For Quick Alerts
ALLOW NOTIFICATIONS  
For Daily Alerts

ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ: 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆ

|

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೋವಿಡ್-19 ಎರಡನೇ ತರಂಗದಿಂದ ತತ್ತರಿಸಿರುವ ಭಾರತದ ಅರ್ಥವ್ಯವಸ್ಥೆಗೆ ಬೂಸ್ಟ್‌ ನೀಡಲು ಕೆಲವು ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಕೋವಿಡ್ -19 ಪೀಡಿತ ಪ್ರದೇಶಗಳಿಗೆ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.

ಸಾಲ ಖಾತರಿ ಯೋಜನೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ., ಸಾರ್ವಜನಿಕ ಆರೋಗ್ಯಕ್ಕಾಗಿ 23220 ಕೋಟಿ ರೂ., ಇತರ ಕ್ಷೇತ್ರಗಳಿಗೆ 60,000 ಲಕ್ಷ ಕೋಟಿ ರೂ. ಘೋಷಿಸಿದ್ದು, ನಷ್ಟ ಒತ್ತಡವನ್ನು ಕಡಿಮೆ ಮಾಡಲು ತಂತ್ರ ಹೆಣೆದಿದ್ದಾರೆ.

ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆ

ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆ

ಕೋವಿಡ್-19 ಸಾಂಕ್ರಾಮಿಕದಿಂದ ಭಾರತದ ಕೈಗಾರಿಕೆಗಳು ಸಾಕಷ್ಟು ತೊಂದರೆಗೊಳಗಾದ ಕ್ಷೇತ್ರಗಳಲ್ಲಿ ಒಂದಾಗಿದೆ. ಹೀಗಾಗಿ ಇವುಗಳ ಮೇಲಿನ ಒತ್ತಡವನ್ನ ಕಡಿಮೆ ಮಾಡಲು, ಇಸಿಎಲ್‌ಜಿಎಸ್ (ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆ) ಮಿತಿಯನ್ನು ಭಾರತದಾದ್ಯಂತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಏರಿಕೆ ಮಾಡಲಾಗಿದೆ.

ಸರ್ಕಾರ-ಖಾತರಿಪಡಿಸಿದ ಸಾಲದ ಹಣಕಾಸಿನ ನೆರವು ನೀಡುವ ಉದ್ದೇಶದಿಂದ 4.5 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ. ಈ ಮೊದಲು ಇದನ್ನು 3 ಲಕ್ಷ ಕೋಟಿ ರೂ. ನೀಡಲಾಗಿತ್ತು.

 

ಸಾಲದ ಹಾದಿ ಇನ್ಮುಂದೆ ಸುಗಮ

ಸಾಲದ ಹಾದಿ ಇನ್ಮುಂದೆ ಸುಗಮ

ಎಂಎಫ್‌ಐಗಳ ಮೂಲಕ ಸಾಲವನ್ನು ಸುಗಮಗೊಳಿಸಲು ಹಣಕಾಸು ಖಾತರಿ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದರು. ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ಗರಿಷ್ಠ 1.25 ಲಕ್ಷ ರೂ. ಸಾಲದ ಮೇಲಿನ ಬಡ್ಡಿದರವನ್ನು ಎಂಸಿಎಲ್ಆರ್ + ಗರಿಷ್ಠ 2% ಎಂದು ನಿಗದಿಪಡಿಸಲಾಗಿದೆ ಮತ್ತು ಸಾಲದ ಅವಧಿ 3 ವರ್ಷಗಳು. ಹೊಸ ಸಾಲಗಳನ್ನು ನೀಡುವತ್ತ ಸರ್ಕಾರದ ಗಮನ ಹರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯ

ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯ

ಕೋವಿಡ್-19 ಪೀಡಿತ ಪ್ರದೇಶಗಳಿಗೆ ಪರಿಚಯಿಸಲಾದ ಸಾಲ ಖಾತರಿ ಯೋಜನೆಯ ಮೂಲಕ 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯವನ್ನು ಹಣಕಾಸು ಸಚಿವರು ಘೋಷಿಸಿದರು. ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 1 ಲಕ್ಷ ರೂ.ವರೆಗೆ ಸಾಲ 100% ಖಾತರಿಯೊಂದಿಗೆ ಲಭ್ಯವಿರುತ್ತದೆ. ಮರು ವಿತರಣೆ ಪ್ರಕ್ರಿಯೆಯ ನಂತರ, ಮೊದಲ 5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲಾಗುವುದು. ಇದರ ಒಟ್ಟು ಮೊತ್ತ 100 ಕೋಟಿ ರೂ. ಆಗಿದೆ

ಇಪಿಎಫ್ ಬಗ್ಗೆ ಮಹತ್ವದ ಪ್ರಕಟಣೆ

ಇಪಿಎಫ್ ಬಗ್ಗೆ ಮಹತ್ವದ ಪ್ರಕಟಣೆ

ಆತ್ಮನಿರ್ಭಾರ ಭಾರತ್ ರೊಜ್‌ಗಾರ್ ಯೋಜನೆ ಅಡಿಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಇಪಿಎಫ್ ಸಹಾಯವನ್ನು ಮಾರ್ಚ್ 22, 2022 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ 902 ಕೋಟಿ ರೂ.ಗಳ ಲಾಭವನ್ನು ನೀಡಲಾಗಿದ್ದು, 21.42 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ ಎಂದು ಆತ್ಮನಿರ್ಭಾರ ಭಾರತ್ ರೊಜ್‌ಗಾರ್ ಯೋಜನೆ ಕುರಿತು ಸೀತಾರಾಮನ್ ಹೇಳಿದರು.

ಬೆಳೆಗಳ ಖರೀದಿ

ಬೆಳೆಗಳ ಖರೀದಿ

ಕಳೆದ ಹಣಕಾಸು ವರ್ಷದಲ್ಲಿ 389.92 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೋಲಿಸಿದರೆ ಕಳೆದ ಋತುವಿನಲ್ಲಿ ಇದುವರೆಗೆ 432.48 ಲಕ್ಷ ಕೋಟಿ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಲಾಗಿದೆ. 2020-21ರಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅಣ್ಣ ಯೋಜನೆ (ಪಿಎಂಜಿಕೆಎವೈ) ಒಟ್ಟು ವೆಚ್ಚ 1,33,972 ಲಕ್ಷ ಕೋಟಿ ರೂ. ಆಗಿದ್ದು ಯೋಜನೆಯ ಒಟ್ಟು ಅಂದಾಜು ಆರ್ಥಿಕ ಪರಿಣಾಮ 93,869 ಕೋಟಿಗಳು. ಆಹಾರ ಧಾನ್ಯಗಳ ಉಚಿತ ವಿತರಣೆ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ಈಗ ಇದನ್ನು ನವೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ.

ಇನ್ನು ರೈತರಿಗೆ ಕೂಡ ಪರಿಹಾರ ಕ್ರಮಗಳ ಕುರಿತು ಪ್ರಕಟಿಸಿದ್ದು, ಡಿಎಪಿ ಮತ್ತು ಪಿ ಆ್ಯಂಡ್ ಕೆ ರಸಗೊಬ್ಬರಗಳಿಗೆ ಹೆಚ್ಚುವರಿಯಾಗಿ 14,775 ಕೋಟಿ ರೂ. ಈ ಮೊತ್ತದಲ್ಲಿ ಡಿಎಪಿಗೆ ಹೆಚ್ಚುವರಿ 9,125 ಕೋಟಿ ರೂ. ಮತ್ತು ಎನ್‌ಪಿಕೆ ಆಧಾರಿತ ರಸಗೊಬ್ಬರಗಳಿಗೆ 5,650 ಕೋಟಿ ರೂ. ಸಹಾಯಧನ ನೀಡಲಾಗಿದೆ.

 

English summary

Nirmala Sitharaman PC Highlights: 8 Major Economic Relief Measures

FM Nirmala Sitharaman Announced some economic relief measures for all those sectors affected by the second wave of the COVID-19 pandemic in the country.
Story first published: Monday, June 28, 2021, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X