For Quick Alerts
ALLOW NOTIFICATIONS  
For Daily Alerts

ಹೊಸ ವಿಮಾ ನಿಯಮ: ಜನವರಿ 1ರಿಂದ ಕೆವೈಸಿ ಕಡ್ಡಾಯ

|

ಭಾರತದ ವಿಮಾ ನಿಯಂತ್ರಣ ಸಂಸ್ಥೆ ಐಆರ್‌ಡಿಎಐ ಜನವರಿ ಒಂದರಿಂದ ಜಾರಿಗೆ ಬರುವಂತೆ ವಿಮೆಯ ಹೊಸ ನಿಯಮವನ್ನು ಜಾರಿ ಮಾಡಿದೆ. ಜನವರಿ 1, 2023ರಿಂದ ಆರೋಗ್ಯ, ಮೋಟರು, ಟ್ರಾವೆಲ್ ಹಾಗೂ ಗೃಹ ವಿಮೆ ಕಡ್ಡಾಯವಾಗಿದೆ.

ಈ ವಿಮೆಯು ಎಲ್ಲ ವಿಧದ ವಿಮೆಗೆ ಅನ್ವಯವಾಗುತ್ತದೆ. ಜೀವ, ಸಾಮಾನ್ಯ ಹಾಗೂ ಆರೋಗ್ಯ ವಿಮೆಗೆ ಮುಂದಿನ ವರ್ಷದಿಂದ ಕೆವೈಸಿ ಕಡ್ಡಾಯವಾಗಿದೆ. ಒಂದು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಆರೋಗ್ಯ ವಿಮೆ ಕ್ಲೈಮ್ ಮಾಡುವಾಗ ಮಾತ್ರ ಕೆವೈಸಿ ಅಗತ್ಯವಾಗಿದೆ. ಹಾಗೆಯೇ ಹೊಸ ನಿಯಮದ ಪ್ರಕಾರ ವಿಮೆಯನ್ನು ಆರಂಭ ಮಾಡುವಾಗಲೇ ಕೆವೈಸಿ ಮಾಡಬೇಕಾಗಿದೆ.

ಇನ್ಷೂರೆನ್ಸ್ ಕ್ಲೇಮ್ ಆಗುತ್ತಿಲ್ಲವಾ? ಎಲ್ಲಿ ದೂರು ಸಲ್ಲಿಸಬಹುದು?ಇನ್ಷೂರೆನ್ಸ್ ಕ್ಲೇಮ್ ಆಗುತ್ತಿಲ್ಲವಾ? ಎಲ್ಲಿ ದೂರು ಸಲ್ಲಿಸಬಹುದು?

ಪ್ರಸ್ತುತ ಪಾಲಿಸಿದಾರರಿಗೆ ನಿಗದಿತ ಸಮಯದ ಒಳಗೆ ಕೆವೈಸಿ ಮಾಡಿಸುವಂತೆ ಐಆರ್‌ಡಿಎಐ ವಿಮಾ ಸಂಸ್ಥೆಗೆ ತಿಳಿಸಿದೆ. ವಿಮಾ ಸಂಸ್ಥೆಗಳು ಎಸ್‌ಎಂಎಸ್ ಮೂಲಕ ಅಥವಾ ಇಮೇಲ್ ಮೂಲಕ ವಿಮಾದಾರರಿಗೆ ಈ ಬಗ್ಗೆ ಮಾಹಿತಿ ನೀಡಲಿದೆ. ಹಾಗೆಯೇ ಕೆವೈಸಿ ಸಬ್‌ಮಿಟ್ ಮಾಡುವಂತೆ, ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದೆ.

 ಹೊಸ ವಿಮಾ ನಿಯಮ: ಜನವರಿ 1ರಿಂದ ಕೆವೈಸಿ ಕಡ್ಡಾಯ

ಯಾವೆಲ್ಲ ದಾಖಲೆ ಬೇಕಾಗುತ್ತದೆ?

ಪ್ರಸ್ತುತ ಪಾಲಿಸಿ ಹೊಂದಿರುವವರು ಕೆವೈಸಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. 2023ರ ಜನವರಿ 1ರ ಬಳಿಕ ಪಾಲಿಸಿಯನ್ನು ರಿನಿವಲ್ ಮಾಡುವುದಾದರೆ ಕೆವೈಸಿ ಕಡ್ಡಾಯವಾಗಿದೆ. ಕೆವೈಸಿ ಮಾಡಿಸಿಕೊಳ್ಳಲು ಪಾಲಿಸಿದಾರರು ತಮ್ಮ ಛಾಯಾಚಿತ್ರ, ವಿಳಾಸ ಪುರಾವೆಯನ್ನು ನೀಡಬೇಕಾಗುತ್ತದೆ. ಕೆವೈಸಿ ದಾಖಲೆಯಾಗಿ ಛಾಯಾಚಿತ್ರ, ವಿಳಾಸ ಪುರಾವೆಯಾಗಿ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬಿಲ್‌ಗಳನ್ನು ನೀಡಬೇಕಾಗಬಹುದು. ಪ್ರಸ್ತುತ ಪಾಲಿಸಿದಾರರು ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಅನ್ನು ನೀಡಿದರೆ ಸಾಕಾಗುತ್ತದೆ. ಅದು ಕೂಡಾ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಪಾಲಿಸಿ ಖರೀದಿ ಮಾಡುವುದಾದರೆ ಮಾತ್ರ.

ವಾಹನದ ಇನ್ಷೂರೆನ್ಸ್ ಕ್ಲೈಮ್ ಮಾಡಲು ಪಿಯುಸಿ ಸರ್ಟಿಫಿಕೇಟ್ ಬೇಕಾ?ವಾಹನದ ಇನ್ಷೂರೆನ್ಸ್ ಕ್ಲೈಮ್ ಮಾಡಲು ಪಿಯುಸಿ ಸರ್ಟಿಫಿಕೇಟ್ ಬೇಕಾ?

ಕ್ಲೈಮ್ ಸರಳವಾಗಲಿದೆ

ಈ ಹೊಸ ನಿಮಯದಿಂದಾಗಿ ಕ್ಲೈಮ್ ಮಾಡುವ ವಿಧಾನ ಅತೀ ಸುಲಭವಾಗುವ ಸಾಧ್ಯತೆಯಿದೆ. ಪಾಲಿಸಿದಾರರ ಕೆವೈಸಿ ಮೂಲಕ ಸಂಪೂರ್ಣ ಮಾಹಿತಿ ಇರುವ ಕಾರಣದಿಂದಾಗಿ ಕ್ಲೈಮ್ ಸರಳ ಹಾಗೂ ಸುಲಭವಾಗಲಿದೆ. ಹಾಗೆಯೇ ಕ್ಲೈಮ್‌ ವೇಳೆ ನಡೆಯುವ ವಂಚನೆಯನ್ನು ತಪ್ಪಿಸಲು ಸಾಧ್ಯವಾಗಲಿದೆ. ವಿಮೆಯಲ್ಲಿ ಇರುವ ಎಲ್ಲಾ ನಾಮಿನಿಗಳ ಬಗ್ಗೆ ಮಾಹಿತಿಯೂ ಕೂಡಾ ಲಭ್ಯವಾಗಲಿದೆ.

ಪ್ರಸ್ತುತ ಪಾಲಿಸಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕೆವೈಸಿ ಮಾಡಿಸುವುದು ಪಾಲಿಸಿದಾರರ ಆಯ್ಕೆಯಾಗಿದೆ. ಆದರೆ ಹೊಸ ನಿಯಮದ ಪ್ರಕಾರ ಕೆವೈಸಿ ಕಡ್ಡಾಯವಾಗಿದೆ. ಮುಖ್ಯವಾಗಿ ಹೊಸ ಪಾಲಿಸಿಯನ್ನು ಖರೀದಿ ಮಾಡುವವರು ಕೆವೈಸಿ ಮಾಡಿಸಿದರೆ ಮಾತ್ರ ಪಾಲಿಸಿ ಖರೀದಿ ಸಾಧ್ಯವಾಗಲಿದೆ. ಇದಕ್ಕೆ ಯಾವುದೇ ಪ್ರೀಮಿಯಂ ಮೊತ್ತದ ಅಡತಡೆಗಳು ಇಲ್ಲ. ಎಲ್ಲ ಪಾಲಿಸಿದಾರರು ಕೆವೈಸಿ ಮಾಡಿಸಿಕೊಳ್ಳಲೇಬೇಕು.

ಈವರೆಗೆ ಕೆವೈಸಿ ಮಾಡಿಸಿಕೊಳ್ಳದ ಪಾಲಿಸಿದಾರರು ತಮ್ಮ ವಿಮಾ ಸಂಸ್ಥೆಯನ್ನು ಸಂಪರ್ಕಿಸಿ ಶೀರ್ಘ್ರವೇ ಕೆವೈಸಿ ಮಾಡಿಸಿಕೊಳ್ಳಬೇಕಾಗಿದೆ. ಕೆವೈಸಿಯನ್ನು ಮಾಡದಿದ್ದರೆ ಪಾಲಿಸಿ ರಿನಿವಲ್ ಮಾಡಲು ಅಥವಾ ಖರೀದಿ ಮಾಡಲು ಸಾಧ್ಯವಾಗದು.

English summary

New insurance rules: IRDAI makes KYC mandatory from January 1

India's Insurance Regulatory and Development Authority of India (IRDAI) has announced that Know Your Customer (KYC) documents will be mandatory for all new health, motor, travel, and home insurance policies purchased from 1 January 2023.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X