For Quick Alerts
ALLOW NOTIFICATIONS  
For Daily Alerts

2020ರಲ್ಲಿ ನಿಫ್ಟಿ 15% ಏರಿಕೆ: 2017ರ ನಂತರ ಅತ್ಯುತ್ತಮ ವಾರ್ಷಿಕ ರಿಟರ್ನ್

|

2020ನೇ ಇಸವಿಯ ಕೊನೆ ದಿನ ಡಿಸೆಂಬರ್ 31ನೇ ತಾರೀಕು, ಗುರುವಾರ ಭಾರತದ ಷೇರು ಮಾರುಕಟ್ಟೆ ಹೊಸ ದಾಖಲೆಯನ್ನು ಬರೆಯಿತು. ಏಷ್ಯಾದ ಇತರ ಕೆಲವು ಮಾರುಕಟ್ಟೆಯಲ್ಲಿ ರಜಾ ದಿನವಾದ್ದರಿಂದ ವಹಿವಾಟು ಪ್ರಮಾಣ ಕಡಿಮೆ ಇತ್ತು. ಬಿಎಸ್ ಇ ಸೆನ್ಸೆಕ್ಸ್ 5.11 ಪಾಯಿಂಟ್ ಏರಿಕೆ ಕಂಡು, 47,751.33 ಪಾಯಿಂಟ್ ನೊಂದಿಗೆ ಈ ವರ್ಷದ ವ್ಯವಹಾರ ಮುಗಿಸಿದರೆ, ನಿಫ್ಟಿ 0.20 ಪಾಯಿಂಟ್ ಇಳಿಕೆ ಕಂಡು 13,981.80 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿತು.

ಇಂದಿನ ವಹಿವಾಟಿನ ಪ್ರಮುಖಾಂಶಗಳ ವಿವರ ಹೀಗಿದೆ:
* ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 47,896.97 ಪಾಯಿಂಟ್ ಹಾಗೂ ನಿಫ್ಟಿ 14,024.85 ಪಾಯಿಂಟ್ ಮುಟ್ಟಿತ್ತು.

* ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವೀಸಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಷೇರುಗಳು ಮಾರುಕಟ್ಟೆಯನ್ನು ಬೆಂಬಲಿಸಿದರೆ, ಐ.ಟಿ. ಮತ್ತು ಲೋಹದ ಷೇರುಗಳ ನಷ್ಟವನ್ನು ಏರಿಕೆಗೆ ತಡೆಯೊಡ್ಡಿತು.

* ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಡಾ ರೆಡ್ಡೀಸ್, ಟಾಟಾ ಮೋಟಾರ್ಸ್ ಮತ್ತು ಅದಾನಿ ಪೋರ್ಟ್ಸ್ 0.48%ನಿಂದ 1.51 ಪರ್ಸೆಂಟ್ ಏರಿಕೆ ಕಂಡವು.

2020ರಲ್ಲಿ ನಿಫ್ಟಿ 15% ಏರಿಕೆ: 2017ರ ನಂತರ ಉತ್ತಮ ವಾರ್ಷಿಕ ರಿಟರ್ನ್

* ಶ್ರೀ ಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್, ಗೇಲ್, ಯುಪಿಎಲ್ ಮತ್ತು ಗ್ರಾಸಿಮ್ ಷೇರುಗಳು 0.83- 1.63 ಪರ್ಸೆಂಟ್ ಇಳಿಕೆ ಕಂಡವು.

2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ 2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ "ಚಿಲ್ಲರೆ" ಷೇರುಗಳು

* 2020ರಲ್ಲಿ ನಿಫ್ಟಿ 15% ಏರಿಕೆ ಕಂಡಿದೆ. 2017ರ ನಂತರದ ಅತ್ಯುತ್ತಮ ವಾರ್ಷಿಕ ರಿಟರ್ನ್ ಇದಾಗಿದೆ.

English summary

Nifty Gains 15 Percent In 2020; Best Gain After 2017

Sensex and nifty record high on December 31, 2020. Nifty ends with 15% gain on 2020, which is previous higher than 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X