For Quick Alerts
ALLOW NOTIFICATIONS  
For Daily Alerts

ಹೆಚ್ಚುತ್ತಿರುವ ಕೊರೊನಾವೈರಸ್: ಮಹತ್ವದ ನಿರ್ಧಾರ ಕೈಗೊಂಡ ಉಬರ್

|

ಬೆಂಗಳೂರು: ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರಸಿದ್ದ ಟ್ಯಾಕ್ಸಿ ಸಂಸ್ಥೆ ಉಬರ್ ತನ್ನ ಸೇವೆಯಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಘೋಷಿಸಿದೆ.

 

ಇದರ ಪ್ರಯುಕ್ತ 'ನೋ ಮಾಸ್ಕ್ ನೋ ರೈಡ್' ಅಭಿಯಾನವನ್ನು ಆರಂಭಿಸಿದೆ. ಅಂದರೆ, ಮಾಸ್ಕ್ ಧರಿಸದೇ ಬರುವವರಿಗೆ ಟ್ಯಾಕ್ಸಿ ಸೇವೆ ಲಭ್ಯವಿರುವುದಿಲ್ಲ. ಅಷ್ಟೇ ಅಲ್ಲದೇ ಚಾಲಕ ಕೂಡ ಕಡ್ಡಾಯವಾಗಿ ಮಾಸ್ಕ ಧರಿಸರಬೇಕು ಎಂಬ ನಿಯಮವನ್ನು ಅನಿರ್ದಿಷ್ಟವಾಗಿ ಮುಂದುವರೆಸಿ ಆದೇಶಿಸಿದೆ ಉಬರ್ ಕಂಪನಿ. ಇದಕ್ಕಾಗಿ ಹೊಸ ಪ್ರಚಾರ ವಿಡಿಯೋ ಒಂದನ್ನು ಉಬರ್ ಬಿಡುಗಡೆ ಮಾಡಿದೆ.

 

ಉಬರ್ ನಿಂದ ಭಾರತದಲ್ಲಿ ಶೇಕಡಾ 25ರಷ್ಟು ಸಿಬ್ಬಂದಿಗೆ ಪಿಂಕ್ ಸ್ಲಿಪ್ಉಬರ್ ನಿಂದ ಭಾರತದಲ್ಲಿ ಶೇಕಡಾ 25ರಷ್ಟು ಸಿಬ್ಬಂದಿಗೆ ಪಿಂಕ್ ಸ್ಲಿಪ್

ನಮ್ಮ' ಮಾಸ್ಕ್ ಇಲ್ಲ, ಸವಾರಿ ಇಲ್ಲ 'ನೀತಿಯನ್ನು ವಿಸ್ತರಿಸುವುದು ಸರಿಯಾದ ಕೆಲಸ. ಒಬ್ಬರಿಗೊಬ್ಬರು ಸುರಕ್ಷಿತವಾಗಿರಲು ನಾವೆಲ್ಲರೂ ಪಾತ್ರವಹಿಸುತ್ತೇವೆ. ಉಬರ್ ಬಳಸುವ ಪ್ರತಿಯೊಬ್ಬರಿಗೂ ಸ್ಪಷ್ಟ ಸಂದೇಶವನ್ನು ಕಳುಹಿಸಲು ನಾವು ಬಯಸುತ್ತೇವೆ ಎಂದು ಉಬರ್ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಚಾಲಕ ಮತ್ತು ಸವಾರ ಮಾಸ್ಕ್ ಜೊತೆ ಸೆಲ್ಪಿ ತೆಗೆದು ಅಪ್ಲೋಡ್ ಮಾಡುವುದು ಕಡ್ಡಾಯ ಎಂದಿದೆ. ಕೊರೊನಾವೈರಸ್ ಹರಡುವುದನ್ನು ಕಂಪನಿ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಹೆಚ್ಚುತ್ತಿರುವ ಕೊರೊನಾವೈರಸ್: ಮಹತ್ವದ ನಿರ್ಧಾರ ಕೈಗೊಂಡ ಉಬರ್

ಜಾಗತಿವಾಗಿ ಕೊರೊನಾವೈರಸ್ ಹಾವಳಿ ಮುಂದುವರೆದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 10.7 ಮಿ ಕ್ಕೆ ಏರಿಕೆಯಾಗಿದೆ. 5.15 ಲಕ್ಷ ಜನ ಬಲಿಯಾಗಿದ್ದಾರೆ. 5.44 ಮಿ ಜನ ಗುಣಮುಖರಾಗಿದ್ದಾರೆ. ಭಾರತದಲ್ಲಿ 6.05 ಲಕ್ಷ ಜನ ಮಾರಕ ಸೋಂಕು ಪೀಡಿತರಾಗಿದ್ದು, 17,834 ಜನ ಬಲಿಯಾಗಿದ್ದಾರೆ. 3.5 ಲಕ್ಷ ಜನ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ 15,242 ಜನ ಸೋಂಕಿಗೆ ತುತ್ತಾಗಿದ್ದು, 246 ಜನ ಬಲಿಯಾಗಿದ್ದಾರೆ. 7,918 ಜನ ಗುಣ ಮುಖರಾಗಿದ್ದಾರೆ.

Read more about: uber ಉಬರ್
English summary

No Mask. No Ride: Uber Will Require Drivers and Passengers to Wear Face Masks

Coronavirus Outbreak: No Mask No Raid Orders By Uber
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X