For Quick Alerts
ALLOW NOTIFICATIONS  
For Daily Alerts

14,300 ಪಾಯಿಂಟ್ ಗಡಿ ದಾಟಿ ನಿಫ್ಟಿ 50 ಹೊಸ ದಾಖಲೆ; ಮಾರುತಿ ಭಾರೀ ಜಿಗಿತ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ 50 ಶುಕ್ರವಾರ (ಜನವರಿ 8, 2021) ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 14,300 ಪಾಯಿಂಟ್ ದಾಟಿದೆ. ಈ ಸುದ್ದಿ ಮಾಡುವ ಹೊತ್ತಿಗೆ ನಿಫ್ಟಿ 50 ಸೂಚ್ಯಂಕವು 156.35 ಪಾಯಿಂಟ್ ಗಳ ಏರಿಕೆ ಕಂಡು, 14,293.70 ಪಾಯಿಂಟ್ ನೊಂದಿಗೆ ವಹಿವಾಟು ನಡೆಸುತ್ತಿತ್ತು. ಸೆನ್ಸೆಕ್ಸ್ 483.29 ಪಾಯಿಂಟ್ ಹೆಚ್ಚಳವಾಗಿ 48,576.61 ಪಾಯಿಂಟ್ ನೊಂದಿಗೆ ವಹಿವಾಟಾಗುತ್ತಿತ್ತು.

9,997.5 ಕೋಟಿ ರುಪಾಯಿ ಮೌಲ್ಯದ ಟಿಸಿಎಸ್ ಷೇರು ಮಾರಿದ ಟಾಟಾ ಸನ್ಸ್9,997.5 ಕೋಟಿ ರುಪಾಯಿ ಮೌಲ್ಯದ ಟಿಸಿಎಸ್ ಷೇರು ಮಾರಿದ ಟಾಟಾ ಸನ್ಸ್

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಪ್ರಭಾವ ಭಾರತದ ಮೇಲೂ ಆಗಿದೆ. ಬಿಎಸ್ ಇ ಸೂಚ್ಯಂಕದಲ್ಲಿ ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತಿತರ ಕಂಪೆನಿಯ ಷೇರುಗಳು ಏರಿಕೆ ಕಂಡವು. ಅಕ್ಟೋಬರ್ ನಿಂದ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಬರಬೇಕಿರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಟಿಸಿಎಸ್ ಷೇರು ಉತ್ತಮವಾದ ಏರಿಕೆ ಕಂಡಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಮಾರುತಿ ಸುಜುಕಿ

ವಿಪ್ರೊ

ಟೆಕ್ ಮಹೀಂದ್ರಾ

ಯುಪಿಎಲ್

ಐಷರ್ ಮೋಟಾರ್ಸ್

14,300 ಪಾಯಿಂಟ್ ಗಡಿ ದಾಟಿ ನಿಫ್ಟಿ 50 ದಾಖಲೆ; ಮಾರುತಿ ಭಾರೀ ಜಿಗಿತ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಹಿಂಡಾಲ್ಕೋ

ಎಚ್ ಡಿಎಫ್ ಸಿ

ಟಾಟಾ ಸ್ಟೀಲ್

ಗೇಲ್

ಭಾರ್ತಿ ಏರ್ ಟೆಲ್

English summary

Nifty 50 Index Crossed 14300 Point Mark; Maruti Suzuki Top Gainer

Indian stock market index nifty 50 crossed 14,300 point mark and Maruti Suzuki top gainer on January 8, 2021.
Story first published: Friday, January 8, 2021, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X