For Quick Alerts
ALLOW NOTIFICATIONS  
For Daily Alerts

ಏರ್‌ ಇಂಡಿಯಾದ ಷೇರುಗಳಲ್ಲಿ ಆಸಕ್ತಿಯಿಲ್ಲ, ಇಂಡಿಗೊ ಓಕೆ :ಕತಾರ್ ಏರ್‌ವೇಸ್

|

ಏರ್ ಇಂಡಿಯಾ ಕಂಪನಿಯ ಷೇರುಗಳನ್ನು ಖರೀದಿಸಲು ಯಾವುದೇ ಆಸಕ್ತಿ ಇಲ್ಲ ಎಂದು ಕತಾರ್‌ ಏರ್‌ವೇಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೇಳಿದ್ದಾರೆ. ಆದರೆ ಇಂಡಿಗೊ ಷೇರನ್ನು ಖರೀದಿಸಲು ಆಸಕ್ತಿ ಇದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಹೂಡಿಕೆದಾರರನ್ನು ಆಕರ್ಷಿಸಲು ಸಿಂಗಾಪುರ ಮತ್ತು ಲಂಡನ್‌ನಲ್ಲಿ ರೋಡ್ ಶೋಗಳನ್ನು ಆಯೋಜಿಸಿದ್ದರ ಮಧ್ಯೆ ಕತಾರ್ ಏರ್‌ವೇಸ್ ಸಿಇಓ ಅಕ್ಬರ್ ಅಲ್‌ ಬಕರ್ ಈ ಹೇಳಿಕೆ ನೀಡಿದ್ದಾರೆ.

ಏರ್‌ ಇಂಡಿಯಾದ ಷೇರುಗಳಲ್ಲಿ ಆಸಕ್ತಿಯಿಲ್ಲ :ಕತಾರ್ ಏರ್‌ವೇಸ್

ಏರ್ ಇಂಡಿಯಾ ಷೇರುಗಳಲ್ಲಿ ಆಸಕ್ತಿಯಿಲ್ಲ ಎಂದಿದ್ದ ಕತಾರ್‌ ಏರ್‌ವೇಸ್ ಸಿಇಓ ಇಂಡಿಗೊ ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ. ಆದರೆ ಇಂಡಿಗೊ ಷೇರನ್ನು ಖರೀದಿಸಲು ಆಸಕ್ತಿಯಿದ್ದರೂ ಖರೀದಿಗೆ ಇದು ಸೂಕ್ತ ಸಮಯವಲ್ಲ ಎಂದಿದ್ದಾರೆ. ಪ್ರವರ್ತಕರ ನಡುವಿನ ವಿವಾದವನ್ನು ಬಗೆಹರಿಸಬೇಕಾಗಿರುವುದರಿಂದ ಇಂಡಿಗೊ ಷೇರು ಖರೀದಿಗೆ ಈಗ ಸೂಕ್ತ ಕಾಲವಲ್ಲ ಎಂದು ಕತಾರ್ ಏರ್‌ವೇಸ್ ತಿಳಿಸಿದೆ.

ಗುರುವಾರ (ನವೆಂಬರ್ 7) ಕತಾರ್ ಏರ್‌ವೇಸ್ ಜೊತೆಗೆ ಇಂಡಿಗೊ ಏಕಮುಖ ಕೋಡ್ ಷೇರು ಒಪ್ಪಂದಕ್ಕೆ ಸಹಿ ಹಾಕಿತು. ಈ ಮೂಲಕ ಕತಾರ್ ಏರ್‌ವೇಸ್ ಇಂಡಿಗೊ ವಿಮಾನದಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಿಗೆ ಸೀಟನ್ನು ಕಾಯ್ದಿರಿಸಬಹುದು.

ದೇಶೀಯ ವಿಮಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಶೇಕಡಾ 48ರಷ್ಟು ಪಾಲನ್ನು ಹೊಂದಿರುವ ಇಂಡಿಗೊ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.

English summary

No Interest In Buying Stake In Air India,Only IndiGo

Qatar airways has no interest in buying stake in Air india. Interested in buying stake in IndiGo said Qatar Airways CEO
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X