For Quick Alerts
ALLOW NOTIFICATIONS  
For Daily Alerts

ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭ

|

ನವದೆಹಲಿ: ಕಳೆದ 80 ದಿನಗಳಿಂದ ಕೋವಿಡ್ ಹಾವಳಿಯಿಂದಾಗಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಸ್ಥಗೀತಗೊಂಡಿದೆ. ಹಲವರಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಯಾವಾಗ ಹಾರಾಟ ಆರಂಭಿಸುತ್ತವೆ ಎಂಬ ಬಗ್ಗೆ ಗೊಂದಲಗಳು ಇವೆ.

ಸದ್ಯ ಈ ಗೊಂದಲಗಳಿಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ ಸಿಂಗ್ ಪುರಿ ಅವರು ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸುವುದಾಗಿ ಅವರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 85,419 ಕೋಟಿ ನಷ್ಟವಾಗಲಿದೆ:IATAಲಾಕ್‌ಡೌನ್‌ನಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 85,419 ಕೋಟಿ ನಷ್ಟವಾಗಲಿದೆ:IATA

ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಮುಂದಿನ ತಿಂಗಳು ನಿರ್ಧಾರ ತೆಗೆದುಕೊಳ್ಳಲಾಗುವುದು. ಭಾಗಶಃ ವಿಮಾನಯಾನ ಸೇವೆಯಾದರೂ ಆರಂಭವಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ. ಆದರೆ ವಿಮಾನಯಾನ ಸೇವೆ ಆರಂಭವಾಗುವ ನಿಶ್ಚಿತ ದಿನವನ್ನು ಈಗಲೇ ಹೇಳಲು ಆಗವುದಿಲ್ಲ ಎಂದೂ ಸಹ ಅವರು ಹೇಳಿದ್ದಾರೆ.

ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭ

ಕೋವಿಡ್ ಹಾವಳಿಯಿಂದಾಗಿ ಕಳೆದ ಮಾರ್ಚ್ 23 ರಿಂದಲೇ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಂತ ಹಂತವಾಗಿ ಲಾಕ್‌ಡೌನ್ ತೆರದಿದ್ದರೂ, ಅಂತಾರಾಷ್ಟ್ರೀಯ ವಿಮಾನಯಾನದ ಆರಂಭವಾಗುವ ಸ್ಪಷ್ಟ ಸೂಚನೆಗಳು ಇನ್ನೂ ಸಿಗುತ್ತಿಲ್ಲ. ಇದರಿಂದ ವೈಮಾನಿಕ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

English summary

India may resume international flight operations next month

Next Month Will Resume International Flight Service Says Aviation Minister Hardeep Singh Puri.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X