For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ

|

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್ ಸಿಎಲ್ ಕಾರ್ಪೊರೇಷನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಷನಿ ನಾಡಾರ್ ಮಲ್ಹೋತ್ರಾ ಹಾಗೂ ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಸ್ಥಾನ ಪಡೆದಿದ್ದಾರೆ. ಈ ಮೂವರು ಕಳೆದ ವರ್ಷದ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.

 

ಫೋರ್ಬ್ಸ್ 2020ರ ಪಟ್ಟಿಯ ಅಗ್ರಸ್ಥಾನದಲ್ಲಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದಾರೆ. ಆ ನಂತರದ ಸ್ಥಾನಗಳಲ್ಲಿ ಯುರೋಪಿಯರ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿನ್ ಲಗಾರ್ಡೆ, ಯುಎಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಇದ್ದಾರೆ. ಇದೇ ಮೊದಲ ಬಾರಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

 

2006ರಿಂದ ನಂಬರ್ ಒನ್ ಸ್ಥಾನದಲ್ಲಿ ಇರುವ ಮರ್ಕೆಲ್, 2010ರಲ್ಲಿ ಮಾತ್ರ ಅಮೆರಿಕದ ಆಗಿನ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಗೆ ಅಗ್ರ ಸ್ಥಾನ ಬಿಟ್ಟುಕೊಟ್ಟಿದ್ದರು. ಇನ್ನು ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಏಳನೇ ಸ್ಥಾನದಲ್ಲಿ ಇದ್ದವರು ಈ ಬಾರಿ 41ಕ್ಕೆ, ರೋಷನಿ 55ಕ್ಕೆ, ಕಿರಣ್ 68ಕ್ಕೆ ಕುಸಿದಿದ್ದಾರೆ.

ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ

ಭಾರತದಲ್ಲಿ ಈ ಹಿಂದೆ ಹಣಕಾಸು ಖಾತೆಯನ್ನು ಇಂದಿರಾ ಗಾಂಧಿ ನಿರ್ವಹಿಸಿದ್ದರು. ಆದರೆ ಪೂರ್ಣಾವಧಿಗೆ ಆ ಖಾತೆಯನ್ನು ನಿರ್ವಹಣೆ ಮಾಡುತ್ತಿರುವ ಮೊದಲ ಮಹಿಳೆ ನಿರ್ಮಲಾ ಎನಿಸಿಕೊಂಡಿದ್ದಾರೆ. ಈ ಹಿಂದೆ ಅವರು ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು. ಈ ಪಟ್ಟಿಯಲ್ಲಿ ಮೆಲಿಂಡಾ ಗೇಟ್ಸ್, ನ್ಯಾನ್ಸಿ ಪೆಲೊಸಿ, ಶೆರಿಲ್ ಸ್ಯಾಂಡ್ ಬರ್ಗ್, ಶೇಖ್ ಹಸೀನಾ, ರಾಣಿ ಎಲಿಜಬೆತ್ II, ರಿಹಾನ್ಸಾ, ಬಿಯಾಂಸ್ ಇದ್ದಾರೆ.

English summary

Nirmala Sitharaman, Kiran Mazumdar Shaw In Forbes 2020 List Of 100 Most Powerful Women

Nirmala Sitharaman, Roshni Nadadr and Kiran Mazumdar Shaw In Forbes 2020 list of 100 most powerful women.
Story first published: Wednesday, December 9, 2020, 16:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X