For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿಗೆ ಸೇರಿದ ಕೋಟಿ ಕೋಟಿ ರುಪಾಯಿಯ ಪೇಂಟಿಂಗ್ ಹರಾಜು

|

ದೇಶ ಬಿಟ್ಟು ಪರಾರಿ ಆಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ರೋಲ್ಸ್ ರಾಯ್ಸ್ ಕಾರು, ಎಂ.ಎಫ್. ಹುಸೇನ್ ಮತ್ತು ಅಮೃತಾ ಷೇರ್- ಗಿಲ್ ಅವರ ಕಲಾಕೃತಿಗಳು, ಡಿಸೈನರ್ ಹ್ಯಾಂಡ್ ಬ್ಯಾಗ್ ಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಗುರುವಾರ ಎರಡನೇ ಬಾರಿಗೆ ಹರಾಜು ಹಾಕಿದಾಗ 51 ಕೋಟಿ ರುಪಾಯಿ ಸಂಗ್ರಹ ಆಗಿದೆ.

 

40 ವಸ್ತುಗಳನ್ನು ಗುರುವಾರ ಹರಾಜು ಹಾಕಲಾಯಿತು. ಜಾರಿ ನಿರ್ದೇಶನಾಲಯವು (ಇ.ಡಿ.) ವಶಪಡಿಸಿಕೊಂಡಿದ್ದ ಆಸ್ತಿಗಳೆಲ್ಲವನ್ನೂ ಆ ಮೂಲಕ ಪೂರ್ತಿಯಾಗಿ ಹರಾಜು ಹಾಕಿದಂತಾಯಿತು. ಇ.ಡಿ. ಡೆಪ್ಯೂಟಿ ನಿರ್ದೇಶಕರ ಪರವಾಗಿ ಸ್ಯಾಫ್ರೋನೆಟ್ ನಿಂದ ಹರಾಜು ಆಯೋಜಿಸಲಾಗಿತ್ತು. ಈ ಮಾರಾಟದಿಂದ 40 ಕೋಟಿ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇತ್ತು.

 

ನೀರವ್ ಮೋದಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಣೆನೀರವ್ ಮೋದಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಣೆ

ಮಾರ್ಚ್ 3ರಿಂದ 5ನೇ ತಾರೀಕಿನ ಮಧ್ಯೆ ನೀರವ್ ಮೋದಿಗೆ ಸೇರಿದ 112 ಆಸ್ತಿಗಳನ್ನು ನೇರ ಹಾಗೂ ಆನ್ ಲೈನ್ ಹರಾಜು ಹಾಕಲಾಗಿತ್ತು. 3-4ನೇ ತಾರೀಕು ನಡೆದ ಹರಾಜಿನಲ್ಲಿ 2.04 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಆಗ 52 ಲಕ್ಷ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇತ್ತು. ಗುರುವಾರದ ಹರಾಜಿನಲ್ಲಿ 51.41 ಕೋಟಿ ಸಂಗ್ರಹ ಆಗಿತ್ತು.

ನೀರವ್ ಮೋದಿಗೆ ಸೇರಿದ ಕೋಟಿ ಕೋಟಿ ರುಪಾಯಿಯ ಪೇಂಟಿಂಗ್ ಹರಾಜು

ನೀರವ್ ಮೋದಿ ವಿವಿಧ ಬ್ಯಾಂಕ್ ಗಳಿಗೆ ಸಾಲ ಬಾಕಿ ಇದ್ದು, ಈಗ ಹರಾಜಿನಲ್ಲಿ ವಸೂಲಿ ಆದ ಹಣವನ್ನು ಆ ಬಾಕಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಈ ಎರಡೂ ಹರಾಜಿನ ಮೂಲಕ 53.45 ಕೋಟಿ ರುಪಾಯಿಯನ್ನು ಜಾರಿ ನಿರ್ದೇಶನಾಲಯವು ಪಡೆಯುತ್ತದೆ.

ಎಂ. ಎಫ್. ಹುಸೇನ್ ಅವರ "ಬ್ಯಾಟಲ್ ಆಫ್ ಗಂಗಾ ಅಂಡ್ ಜಮುನಾ- ಮಹಾಭಾರತ 12" ಕಲಾಕೃತಿಯು 12 ಕೋಟಿ ರುಪಾಯಿಯ ದಾಖಲೆ ಮೊತ್ತಕ್ಕೆ ಖರೀದಿ ಆಗಿದೆ. ಇದು ಎಂ.ಎಫ್. ಹುಸೇನ್ ಅವರ ಕಲಾಕೃತಿಗಳ ಪೈಕಿಯೇ ದೊರೆತಿರುವ ಅತಿ ದೊಡ್ಡ ಮೊತ್ತ.

ಇನ್ನು ಅಮೃತಾ ಷೇರ್- ಗಿಲ್ ಅವರ "ಬಾಯ್ಸ್ ವಿಥ್ ಲೆಮನ್ಸ್" ಮೊದಲ ಬಾರಿಗೆ ಹರಾಜಾಗಿದ್ದು, 15.7 ಕೋಟಿ ರುಪಾಯಿಗೆ ಮಾರಾಟ ಆಗಿದೆ. ವಿ.ಎಸ್.ಗಾಯ್ ತೊಂಡೆ ಕಲಾಕೃತಿ 9.52 ಕೋಟಿ ಮತ್ತು ಬಾವಾ ಅವರ ಕಲಾಕೃತಿ 6.16 ಕೋಟಿಗೆ ಮಾರಾಟ ಆಗಿದೆ.

ಇನ್ನು ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆಯಾದ 1.68 ಕೋಟು ರುಪಾಯಿಗೆ ಖರೀದಿಯಾಗಿದೆ.

English summary

Nirav Modi's Assets Fetched 51 Crore In Auction

Fugitive diamond businessman Nirav Modi's assets fetched 51 crore in auction. Here is the complete details.
Story first published: Friday, March 6, 2020, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X