇರಿಯಂಟ್‌ಗಳಲ್ಲಿ ನಾವೇ ಕೈಯಾರೇ ಕೀ ಬಳಸಿ ವಾಹನ ಸ್ಟಾರ್ಟ್ ಮಾಡುತ್ತಿದ್ದೇವು. ಆದರೆ ಇಲ್ಲಿ ಭೌತಿಕ ಕೀ ಸ್ಟಾರ್ಟ್ ಬದಲಿಗೆ ನಾಬ್ ಇಗ್ನಿಷನ್ ಅನ್ನು ಅಳವಡಿಸಲಾಗಿದೆ. ಇದರಿಂದ ಕೀ ಇಲ್ಲದೇ ಸ್ಕೂಟರ್ ಸ್ಟಾರ್ಟ್‌ ಆಗುತ್ತದೆ. ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್-ರಿಯರ್ ಸ್ಪ್ರಿಂಗ್ ಮತ್ತು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ ವ್ಯವಸ್ಥೆ ಇದೆ. ಒಂದು ವೇಳೆ ಸ್ಕೂಟರ್‌ ಕಳ್ಳತನವಾದರೆ ವಾಹನದ ಸ್ಥಳ ಪತ್ತೆಗೆ ಲೊಕೆಟಿಂಗ್ ತಂತ್ರಜ್ಞಾನ ವ್ಯವಸ್ಥೆ ಇದರಲ್ಲಿದೆ.

ಮೂರು ಮಾದರಿ ಆಕ್ಟಿವಾ 6G ಬೆಲೆ ವಿವರ

ಒಟ್ಟು 7.84 HP (ಹಾರ್ಸ್ ಪವರ್) ಹೊಂದಿದೆ, 8.90nm ಟಾರ್ಕ್‌ ಉತ್ಪಾದಿತ ಸಾಮರ್ಥ್ಯ ಹೊಂದಿದೆ. ಸ್ಕೂಟರ್‌ಗೆ ಮೂರು ಹಂತದಲ್ಲಿ ಹೊಂದಿಕೊಳ್ಳುವಂತಹ (ಅಡ್ಜಸ್ಟೇಬಲ್) ಸಸ್ಪೆನ್ಷನ್ ನೀಡಲಾಗಿದೆ. ಇನ್ನೂ ಮೂರು ಮಾದರಿಯ ಎಕ್ಸ್‌ಶೋರೂಂ ಬೆಲೆಗಳನ್ನು ನೋಡುವುದಾದರೆ ಸ್ಟಾಂಡರ್ಡ್‌ ಮಾದರಿ ಸ್ಕೂಟರ್ - 74,536 ರೂ., ಡಿಲಕ್ಸ್ ಮಾದರಿ 77,036 ರೂ. ಹಾಗೂ ಸ್ಮಾರ್ಟ್‌ ಕೀ ಫೀಚರ್‌ ಮಾದರಿಯ ಬೆಲೆ 80,537 ರೂಪಾಯಿ ಕಂಪನಿ ನಿಗದಿ ಮಾಡಿದೆ.

ಜನವರಿ 2023 ಹೊಸವರ್ಷದ ಆರಂಭದಲ್ಲಿದ್ದೇವೆ. ಕಂಪನಿಯು ಈ ವಾಹನದೊಂದಿಗೆ ಸುರಕ್ಷತೆ, ಅನುಕೂಲತೆಯ ಭರವಸೆ ನೀಡಿದೆ. ಗೇರ್‌ಲೆಸ್‌ ದ್ವಿಚಕ್ರ ವಾಹನ ಆಯ್ಕೆಮಾಡುವರಿಗೆ ಇದೊಂದು ಉತ್ತಮ ವಾಹನ ಎನ್ನಬಹುದು. ಸವಾರರಿಗೆ ಇಷ್ಟವಾಗುವಂತೆ, ಇಷ್ಟದ ಬಣ್ಣಗಳಲ್ಲಿ ಸಿದ್ಧಗೊಂಡಿದೆ. ಆಕ್ಟಿವಾ ವಿಶ್ವಾಸಾರ್ಹ ಕಾರ್ಯಕ್ಷಮತೆ ಆಧಾರದಲ್ಲಿ ಮಾರುಕಟ್ಟೆ ಪ್ರವೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

English summary

New Honda Activa H-Smart variant launched in India; Know Features, Specifications and Price

New Honda Activa H-Smart variant launched in India; Know Features, Specifications and Price
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X